ತುಮಕೂರು: ಜಿಲ್ಲೆಯಲ್ಲಿಂದು ಮಹಾಮಾರಿ ಕೊರೊನಾ ಸೋಂಕಿಗೆ ನಾಲ್ವರು ಬಲಿಯಾಗಿದ್ದಾರೆ. ಹೊಸದಾಗಿ 93 ಕೋವಿಡ್ ಪಾಸಿಟಿವ್ ಪ್ರಕರಣಗಳು ಪತ್ತೆಯಾಗಿವೆ. ಇದರಿಂದಾಗಿ ಜಿಲ್ಲೆಯಲ್ಲಿ ಸೋಂಕಿತರ ಸಂಖ್ಯೆ 3,211 ಮತ್ತು ಮೃತರ ಸಂಖ್ಯೆ 96 ಕ್ಕೆೇರಿದೆ.
ಇಂದು ತುಮಕೂರು ತಾಲೂಕಿನಲ್ಲಿ 31, ಮಧುಗಿರಿ 10, ಕುಣಿಗಲ್ ಮತ್ತು ಪಾವಗಡದಲ್ಲಿ ತಲಾ 9, ತಿಪಟೂರು 8, ಕೊರಟಗೆರೆ 7, ಚಿಕ್ಕನಾಯಕನಹಳ್ಳಿ 6, ತುರುವೇಕೆರೆ 5, ಗುಬ್ಬಿ ತಾಲೂಕಿನಲ್ಲಿ 4, ಶಿರಾ ತಾಲೂಕಿನಲ್ಲಿ 3 ಸೋಂಕು ಪ್ರಕರಣಗಳು ಪತ್ತೆಯಾಗಿವೆ.
ಇನ್ನು ಜಿಲ್ಲೆಯಲ್ಲಿ 2075 ಸೋಂಕಿತರು ಸಂಪೂರ್ಣ ಗುಣಮುಖರಾಗಿ ಆಸ್ಪತ್ರೆಯಿಂದ ಬಿಡುಗಡೆ ಆಗಿದ್ದಾರೆ. ಸದ್ಯ 1040 ಸಕ್ರಿಯ ಪ್ರಕರಣಗಳಿಗೆ ಚಿಕಿತ್ಸೆ ಮುಂದುವರೆದಿದ್ದು, 13 ಮಂದಿ ಐಸಿಯುನಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.
ಈವರೆಗೆ ಜಿಲ್ಲೆಯಲ್ಲಿ ಬರೋಬ್ಬರಿ 52,926 ಜನರ ಗಂಟಲು ದ್ರವವನ್ನು ಪರೀಕ್ಷೆಗೊಳಪಡಿಸಿದ್ದು, 45,662 ಮಂದಿಯ ವರದಿ ನೆಗೆಟಿವ್ ಕಂಡುಬಂದಿದೆ.