ETV Bharat / state

ಮೂಲ ಸೌಕರ್ಯಗಳಿಂದ ವಂಚಿತವಾದ ಶಿವಮೊಗ್ಗ ಜಿಲ್ಲೆಯ ರುದ್ರಭೂಮಿಗಳು

ಶಿವಮೊಗ್ಗ ಮಹಾನಗರ ಪಾಲಿಕೆ ವ್ಯಾಪ್ತಿಯಲ್ಲಿ ಐದಾರು ಹಿಂದೂ ರುದ್ರಭೂಮಿಗಳಿವೆ. ಇದರಲ್ಲಿ ಶರಾವತಿ ನಗರದ ರುದ್ರಭೂಮಿಯು ಭಾರೀ ನಿರ್ಲಕ್ಷ್ಯಕ್ಕೆ ಒಳಗಾದ ರುದ್ರಭೂಮಿಯಾಗಿದೆ. ಉಳಿದ ರುದ್ರಭೂಮಿಗಳು ಪರವಾಗಿಲ್ಲ ಎನಿಸಿದರೂ ಸೂಕ್ತ ಸೌಲಭ್ಯ ಒದಗಿಸಬೇಕಿದೆ.

what is the condition of shimogga burial grounds ?
ಮೂಲಭೂತ ಸೌಕರ್ಯಗಳಿಂದ ವಂಚಿತವಾಗಿವೆ ಶಿವಮೊಗ್ಗ ಜಿಲ್ಲೆಯ ರುದ್ರಭೂಮಿಗಳು
author img

By

Published : Apr 20, 2021, 3:44 PM IST

Updated : Apr 20, 2021, 4:33 PM IST

ಶಿವಮೊಗ್ಗ: ಜಿಲ್ಲೆಯ ರುದ್ರಭೂಮಿಗಳು ಮೂಲ ಸೌಕರ್ಯಗಳಿಂದ ವಂಚಿತವಾಗಿವೆ. ಇಲ್ಲಿಗೆ ಬಂದವರು ಆಡಳಿತ ನಡೆಸುವವರಿಗೆ ಹಿಡಿಶಾಪ ಹಾಕಿಯೇ ಹೋಗುವ ದುಸ್ಥಿತಿ ನಿರ್ಮಾಣವಾಗಿವೆ.

ಜಿಲ್ಲೆಯ ರುದ್ರಭೂಮಿ ಕುರಿತು ಪ್ರತಿಕ್ರಿಯೆ

ಶಿವಮೊಗ್ಗ ಮಹಾನಗರ ಪಾಲಿಕೆ ವ್ಯಾಪ್ತಿಯಲ್ಲಿ ಐದಾರು ಹಿಂದೂ ರುದ್ರಭೂಮಿಗಳಿವೆ. ಇದರಲ್ಲಿ ಶರಾವತಿ ನಗರದ ರುದ್ರಭೂಮಿಯು ಅತ್ಯಂತ ನಿರ್ಲಕ್ಷ್ಯಕ್ಕೆ ಒಳಗಾದ ರುದ್ರಭೂಮಿಯಾಗಿದೆ. ಇದು ನಗರದ ಹೃದಯ ಭಾಗದಲ್ಲಿದೆ. ಆದರೂ ಇಲ್ಲಿನ ಅಭಿವೃದ್ಧಿ ಮಾತ್ರ ಮರೀಚಿಕೆಯಾಗಿದೆ.

ಮೂಲ ಸೌಕರ್ಯಗಳಿಲ್ಲದ ರುದ್ರಭೂಮಿ:

ಇಲ್ಲಿ ಒಂದು ಕೊಳವೆ ಬಾವಿ ಬಿಟ್ಟರೆ ಬೇರೆ ಯಾವುದೇ ಮೂಲ ಸೌಕರ್ಯಗಳಿಲ್ಲ.‌ ಇಲ್ಲಿಗೆ ಕಾಲಿಟ್ಟರೆ ಸಾಕು ಭಯದಿಂದ ಓಡಿ ಹೋಗುವ ಸ್ಥಿತಿ ಇದೆ. ಇಲ್ಲಿ ಸತ್ತವರ ಸಂಬಂಧಿಗಳು ಗೋರಿಗಳನ್ನು ಕಟ್ಟಿ ಅಂದವನ್ನು ಹಾಳುಗೆಡವಿದ್ದಾರೆ. ಇಲ್ಲಿ ಸಂಜೆಯಾದ್ರೆ ಕನಿಷ್ಠ ಒಂದು ವಿದ್ಯುತ್ ದೀಪದ ಸೌಲಭ್ಯವಿಲ್ಲ. ಶವಗಳನ್ನು ತೆಗೆದುಕೊಂಡು ಹೋಗಲು ಸೂಕ್ತ ದಾರಿ ಸಹ ಇಲ್ಲದಂತಾಗಿದೆ. ಈ ರುದ್ರಭೂಮಿಯಲ್ಲಿ‌ ಓಡಾಡಲು ಜಾಗವಿಲ್ಲ. ಶವ ದಹನ ಮಾಡುವ ಒಲೆಗಳು ಸರಿಯಾಗಿಲ್ಲ.‌ ಒಲೆಗಳು ಸುಟ್ಟು ತೂತು ಬಿದ್ದಿವೆ. ಶವ ಸಂಸ್ಕಾರಕ್ಕೆ ಬರುವವರಿಗೆ ಕನಿಷ್ಠ ಶೌಚಾಲಯವಿಲ್ಲ. ರುದ್ರಭೂಮಿ ಕಸದಿಂದ ತುಂಬಿ ಹೋಗಿದೆ.

ರುದ್ರಭೂಮಿ ನಿರ್ವಹಣೆಗೆ ಸಮಿತಿಯ ಅಗತ್ಯ:

ಪಾಲಿಕೆ ಮಾಜಿ ಸದಸ್ಯ ಪಾಲಾಕ್ಷ ತಮ್ಮ ಅವಧಿಯಲ್ಲಿ 3.50 ಲಕ್ಷ ರೂ. ಅನುದಾನ ನೀಡಿ ವಾಕಿಂಗ್ ಪಾಥ್, ನಾಲ್ಕೈದು ವಿದ್ಯುತ್ ದೀಪ ಹಾಕಿಸಿದ್ದರು. ‌ಆದರೆ ಅವುಗಳ ನಿರ್ವಹಣೆ ಇಲ್ಲದೆ ಎಲ್ಲವು ಹಾಳಾಗಿವೆ. ರುದ್ರಭೂಮಿಯು ಪೋಲಿಗಳ ತಾಣವಾಗಿದೆ. ಇಲ್ಲಿ ಶವವನ್ನು ಹೂಳಲು ಗುಂಡಿ ತೆಗೆಯಲು ಸೇರಿದಂತೆ ಇತರೆ ಕಾರ್ಯಗಳಿಗೆ ಹೆಚ್ಚಿನ ದರ ಪಡೆಯುತ್ತಾರೆ ಎಂಬ ದೂರಿದೆ. ಇಲ್ಲಿಗೆ ಒಂದು ಸಮಿತಿ ರಚನೆ ಮಾಡಿ ರುದ್ರಭೂಮಿ ನಿರ್ವಹಣೆ ಮಾಡುವ ಅವಶ್ಯಕತೆ ಇದೆ.

ಗುಡ್ಡೆಕಲ್ಲು‌ ಮತ್ತು ಮಂಡ್ಲಿಯ ರುದ್ರಭೂಮಿ:

ಗುಡ್ಡೆಕಲ್ಲಿನ‌ ರುದ್ರಭೂಮಿಯು ಹೊಳೆಹೊನ್ನೂರು ರಸ್ತೆಯಲ್ಲಿದೆ. ಇಲ್ಲಿ‌ ನಿರ್ವಹಣೆಗೆ ಸಮಿತಿ ಇದ್ದು, ಇದು‌ ಎಲ್ಲವನ್ನು‌ ನಿರ್ವಹಿಸುತ್ತದೆ. ಅದೇ ರೀತಿ ಮಂಡ್ಲಿಯಲ್ಲಿ ವೀರಶೈವ ರುದ್ರಭೂಮಿ ಇದೆ. ಇದನ್ನು ಸಹ ಸಮಿತಿ‌ ನಿರ್ವಹಿಸುತ್ತಿದೆ.

