ETV Bharat / state

ಹತ್ತು ದಿನಗಳ ಮೊದಲೇ ಅಪ್ಪು ಪುಣ್ಯಸ್ಮರಣೆ: ಅಭಿಮಾನಿಗಳಿಗೆ ಬಾಡೂಟ - ಈಟಿವಿ ಭಾರತ ಕನ್ನಡ

ಪುನೀತ್​ ರಾಜ್​ ಕುಮಾರ್​ ನಿಧನ ಹೊಂದಿ ಅಕ್ಟೋಬರ್​ 29ಕ್ಕೆ ಒಂದು ವರ್ಷ ಪೂರೈಸುತ್ತಿದೆ. ಈ ಹಿನ್ನೆಲೆಯಲ್ಲಿ ಶಿವಮೊಗ್ಗದ ವಿದ್ಯಾನಗರದಲ್ಲಿ ವೀರಕೇಸರಿ ಯುವಕ ಸಂಘದ ಸದಸ್ಯರು ಪುನೀತ್ ರಾಜ್‍ಕುಮಾರ್ ಅವರ ವರ್ಷದ ಪುಣ್ಯ ಸ್ಮರಣೆಯನ್ನು ಅದ್ದೂರಿಯಾಗಿ ಆಚರಿಸಿದ್ದಾರೆ.

punithrajkumar-one-year-detah-anniversary-celebration-at-shivamogga
ಹತ್ತು ದಿನಗಳ ಮೊದಲೇ ಅಪ್ಪು ಪುಣ್ಯಸ್ಮರಣೆ : ಅಭಿಮಾನಿಗಳಿಗೆ ಬಾಡೂಟ
author img

By

Published : Oct 19, 2022, 5:30 PM IST

ಶಿವಮೊಗ್ಗ : ನಟ ಪುನೀತ್ ರಾಜ್ ಕುಮಾರ್ ನಮ್ಮನ್ನು ಅಗಲಿ ಒಂದು ವರ್ಷ ಆಗುತ್ತಿದ್ದರೂ, ಅವರ ಅಭಿಮಾನಿಗಳ ಪ್ರೀತಿ ಮಾತ್ರ ಎಳ್ಳಷ್ಟೂ ಕಡಿಮೆಯಾಗಿಲ್ಲ. ಅಕ್ಟೋಬರ್ 29ಕ್ಕೆ ಅಪ್ಪು ನಿಧನ ಹೊಂದಿ ಒಂದು ವರ್ಷಪೂರೈಸುತ್ತಿದೆ.‌ ಈ ಹಿನ್ನೆಲೆಯಲ್ಲಿ ಜಿಲ್ಲೆಯ ವಿದ್ಯಾನಗರದ ಯಾಲಕ್ಕಪ್ಪನ ಕೇರಿಯ ವೀರಕೇಸರಿ ಯುವಕ ಸಂಘದ ಸದಸ್ಯರು ಪುನೀತ್ ರಾಜ್‍ಕುಮಾರ್ ಅವರ ವರ್ಷದ ಪುಣ್ಯ ಸ್ಮರಣೆಯನ್ನು ಅದ್ದೂರಿಯಾಗಿ ಆಚರಿಸಿದ್ದಾರೆ.

ಹತ್ತು ದಿನಗಳ ಮೊದಲೇ ಅಪ್ಪು ಪುಣ್ಯಸ್ಮರಣೆ : ಅಭಿಮಾನಿಗಳಿಗೆ ಬಾಡೂಟ

ಪುನೀತ್​ ಪುಣ್ಯ ಸ್ಮರಣೆ ನಿಮಿತ್ತ ರಸ್ತೆ ಪಕ್ಕದಲ್ಲೇ ಪೆಂಡಾಲ್ ಹಾಕಿದ್ದು, ಪುನೀತ್​ ಭಾವಚಿತ್ರ ಇರಿಸಿ ಶಾಸ್ತ್ರೋಕ್ತವಾಗಿ ಪೂಜೆ ಮಾಡಲಾಯಿತು. ಈ ಸಂದರ್ಭ ಕಾರ್ಯಕ್ರಮಕ್ಕೆ ಆಗಮಿಸಿದವರು ಭಾವಚಿತ್ರಕ್ಕೆ ನಮನ ಸಲ್ಲಿಸಿದ್ದರು. ಬಳಿಕ ಕಾರ್ಯಕ್ರಮಕ್ಕೆ ಆಗಮಿಸಿದವರಿಗೆ ಬಾಡೂಟ ನೀಡಲಾಯಿತು.

ಕಾರ್ಯಕ್ರಮದ ಆಯೋಜಕರಲ್ಲೊಬ್ಬರಾದ ಹರೀಶ್ ಮಾತನಾಡಿ, ಇಲ್ಲಿನ ಯುವಕರೆಲ್ಲ ಸೇರಿಕೊಂಡು ಪುನೀತ್ ಅವರ ವರ್ಷಾಚರಣೆ ಮಾಡುತ್ತಿದ್ದೇವೆ‌. ಸುಮಾರು ಎರಡು ಸಾವಿರ ಜನರಿಗೆ‌ ನಾಲ್ಕು ಕುರಿಗಳ ಬಾಡೂಟ ಮಾಡಲಾಗಿತ್ತು.‌ ಈ ಕಾರ್ಯಕ್ರಮ ಸಂತೋಷದಿಂದ ಮಾಡುತ್ತಿಲ್ಲ, ನಾವೆಲ್ಲಾ ಇಂದಿಗೂ ದುಃಖತಪ್ತರಾಗಿದ್ದೇವೆ. ಹಾಗಾಗಿ ಶಾಸ್ತ್ರೋಕ್ತವಾಗಿ ಕಾರ್ಯಕ್ರಮ ಆಯೋಜಿಸಿದ್ದೇವೆ. ಪ್ರತಿ ವರ್ಷವೂ ಸಹ ಪುನೀತ್ ಸ್ಮರಣೆ ಕಾರ್ಯಕ್ರಮ ಇದೇ ರೀತಿ ನಡೆಸುತ್ತೇವೆ ಎಂದು ಹೇಳಿದರು.

ಇದನ್ನೂ ಓದಿ :ಧಾರವಾಡ: ಪುನೀತ್ ಸಮಾಧಿವರೆಗೆ ಅಭಿಮಾನಿ ದ್ರಾಕ್ಷಾಯಿಣಿ ಓಟ..

ETV Bharat Logo

Copyright © 2025 Ushodaya Enterprises Pvt. Ltd., All Rights Reserved.