ಗಂಗಾವತಿ: ಅಜ್ಜ ಹಾಗೂ ಅಜ್ಜಿಯ ಜೊತೆಗೆ ತೀರ್ಥಯಾತ್ರೆಗೆ ಬಂದಿದ್ದ ಬಾಲಕನೊಬ್ಬ ಕಾಲುಜಾರಿ ಸರೋವರದಲ್ಲಿ ಬಿದ್ದು ಸಾವನ್ನಪ್ಪಿದ ಘಟನೆ ತಾಲ್ಲೂಕಿನ ಆನೆಗೊಂದಿ ಸಮೀಪದ ಪಂಪಾಸರೋವರದಲ್ಲಿ ಶನಿವಾರ ಸಂಜೆ ಸಂಭವಿಸಿದೆ.
![10 year old boy drown, A 10 year old boy drown in Pumpa Sarovara, A 10 year old boy drown in Pumpa Sarovara at Koppal, 10 ವರ್ಷದ ಬಾಲಕ ಸಾವು, ಪಂಪಾ ಸರೋವರದಲ್ಲಿ ಮುಳುಗಿ 10 ವರ್ಷದ ಬಾಲಕ ಸಾವು, ಕೊಪ್ಪಳದ ಪಂಪಾ ಸರೋವರದಲ್ಲಿ ಮುಳುಗಿ 10 ವರ್ಷದ ಬಾಲಕ ಸಾವು,](https://etvbharatimages.akamaized.net/etvbharat/prod-images/5756972_boy.jpg)
ಮೃತ ಬಾಲಕ ಮಧ್ಯಪ್ರದೇಶದ ಶಿವಪುರಿ ಜಿಲ್ಲೆಯ ಪರ್ವತಸಿಂಗ್ ಮಗನಾದ ಅಂಕಿತ್ ದಖಡ್ (10) ಎಂದು ಗುರುತಿಸಲಾಗಿದೆ. ತೀರ್ಥಯಾತ್ರೆಯ ಉದ್ದೇಶಕ್ಕೆ ತಾತ ಜಾನಕಿ ಲಾಲ್ ಹಾಗೂ ಅಜ್ಜಿ ಕಾಂಚನಾ ಜೊತೆ ಈ ಅಂಕಿತ್ ಬಂದಿದ್ದ. ಸರೋವರದ ಮೆಟ್ಟಿಲ ಮೇಲಿಳಿದು ನೀರನ್ನು ತಲೆಯ ಮೇಲೆ ಪ್ರೋಕ್ಷಣೆ ಮಾಡಿಕೊಳ್ಳುವ ಸಂದರ್ಭದಲ್ಲಿ ಕಾಲು ಜಾರಿ ಸರೋವರಕ್ಕೆ ಬಿದ್ದಿದ್ದಾನೆ ಎನ್ನಲಾಗಿದೆ.
ಸುಮಾರು ಎರಡು ಗಂಟೆಗೂ ಹೆಚ್ಚು ಕಾಲ ಹುಡಿಕಿದ ಬಳಿಕ ಬಾಲಕ ಶವ ಪತ್ತೆಯಾಗಿದೆ. ಅಂಕಿತ್ ಮೃತದೇಹ ಹೊರಬರುತ್ತಿದ್ದಂತೆ ಅಜ್ಜ-ಅಜ್ಜಿಯರ ರೋದನ ಮುಗಿಲು ಮುಟ್ಟಿತ್ತು. ಸ್ಥಳಕ್ಕೆ ತಹಶೀಲ್ದಾರ್ ಚಂದ್ರಕಾಂತ್ ಭೇಟಿ ನೀಡಿದ್ದರು. ಪೊಲೀಸ್ ಹಾಗೂ ಕಂದಾಯ ಇಲಾಖೆಯ ಸಿಬ್ಬಂದಿ ಸ್ಥಳದಲ್ಲಿದ್ದು, ಬಾಲಕನ ಮೃತ ದೇಹದ ಪತ್ತೆಗೆ ಶ್ರಮಿಸಿದರು.