ಶಿವಮೊಗ್ಗ: ಸಾಗರ ಪಟ್ಟಣದ ವಿಜಯನಗರದ ಮನೆಯೊಂದರ ಹಿಂಭಾಗದ ರಿಂಗ್ ಬಾವಿಯಲ್ಲಿ ಬಿದ್ದಿದ್ದ ನಾಗರಹಾವೊಂದನ್ನು ಉರಗತಜ್ಞ ಪ್ರಮೋದ್ ಸುರಕ್ಷಿತವಾಗಿ ಮೇಲಕ್ಕೆ ತಂದು ಬಿಟ್ಟಿದ್ದಾರೆ.
ಬಾವಿಯಲ್ಲಿ ಬಿದ್ದಿದ್ದ ಹಾವನ್ನು ಕಂಡ ಸ್ಥಳೀಯರು ಭಯಗೊಂಡು ಉರಗರಕ್ಷಕ ಪ್ರಮೋದ್ಗೆ ಕರೆ ಮಾಡಿದ್ದಾರೆ. ತಕ್ಷಣ ಸ್ಥಳಕ್ಕೆ ಬಂದ ಪ್ರಮೋದ್, ಬಾವಿಗಿಳಿದು ಹಾವನ್ನು ಸುರಕ್ಷಿತವಾಗಿ ಮೇಲಕ್ಕೆ ತಂದಿದ್ದಾರೆ. ನಂತರ ಹಾವನ್ನು ಸಾಗರ ಸಮೀಪದ ವರದಹಳ್ಳಿ ಬಳಿಯ ಕಾಡಿಗೆ ಬಿಟ್ಟು ಬಂದಿದ್ದಾರೆ.