ETV Bharat / state

ವಿದ್ಯಾರ್ಥಿನಿ ಜೊತೆ ಶಿಕ್ಷಕ ಅನುಚಿತ ವರ್ತನೆ ಆರೋಪ: ಪೋಕ್ಸೊ‌ ಕಾಯ್ದೆಯಡಿ ಶಿಕ್ಷಕನ ಬಂಧನ! - Teacher misconduct with student in Shivamogga,

ವಿದ್ಯಾರ್ಥಿನಿಗೆ ಅಶ್ಲೀಲ ವಿಡಿಯೋ ನೋಡಿ ಮುತ್ತು ಕೊಡು ಎಂದು ಅನುಚಿತವಾಗಿ ವರ್ತಿಸುತ್ತಿದ್ದ ಶಿಕ್ಷಕನ್ನು ಶಿವಮೊಗ್ಗ ಪೊಲೀಸರು ಬಂಧಿಸಿದ್ದಾರೆ.

ಸಾಂದರ್ಭಿಕ ಚಿತ್ರ
author img

By

Published : Nov 2, 2019, 1:56 PM IST

ಶಿವಮೊಗ್ಗ: ವಿದ್ಯಾರ್ಥಿನಿಗೆ ಶಾಲಾ ಪಾಠ ಹೇಳಿ ಕೊಡಬೇಕಾದ ಶಿಕ್ಷಕ ಅನುಚಿತವಾಗಿ ವರ್ತಿಸಿ ಪೊಲೀಸರ ಅತಿಥಿಯಾಗಿರುವ ಘಟನೆ ಶಿವಮೊಗ್ಗದಲ್ಲಿ ನಡೆದಿದೆ.

ಸರ್ಕಾರಿ ಶಾಲೆಯ 8 ನೇ ತರಗತಿ ವಿದ್ಯಾರ್ಥಿನಿ ಜೊತೆ ದೂದ್ಯಾನಾಯ್ಕ ಅನುಚಿತವಾಗಿ ವರ್ತಿಸಿದ್ದಾನೆ. ಶಿಕ್ಷಕ ದೂದ್ಯನಾಯ್ಕ ವಿಜ್ಞಾನ ವಿಷಯದ ಶಿಕ್ಷಕನಾಗಿ ಕಾರ್ಯ ನಿರ್ವಹಿಸುತ್ತಿದ್ದ. ಕಳೆದ ವಾರ ಶಾಲೆಯ ಲ್ಯಾಬ್ ಸ್ವಚ್ಛಗೊಳಿಸಲು ಮೂವರು ವಿದ್ಯಾರ್ಥಿನಿಯರನ್ನು ಕರೆದುಕೊಂಡು ಹೋಗಿದ್ದಾನೆ. ಇದಕ್ಕೂ ಮೊದಲೇ ಲ್ಯಾಬ್​ನಲ್ಲಿ ಮತ್ತೊಬ್ಬ ವಿದ್ಯಾರ್ಥಿನಿ ಇದ್ದಳು. ನಂತರ ಆ ಮೂವರು ವಿದ್ಯಾರ್ಥಿನಿಯರನ್ನು ಹೊರಗೆ ಕಳುಹಿಸಿದ್ದಾನೆ.

ದೂದ್ಯನಾಯ್ಕ ಲ್ಯಾಬ್​ನಲ್ಲೇ ಇದ್ದ ವಿದ್ಯಾರ್ಥಿನಿಯ ಹೆಗಲ‌ ಮೇಲೆ ಕೈ ಹಾಕಿ ಅಶ್ಲೀಲ ವಿಡಿಯೋ ನೋಡುವಂತೆ ಹೇಳಿದ್ದಾನೆ. ಅಲ್ಲದೇ ಮುತ್ತು ಕೊಡುವಂತೆ ಪೀಡಿಸಿದ್ದಾನೆ. ಆದರೆ ಬಾಲಕಿ ಶಿಕ್ಷಕನ ವರ್ತನೆ ವಿರೋಧಿಸಿ ತಪ್ಪಿಸಿಕೊಂಡು ಹೊರಗಡೆ ಓಡಿ ಬಂದಿದ್ದಾಳೆ. ಶಿಕ್ಷಕನ ಈ ಅನುಚಿತ ವರ್ತನೆ ಬಗ್ಗೆ ಪೋಷಕರಿಗೆ ತಿಳಿಸಿದ್ದಾರೆ.

ಅನುಚಿತವಾಗಿ ವರ್ತಿಸಿದ ಶಿಕ್ಷಕನ ವಿರುದ್ದ ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೋಕ್ಸೋ ಕಾಯ್ದೆಯಡಿ ಶಿಕ್ಷಕನನ್ನು ಪೊಲೀಸರು ಬಂಧಿಸಿ ತನಿಖೆ ಕೈಗೊಂಡಿದ್ದಾರೆ.

