ಶಿವಮೊಗ್ಗ: ಹಗಲು ವೇಳೆ ಮನೆಗಳ ಕಳ್ಳತನ ಮಾಡುತ್ತಿದ್ದ ಇಬ್ಬರನ್ನು ಶಿರಾಳಕೊಪ್ಪ ಪೊಲೀಸರು ಬಂಧಿಸಿದ್ದಾರೆ.
ಏಪ್ರಿಲ್ ತಿಂಗಳಲ್ಲಿ ಶಿಕಾರಿಪುರ ತಾಲೂಕು ಶಿರಾಳಕೊಪ್ಪ ಪೊಲೀಸ್ ಠಾಣೆ ವ್ಯಾಪ್ತಿಯ ತಂಡಗುಂಡ ಗ್ರಾಮದ ಜೋಸ್ಟೀನ್ ದಂಡಿನವರ ಮನೆಯ ಹಂಚು ತೆಗೆದು ಕಳ್ಳತನ ಮಾಡಲಾಗಿತ್ತು. ಈ ಕುರಿತು ಪ್ರಕರಣ ದಾಖಲಿಸಿಕೊಂಡಿದ್ದ ಶಿರಾಳಕೊಪ್ಪ ಪೊಲೀಸರು ತರೀಕೆರೆ ಬಳಿಯ ಶಿವನಿ ಗ್ರಾಮದ ಸ್ವಾಮಿ ಅಲಿಯಾಸ್ ನವೀನ್(27) ಹಾಗೂ ಹಾವೇರಿ ಜಿಲ್ಲೆಯ ಬ್ಯಾಡಗಿಯ ಯಲ್ಲಪ್ಪ ಎಂಬುವರನ್ನ ಬಂಧಿಸಲಾಗಿದೆ.
ಬಂಧಿತರಿಂದ 220 ಗ್ರಾಂ ಚಿನ್ನಾಭರಣ, 100 ಗ್ರಾಂ ಬೆಳ್ಳಿ ಆಭರಣಗಳನ್ನು ಹಾಗೂ ಒಂದು ಬೈಕ್ ಅನ್ನು ವಶಕ್ಕೆ ಪಡೆಯಲಾಗಿದೆ. ಬಂಧಿತರು ಅನೇಕ ಮನೆಗಳ್ಳತನ ಪ್ರಕರಣದಲ್ಲಿ ಭಾಗಿಯಾಗಿದ್ದರು.