ರಾಜೀವ್ ಗಾಂಧಿ ನಗರದ ರೋಟರಿ ಚಿತಾಗಾರ: ತುಂಗಾ ನದಿ ದಂಡೆ ಮೇಲಿರುವ ರೋಟರಿ‌‌ ಚಿತಾಗಾರ ಜಿಲ್ಲೆಯ ಮಟ್ಟಿಗೆ ಹೋಲಿಸಿದರೆ ಉತ್ತಮವಾಗಿದೆ ಎನ್ನಬಹುದು. ಇದನ್ನು‌ ಮಹಾನಗರ ಪಾಲಿಕೆಯವರು ರಚನೆ ಮಾಡಿದ್ದಾರೆ. ಆದರೆ ಇದರ ನಿರ್ವಹಣೆಯನ್ನು ರೋಟರಿ ವಹಿಸಿಕೊಂಡಿದೆ. ಇಲ್ಲಿ ಅನಿಲದ ಚಿತಗಾರವಿದೆ. ಇಲ್ಲಿ ಗ್ಯಾಸ್ ಮೂಲಕ ಶವಗಳನ್ನು ದಹನ ಮಾಡಲಾಗುತ್ತದೆ. ಅಲ್ಲದೇ ಕಟ್ಟಿಗೆಯಲ್ಲಿ ಸಹ‌ ಸುಡಲು ಅವಕಾಶವಿದೆ. ಆದರೆ ಇಲ್ಲಿ ಶವವನ್ನು ಹೊಳಲು ಅವಕಾಶವಿಲ್ಲ.

ಇದನ್ನೂ ಓದಿ: ಕೋವಿಡ್‌ ಎರಡನೇ ಅಲೆ ಎದುರಿಸಲು ಹುಬ್ಬಳ್ಳಿಯ ಕಿಮ್ಸ್ ಸರ್ವ ಸನ್ನದ್ಧ

ರೋಟರಿ ಸಂಸ್ಥೆಯವರು ಇದನ್ನು ಕಳೆದ 20 ವರ್ಷಗಳಿಂದ ನಿರ್ವಹಣೆ ಮಾಡುತ್ತಿದ್ದಾರೆ. ಇಲ್ಲಿ ಶವ ದಹನ ಮಾಡಲು ದರ ನಿಗದಿ ಮಾಡಲಾಗಿದೆ. ಇಲ್ಲಿಗೆ ಶವವನ್ನು ತಂದ್ರೆ ಸುಡಲು ಇವರೇ ಕಟ್ಟಿಗೆಯನ್ನು ನೀಡುತ್ತಾರೆ. ಇಲ್ಲಿನ ನೌಕರರು ಶವವನ್ನು ಸುಡಲು ಸಹಾಯ ಮಾಡುತ್ತಾರೆ. ಇಲ್ಲಿ‌ ಶಿವ ಧ್ಯಾನದಲ್ಲಿ ಕುಳಿತ ಮೂರ್ತಿಯನ್ನು ರಚನೆ ಮಾಡಲಾಗಿದೆ. ಎಲ್ಲಾ ಶವ ದಹನದ ಮಾಹಿತಿಯನ್ನು ಸಹ ಸಂಗ್ರಹಿಸಿಡಲಾಗುತ್ತದೆ.

ಶಿವಮೊಗ್ಗ ಜಿಲ್ಲೆಯ ರುದ್ರಭೂಮಿಗಳು

ಸದ್ಯ ‌ರೋಟರಿ ಚಿತಗಾರ ಜಿಲ್ಲೆಯ ನಂಬರ್ ಒನ್ ಚಿತಗಾರ ಎಂದ್ರೆ ತಪ್ಪಾಗಲಾರದು. ನಗರದ ಯಾವ ರುದ್ರಭೂಮಿಯು ಒತ್ತುವರಿಯಾಗಿಲ್ಲ. ನಿರ್ವಹಣೆಯಿಂದ ವಂಚಿತವಾಗಿರುವ ರುದ್ರಭೂಮಿಗಳ ನಿರ್ವಹಣೆ ಆಗಬೇಕಿದೆ.

Last Updated : Apr 20, 2021, 4:33 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.