Intro:ವಿದ್ಯಾರ್ಥಿನಿ ಜೊತೆ ಶಿಕ್ಷಕ ಅಸಭ್ಯ ವರ್ತನೆ: ಪೋಕ್ಸೊ‌ ಕಾಯ್ದೆಯಡಿ ಶಿಕ್ಷಕನ ಬಂಧನ.

ಶಿವಮೊಗ್ಗ : ವಿದ್ಯಾರ್ಥಿಗೆ ಶಾಲಾ ಪಾಠ ಹೇಳಿ ಕೊಡಬೇಕಾದ ಶಿಕ್ಷಕ, ಕಾಮದ ಪಾಠ ಹೇಳಿ ಕೊಡಲು ಹೋಗಿ ಪೊಲೀಸರ ಅತಿಥಿಯಾಗಿರುವ ಘಟನೆ ಶಿಕಾರಿಪುರದಲ್ಲಿ ನಡೆದಿದೆ. ಶಿಕಾರಿಪುರದ ದೂದ್ಯಾನಾಯ್ಕನೇ ಎಂಬಾತನೇ ಪೊಲೀಸರ ಅತಿಥಿಯಾದ ಶಿಕ್ಷಕ. ಶಿಕಾರಿಪುರ ತಾಲೂಕಿನ ಸರ್ಕಾರಿ ಶಾಲೆಯ 8 ನೇ ತರಗತಿ ವಿದ್ಯಾರ್ಥಿನಿ ಜೊತೆ ದೂದ್ಯಾನಾಯ್ಕ ಅನುಚಿತವಾಗಿ ವರ್ತಿಸಿದ್ದಾನೆ. ಶಿಕ್ಷಕ ದೂದ್ಯನಾಯ್ಕ ವಿಜ್ಞಾನ ವಿಷಯದ ಶಿಕ್ಷಕನಾಗಿ ಕಾರ್ಯ ನಿರ್ವಹಿಸುತ್ತಿದ್ದ.Body: ಕಳೆದ ವಾರ ಶಾಲೆಯ ಲ್ಯಾಬ್ ಸ್ವಚ್ಚಗೊಳಿಸಲು ಮೂವರು ವಿದ್ಯಾರ್ಥಿನಿಯರನ್ನು ಲ್ಯಾಬ್ ಗೆ ಕರೆದುಕೊಂಡು ಹೋಗಿದ್ದಾನೆ. ಅಲ್ಲದೇ ಇನ್ನೊಬ್ಬ ವಿದ್ಯಾರ್ಥಿನಿ ಸಹ ಈ ಮೊದಲೇ ಲ್ಯಾಬ್ ನಲ್ಲಿದ್ದಳು. ನಂತರ ಮೂವರು ವಿದ್ಯಾರ್ಥಿನಿಯರನ್ನು ಹೊರಗೆ ಕಳುಹಿಸಿದ ದೂದ್ಯನಾಯ್ಕ ಅಲ್ಲೇ ಇದ್ದ ಇನ್ನೊಬ್ಬ ವಿದ್ಯಾರ್ಥಿನಿಗೆ ಆಕೆಯ ಹೆಗಲ‌ ಮೇಲೆ ಕೈ ಹಾಕಿ ಅಶ್ಲೀಲ ವಿಡಿಯೋ ನೋಡುವಂತೆ ಹೇಳಿದ್ದಾನೆ. ಅಲ್ಲದೇ ಮುತ್ತು ಕೊಡುವಂತೆ ಪೀಡಿಸಿದ್ದಾನೆ.Conclusion: ಆದರೆ ಬಾಲಕಿ ಶಿಕ್ಷಕನ ವರ್ತನೆ ವಿರೋಧಿಸಿ ತಪ್ಪಿಸಿಕೊಂಡು ಹೊರಗಡೆ ಓಡಿ ಬಂದಿದ್ದಾಳೆ. ಶಿಕ್ಷಕನ ಈ ಅನುಚಿತ ವರ್ತನೆ ಬಗ್ಗೆ ಪೋಷಕರಿಗೆ ತಿಳಿಸಿದ್ದಾರೆ. ಕಾಮುಕ ಶಿಕ್ಷಕನ ವಿರುದ್ದ ಶಿಕಾರಿಪುರ ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೋಕ್ಸೋ ಕಾಯ್ದೆಯಡಿ ಶಿಕ್ಷಕನನ್ನು ಪೊಲೀಸರು ಬಂಧಿಸಿದ್ದಾರೆ.
ETV Bharat Logo

Copyright © 2024 Ushodaya Enterprises Pvt. Ltd., All Rights Reserved.