ETV Bharat / state

ಪ್ರಮುಖ ಕೋರ್ಸ್​ಗಳ ತರಗತಿ ಕಡಿತಗೊಳಿಸಿದ ಸಹ್ಯಾದ್ರಿ: NSUI ಪ್ರತಿಭಟನೆ

ಸಹ್ಯಾದ್ರಿ ಕಾಲೇಜಿನಲ್ಲಿ ಈ ವರ್ಷ ಬಿಸಿಎ, ಸಿಬಿಝೆಡ್, ಪಿಸಿಎಂ ಹಾಗೂ ಇನ್ನಿತರ ಪ್ರಮುಖ ಕೋರ್ಸುಗಳ ವಿಭಾಗಗಳನ್ನು ಮೂರರಿಂದ ಒಂದು ಸೆಕ್ಷನ್​ಗೆ ಇಳಿಕೆ ಮಾಡಿದೆ. ಈ ವ್ಯವಸ್ಥೆಯನ್ನು ರದ್ದುಪಡಿಸುವಂತೆ ಆಗ್ರಹಿಸಿ ಎನ್ಎಸ್​ಯುಐ ಪ್ರತಿಭಟನೆ ನಡೆಸಿದೆ.

NSUI protest
ಎನ್ಎಸ್​ಯುಐ ಪ್ರತಿಭಟನೆ
author img

By

Published : Aug 19, 2020, 4:43 PM IST

ಶಿವಮೊಗ್ಗ: ಪ್ರಮುಖ ಕೋರ್ಸ್​ಗಳ ತರಗತಿಗಳನ್ನು ಕಡಿತಗೊಳಿಸಿರುವುದನ್ನು ವಿರೋಧಿಸಿ ಎನ್ಎಸ್​ಯುಐ ಸಂಘಟನೆಯ ವತಿಯಿಂದ ನಗರದ ಸಹ್ಯಾದ್ರಿ ಕಾಲೇಜು ಆವರಣದಲ್ಲಿ ಪ್ರತಿಭಟನೆ ನಡೆಸಲಾಯಿತು.

ಎನ್ಎಸ್​ಯುಐ ಪ್ರತಿಭಟನೆ

ನಗರದ ಸಹ್ಯಾದ್ರಿ ಕಾಲೇಜಿನಲ್ಲಿ ಈ ವರ್ಷ ಬಿಸಿಎ, ಸಿಬಿಝೆಡ್, ಪಿಸಿಎಂ ಹಾಗೂ ಇನ್ನಿತರ ಪ್ರಮುಖ ಕೋರ್ಸುಗಳ ವಿಭಾಗಗಳನ್ನು ಮೂರರಿಂದ ಒಂದು ಸೆಕ್ಷನ್​ಗೆ ಇಳಿಕೆ ಮಾಡಿದೆ. ಈ ವ್ಯವಸ್ಥೆಯನ್ನು ರದ್ದುಪಡಿಸಿ ಹಿಂದೆ ಇದ್ದ ಹಾಗೆ ಮೂರು ಸೆಕ್ಷನ್​ಗಳಿಗೆ ಹೆಚ್ಚಿಸಬೇಕು ಎಂದು ಆಗ್ರಹಿಸಲಾಗಿದೆ.

ಸಹ್ಯಾದ್ರಿ ಕಾಲೇಜಿನಲ್ಲಿ ಪ್ರವೇಶ ಶುಲ್ಕ ಕಡಿಮೆ ಇರುವುದರಿಂದ ಜಿಲ್ಲೆಯ ಎಲ್ಲಾ ಭಾಗಗಳಿಂದ ವಿದ್ಯಾರ್ಥಿಗಳು ಇಲ್ಲಿಗೆ ಬರುತ್ತಾರೆ. ಆದರೀಗ ಕಾಲೇಜಿನಲ್ಲಿ ಕಟ್ಟಡದ ನೆಪವೊಡ್ಡಿ ಪ್ರಮುಖ ವಿಭಾಗಗಳ ತರಗತಿಯನ್ನು ಮೂರು ಸೆಕ್ಷನ್​ನಿಂದ ಒಂದಕ್ಕೆ ಇಳಿಸಲಾಗಿದೆ. ಇದರಿಂದ ಅನೇಕ ಬಡ ವಿದ್ಯಾರ್ಥಿಗಳಿಗೆ ಅನ್ಯಾಯವಾಗುತ್ತದೆ. ಹಾಗಾಗಿ ಈ ಹಿಂದೆ ಇದ್ದ ರೀತಿಯಲ್ಲಿ ಮೂರು ಸೆಕ್ಷನ್​ಗಳನ್ನು ತೆರೆಯುವಂತೆ ಆಗ್ರಹಿಸಿ ಪ್ರತಿಭಟನೆ ನಡೆಸಿದರು.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.