ತುಮಕೂರು: ಜಮೀನಿನ ದಾನ ಪತ್ರವನ್ನು ರಿಜಿಸ್ಟರ್ ಮಾಡಲು ಲಂಚಕ್ಕಾಗಿ ಬೇಡಿಕೆ ಇಟ್ಟಿದ್ದ ಮಧುಗಿರಿ ಸಬ್ ರಿಜಿಸ್ಟರ್ ಮೇಲಿನ ಆರೋಪ ಸಾಬೀತಾದ ಹಿನ್ನೆಲೆಯಲ್ಲಿಆರೋಪಿಗೆ ಕೋರ್ಟ್ 4 ವರ್ಷ ಕಠಿಣ ಶಿಕ್ಷೆ ವಿಧಿಸಿದೆ.
ಸಬ್ ರಿಜಿಸ್ಟರ್ ರಾಮಚಂದ್ರಯ್ಯ ಎಂಬುವರಿಗೆ ತುಮಕೂರಿನ 7ನೆ ಜಿಲ್ಲಾ ಮತ್ತು ಸತ್ರ ನ್ಯಾಯಾಲಯ 4 ವರ್ಷ ಕಠಿಣ ಸಜೆ ಹಾಗೂ 8ಸಾವಿರ ರೂ. ದಂಡ ವಿಧಿಸಿ ಶುಕ್ರವಾರ ತೀರ್ಪು ನೀಡಿದೆ.
ಮಧುಗಿರಿ ತಾಲೂಕು ಚಿಕ್ಕ ಹೊಸಳ್ಳಿ ಗ್ರಾಮದ ವ್ಯಕ್ತಿಯೊಬ್ಬರ ಜಮೀನಿನ ದಾನ ಪತ್ರವನ್ನು ರಿಜಿಸ್ಟರ್ ಮಾಡಲು ಸಬ್ ರಿಜಿಸ್ಟರ್ 4000 ಲಂಚಕ್ಕಾಗಿ ಬೇಡಿಕೆ ಇರಿಸಿದ್ದರು. ಈ ಸಂಬಂಧ ಭ್ರಷ್ಟಾಚಾರ ನಿಗ್ರಹ ದಳದ ಡಿವೈಎಸ್ಪಿ ರಘುಕುಮಾರ್ ಪ್ರಕರಣ ದಾಖಲಿಸಿಕೊಂಡು ಆರೋಪಿ ವಿರುದ್ಧ ನ್ಯಾಯಾಲಯಕ್ಕೆ ಚಾರ್ಜ್ಶೀಟ್ ಸಲ್ಲಿಸಿದ್ದರು.
ಈ ಸಂಬಂಧ ವಿಚಾರಣೆ ನಡೆಸಿದ ನ್ಯಾಯಾಧೀಶ ಎಸ್ ಸುಧೀಂದ್ರ ನಾಥ್ ಆರೋಪಿ ಮೇಲಿನ ಆರೋಪ ಸಾಬೀತಾದ ಹಿನ್ನೆಲೆಯಲ್ಲಿ ಶಿಕ್ಷೆ ವಿಧಿಸಿ ತೀರ್ಪು ನೀಡಿದ್ದಾರೆ.
ಇದನ್ನು ಓದಿ: ತುಮಕೂರು ಮಹಿಳೆ ಅತ್ಯಾಚಾರ, ಕೊಲೆ.. 26 ವರ್ಷಗಳ ಬಳಿಕ ಅಪರಾಧಿಗೆ ಜೀವಾವಧಿ ಶಿಕ್ಷೆ..