ಶಿವಮೊಗ್ಗ: ನಗರದ ಹೃದಯ ಭಾಗದಲ್ಲಿರುವ ಗಾಂಧಿ ಪಾರ್ಕ್ ನಗರದ ಅತ್ಯಂತ ದೊಡ್ಡ ಉದ್ಯಾನವನವೆಂಬ ಖ್ಯಾತಿ ಪಡೆದಿದೆ. ಆದರೆ, ಅದರೊಳಗಡೆ ಹೋದರೆ ಸಮಸ್ಯೆಗಳ ಸರಮಾಲೆಗಳೇ ಎಲ್ಲರ ಕಣ್ಣಿಗೆ ಗೋಚರಿಸುತ್ತವೆ.
ಸರಿಯಾದ ನಿರ್ವಹಣೆಯ ಕೊರೆಯಿರುವ ಗಾಂಧಿ ಪಾರ್ಕಿನ ಒಳಗಡೆ ಹೋದರೆ ಅವ್ಯವಸ್ಥೆ ಕಾಣಿಸುತ್ತೆ. ಗಾಂಧಿ ಹೆಸರಿಗೆ ಈ ಉದ್ಯಾನವನ ಒಂದ್ರೀತಿ ಕಳಂಕವೆಂಬತಿದೆ. ಮೂಲಸೌಕರ್ಯವೇ ಇಲ್ಲದೆ ಜನ ಈ ಕಡೆ ಮುಖ ಮಾಡಲ್ಲ.
ಈ ಉದ್ಯನವನದಲ್ಲಿರುವ ಕಾರಂಜಿ ಕೊಳದ ಒಳಗಡೆ ಹಾಳಾಗಿರುವ ಪೈಪ್ಗಳಿವೆ. ಬೀದಿ ದೀಪ ಸೇರಿ ಮಕ್ಕಳ ಮನೋರಂಜನೆಗಾಗಿರುವ ಯಾವ ಸಲಕರಣೆಗಳೂ ಇಲ್ಲಿ ಕಾರ್ಯ ನಿರ್ವಹಿಸುವುದಿಲ್ಲ. ಹೀಗೆ ಹತ್ತಾರು ಸಮಸ್ಯೆಗಳ ತಾಣ ಈ ಉದ್ಯಾನವನ. ಇಷ್ಟೆಲ್ಲ ಆದರೂ ಕೂಡ ಮಹಾನಗರ ಪಾಲಿಕೆ ಈ ಕಡೆ ತಲೆ ಕೂಡ ಹಾಕಿಲ್ಲ. ನಿತ್ಯ ಪಾರ್ಕ್ಗೆ ಬರುವ ನೂರಾರು ಜನರಿಂದ ತಲಾ ಹತ್ತು ರೂ. ಫೀ ಪಡೆಯುವ ಗುತ್ತಿಗೆದಾರರು ಇದರ ನಿರ್ವಹಣೆ ಮಾತ್ರ ಮಾಡೋದಿಲ್ಲ.
ಉದ್ಯಾನವನ ಅಭಿವೃದ್ಧಿಗಾಗಿಯೇ 3 ವರ್ಷಕ್ಕೊಮ್ಮೆ ಟೆಂಡರ್ ಪ್ರಕ್ರಿಯೆ ನಡೆಸಲಾಗುತ್ತೆ. ಅದರಿಂದ ಲಕ್ಷಾಂತರ ರೂ. ಕೂಡ ಬಿಡುಗಡೆಯಾಗಿದೆ. ಆದರೆ, ಪಾಲಿಕೆ ಮಾತ್ರ ಆ ಹಣವನ್ನ ಗಾಂಧಿ ಪಾರ್ಕಿನ ಅಭಿವೃದ್ಧಿಗೆ ಬಳಸದೇ ಏನು ಮಾಡುತ್ತಿದೆ ಎನ್ನುವುದೇ ಸಾರ್ವಜನಿಕರ ಪ್ರಶ್ನೆ.