ಶಿವಮೊಗ್ಗ: ಅರುಣ್ ಸಿಂಗ್ ರಾಜ್ಯಕ್ಕೆ ಬಂದಿರುವುದು ಸಂಘಟನಾ ಪ್ರವಾಸವೇ ಹೊರತು ಬೇರೇನೂ ಅಲ್ಲಾ ಎಂದು ಸಂಸದ ತೇಜಸ್ವಿ ಸೂರ್ಯ ಸ್ಪಷ್ಟಪಡಿಸಿದ್ದಾರೆ.
ನಗರದಲ್ಲಿಂದು ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಅರುಣ್ ಸಿಂಗ್ ಅವರು ರಾಜ್ಯದ ಪ್ರಭಾರಿಗಳು, ಹಾಗಾಗಿ ರಾಜ್ಯದಲ್ಲಿ ಪ್ರವಾಸ ಮಾಡುತ್ತಾರೆ ಎಂದರು.
ಸರ್ಕಾರದಿಂದ ಶಾಲೆ ಆರಂಭದ ನಿರ್ಧಾರ ಕುರಿತು ಪ್ರತಿಕ್ರಿಯಿಸಿದ ಸೂರ್ಯ, ಸರ್ಕಾರ ತಜ್ಞರ ಸಮಿತಿಯನ್ನು ನೇಮಕ ಮಾಡಿದೆ. ಕಳೆದ ಒಂದೂವರೆ ವರ್ಷದಲ್ಲಿ ಕೋವಿಡ್ ಪರಿಸ್ಥಿತಿಯಿಂದ ಶಾಲೆಗಳು ಮುಚ್ಚಿದ್ದವು. ಇದರಿಂದ ಸ್ನೇಹಿತರ ಒಡನಾಟ, ಕೌಶಲ್ಯಗಳಿಂದ ಮಕ್ಕಳು ವಂಚಿತರಾಗಿದ್ದರು. ಹಾಗಾಗಿ ನಾವೆಷ್ಟೇ ಆನ್ಲೈನ್ ಕ್ಲಾಸ್ ಮಾಡಿದರೂ, ಆಫ್ಲೈನ್ ಕ್ಲಾಸ್ನಲ್ಲಿ ಕಲಿಯೋದು ತುಂಬಾ ಇರುತ್ತೆ. ಶಿಕ್ಷಣದ ಜೊತೆಗೆ ಮಕ್ಕಳ ಸುರಕ್ಷತೆಯ ಬಗ್ಗೆ ತಜ್ಞರ ಸಮಿತಿ ಸಲಹೆಗಳನ್ನು ನೀಡಲಿದೆ. ಇದರ ಆಧಾರದ ಮೇಲೆ ಸರ್ಕಾರ ನಿರ್ಧಾರ ಕೈಗೊಂಡಿದೆ ಎಂದು ಹೇಳಿದರು.
ಓದಿ: ಸಚಿವ ಪ್ರಭು ಚವ್ಹಾಣ್ಗೆ ಮುತ್ತಿಗೆ ಹಾಕಲು ಯತ್ನ: ದಲಿತ ಸಂಘಟನೆ ಕಾರ್ಯಕರ್ತರ ಬಂಧನ