ಕಲಬುರಗಿ: ಕೊರೊನಾ ಸೋಂಕಿಗೆ ಹೆದರುವುದು ಅಥವಾ ಅಲಕ್ಷ್ಯ ಮಾಡುವುದನ್ನು ಮಾಡದೇ ಎಚ್ಚರಿಕೆಯಿಂದ ಚಿಕಿತ್ಸೆ ಪಡೆದರೆ ಖಂಡಿತ ರೋಗದಿಂದ ಗುಣಮುಖರಾಗಬಹುದು ಎಂದು ಕೋವಿಡ್ ಗೆದ್ದು ಬಂದ ವೈದ್ಯಾಧಿಕಾರಿ ಡಾ. ಸಂಧ್ಯಾರಾಣಿ ಮನದಾಳದ ಮಾತು ಬಿಚ್ಚಿಟ್ಟಿದ್ದಾರೆ.
ಈಟಿವಿ ಭಾರತದೊಂದಿಗೆ ಮಾತನಾಡಿದ ಅವರು, ಮೊದಲು ನಾವು ಪಾಸಿಟಿವ್ ಮೈಂಡ್ ಇಟ್ಟುಕೊಂಡಿರಬೇಕು. ಅಲಕ್ಷ್ಯ ಮಾಡದೇ ಎಚ್ಚರ ವಹಿಸಬೇಕು, ಮನೆಯಲ್ಲಿಯೇ ಇದ್ದು ಚಿಕಿತ್ಸೆ ಪಡೆಯುವವರು ಹೋಮ್ ಐಸೋಲೇಷನ್ ಬಗ್ಗೆ ತಿಳಿದುಕೊಂಡಿರಬೇಕು. ಬಿಪಿ ಶುಗರ್ ಇರುವವರಿಗೆ ಸೋಂಕು ತಗುಲಿದಾಗ ಆಸ್ಪತ್ರೆಗೆ ಸೇರಿ ಚಿಕಿತ್ಸೆ ಪಡೆಯುವು ಉತ್ತಮ.
ಮನೆಯಲ್ಲಿಯೇ ಚಿಕಿತ್ಸೆ ಪಡೆಯುವವರು ವೈದ್ಯರೊಂದಿಗೆ ಸಂಪರ್ಕದಲ್ಲಿರಬೇಕು. ನಿತ್ಯ ಟೆಂಪರೇಚರ್, ಪಲ್ಸ್ ಆಕ್ಷಿಮೀಟರ್ ದಿಂದ ಸ್ಯಾಚುರೇಶನ್ ಲೇವೆಲ್ ಚಕ್ ಮಾಡ್ತಿರಬೇಕು. ಒಳ್ಳೆ ಪ್ರೋಟಿನ್‌ಯುಕ್ತ ಆಹಾರ ಸೇವನೆ ಮಾಡಬೇಕು. ಹೆಚ್ಚೆಚ್ಚು ನೀರು ಸೇವನೆ ಮಾಡಬೇಕು. ಬಿಸಿ ನೀರು ಸೇವನೆ ಅತ್ಯುತ್ತಮ. ಕಸಾಯಿ ಕುಡಿಯಬೇಕು. ನಿಯಮಿತವಾಗಿ ವ್ಯಾಯಾಮ ಮಾಡಬೇಕು ಎಂದು ಸಲಹೆ ನೀಡಿದ್ದಾರೆ.