ETV Bharat / state

ಲಾಕ್​ಡೌನ್​​​ ಉಲ್ಲಂಘಿಸಿದ 265 ವಾಹನ ಜಪ್ತಿ, ಒಂದು ಲಕ್ಷ ರೂ.ಗೂ ಹೆಚ್ಚು ದಂಡ - ಶಿವಮೊಗ್ಬ ಲೇಟೆಸ್ಟ್ ಸುದ್ದಿ

ಸರ್ಕಾರದ ನಿಯಮ ಉಲ್ಲಂಘನೆ ಮಾಡಿ ಅನಗತ್ಯವಾಗಿ ಓಡಾಡುತ್ತಿದ್ದ ವಾಹನ ಸವಾರರ ಒಟ್ಟು 265 ವಾಹನಗಳನ್ನು ಶಿವಮೊಗ್ಗ ಪೊಲೀಸರು ಶನಿವಾರ ಜಪ್ತಿ ಮಾಡಿದ್ದಾರೆ.

shimogga-police-fines-covid-guidelines-violators
ಲಾಕ್​ಡೌನ್​​​ ಉಲ್ಲಂಘಿಸಿದ 265 ವಾಹನ ಜಪ್ತಿ, ಒಂದು ಲಕ್ಷ ರೂ.ಗೂ ಹೆಚ್ಚು ದಂಡ
author img

By

Published : May 23, 2021, 12:48 AM IST

ಶಿವಮೊಗ್ಗ: ಕೊರೊನಾ ಹೆಚ್ಚಾಗುತ್ತಿರುವ ಹಿನ್ನೆಲೆಯಲ್ಲಿ ರಾಜ್ಯ ಸರ್ಕಾರ ಕಟ್ಟುನಿಟ್ಟಿನ ಲಾಕ್ ಡೌನ್ ಜಾರಿ ಮಾಡಿದೆ. ಈ ಹಿನ್ನೆಲೆಯಲ್ಲಿ ಸರ್ಕಾರದ ಲಾಕ್ ಡೌನ್ ನಿಯಮವನ್ನು ಉಲ್ಲಂಘನೆ ಮಾಡಿದ ಅಂಗಡಿಯ ಮಾಲೀಕರ ವಿರುದ್ಧ ಕರ್ನಾಟಕ ಸಾಂಕ್ರಾಮಿಕ ರೋಗಗಳ ಕಾಯ್ದೆ-2020ರ ಅಡಿಯಲ್ಲಿ ದೂರು ದಾಖಲಿಸಿಕೊಳ್ಳಲಾಗಿದೆ.

ವಿನೋಬನಗರ ಪೊಲೀಸ್ ಠಾಣೆಯಲ್ಲಿ 03, ಶಿವಮೊಗ್ಗ ಗ್ರಾಮಾಂತರ ಪೋಲಿಸ್ ಠಾಣೆಯಲ್ಲಿ 02, ರಿಪ್ಪನ್​ಪೇಟೆ ಪೊಲೀಸ್​​ ಠಾಣೆಯಲ್ಲಿ 01 ಪ್ರಕರಣ ಸೇರಿ ಒಟ್ಟು 6 ಪ್ರಕರಣಗಳನ್ನು ದಾಖಲಿಸಲಾಗಿದೆ.

ಇದನ್ನೂ ಓದಿ: ಕೋವಿಡ್​ನಿಂದ ಮೃತಪಟ್ಟವರ ಖಾಸಗಿ ಅಂತ್ಯಸಂಸ್ಕಾರಕ್ಕೆ ದೃಢೀಕರಣ ಪತ್ರ ಕಡ್ಡಾಯ

ಸರ್ಕಾರದ ನಿಯಮ ಉಲ್ಲಂಘನೆ ಮಾಡಿ ಅನಗತ್ಯವಾಗಿ ಓಡಾಡುತ್ತಿದ್ದ ವಾಹನ ಸವಾರರ ಒಟ್ಟು 265 ವಾಹನಗಳನ್ನು (230 ದ್ವಿಚಕ್ರ ವಾಹನಗಳು, 8 ಆಟೋಗಳು ಹಾಗೂ 27 ಕಾರುಗಳು) ವಶಪಡಿಸಿಕೊಳ್ಳಲಾಗಿದೆ.

ಒಟ್ಟು 244 ಪ್ರಕರಣಗಳನ್ನು ದಾಖಲಿಸಿ 1,12,000 ರೂಪಾಯಿ ದಂಡವನ್ನು ವಸೂಲಿ ಮಾಡಲಾಗಿದೆ ಎಂದು ಜಿಲ್ಲಾ ಪೊಲೀಸ್​​ ವರಿಷ್ಠಾಧಿಕಾರಿಗಳು ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.