ETV Bharat / state

ಸಮಸ್ಯೆ ಆಲಿಸಲು ಶಾಸಕರು, ಸಂಸದರು ಸಿಗುತ್ತಿಲ್ಲ; ಜಿಪಂ ಸದಸ್ಯ ದೂರು, ವಾಗ್ವಾದಕ್ಕಿಳಿದ ಬಿಜೆಪಿ - Shivamogga district news

ಶಿಕಾರಿಪುರ ತಾಲೂಕಿನ ಶಾಸಕರೂ ಆಗಿರುವ ಮುಖ್ಯಮಂತ್ರಿ ಬಿ.ಎಸ್ ಯಡಿಯೂರಪ್ಪ ಅವರಿಗೆ ನೀವು ಅಗೌರವ ತೋರಿಸುತ್ತಿದ್ದಿರಾ ಎಂದು ಜಿಲ್ಲಾ ಪಂಚಾಯತ ಸದಸ್ಯ ನರಸಿಂಗ್ ನಾಯ್ಕ ಹಾಗೂ ಬಿಜೆಪಿ ಸದಸ್ಯರ ಮದ್ಯೆ ಮಾತಿನ ಚಕಮಕಿ ನಡೆಯಿತು.

Uproar
ಗಲಾಟೆ
author img

By

Published : Jul 3, 2020, 5:03 PM IST

ಶಿವಮೊಗ್ಗ: ಜಿಲ್ಲಾ ಪಂಚಾಯಿತಿ ಸಾಮಾನ್ಯ ಸಭೆಯಲ್ಲಿ ಜಿಪಂ ಸದಸ್ಯ ಮತ್ತು ಬಿಜೆಪಿ ಸದಸ್ಯರ ನಡುವೆ ವಾಗ್ವಾದ ನಡೆಯಿತು.

ಶಿಕಾರಿಪುರ ತಾಲೂಕಿನ ಜಿಪಂ ಸದಸ್ಯ ನರಸಿಂಗ್ ನಾಯ್ಕ ಅವರು, ನಮ್ಮ ವ್ಯಾಪ್ತಿಯಲ್ಲಿ ನಡೆದಿರುವ ವಿವಿಧ ಯೋಜನೆಗಳ ಕಳಪೆ ಕಾಮಗಾರಿಗಳ ಸಮಸ್ಯೆ ಆಲಿಸಲು ಶಾಸಕರು, ಸಂಸದರು ಕೈಗೇ ಸಿಗುತ್ತಿಲ್ಲ ಎಂದು ದೂರಿದರು.

ಜಿಪಂ ಸದಸ್ಯ ಮತ್ತು ಬಿಜೆಪಿ ಸದಸ್ಯರ ನಡುವೆ ವಾಗ್ದಾದ

ಇದಕ್ಕೆ ಆಕ್ಷೇಪ ವ್ಯಕ್ತಪಡಿಸಿದ ಜಿಪಂ ಬಿಜೆಪಿ ಸದಸ್ಯರು, ನೀವು ಮುಖ್ಯಮಂತ್ರಿಗಳಿಗೆ ಅಗೌರವ ತೋರಿಸುತ್ತಿದ್ದಾರಾ ಎಂದು ಮಾತಿಗಿಳಿದರು. ಆಗ ನರಸಿಂಗ್ ನಾಯ್ಕ ಹಾಗೂ ಬಿಜೆಪಿ ಸದಸ್ಯರ ನಡುವೆ ಮಾತಿನ ಚಕಮಕಿ ನಡೆಯಿತು.

ವಿಧಾನ ಪರಿಷತ್ ಸದಸ್ಯ ಆರ್.ಪ್ರಸನ್ನ ಕುಮಾರ ಹಾಗೂ ಶಾಸಕ ಹರತಾಳು ಹಾಲಪ್ಪ ಅವರು ಮಧ್ಯೆ ಪ್ರವೇಶಿಸಿ ಪರಿಸ್ಥಿತಿಯನ್ನು ತಿಳಿಗೊಳಿಸಿದರು.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.