ETV Bharat / state

ಸಾಗರದ ಚರಂಡಿಯಲ್ಲಿ ಬಿದ್ದು ಒದ್ದಾಡುತ್ತಿದ್ದ ಹೋರಿ.. ಎನ್​ಡಿಆರ್​ಎಫ್​​ ತಂಡದಿಂದ ಬದುಕಿತು ಬಡ ಜೀವ

author img

By

Published : May 18, 2021, 8:09 PM IST

ಸಾಗರದ ಜನತಾ ಶಾಲೆಯ ಮುಂಭಾಗದ ಸಣ್ಣ ಚರಂಡಿಯಲ್ಲಿ ಆಯತಪ್ಪಿ ಬಿದ್ದಿದ್ದ ಹೋರಿಯನ್ನು ರಕ್ಷಿಸುವಲ್ಲಿ ಎನ್​ಡಿಆರ್​ಎಫ್​ ತಂಡ ಯಶಸ್ವಿಯಾಗಿದೆ.

ndrf-team-rescued-cattle-in-sagara
ಚರಂಡಿಯಲ್ಲಿ ಬಿದ್ದಿದ್ದ ಹೋರಿ ರಕ್ಷಿಸಿದ‌ ಎನ್​ಡಿಆರ್​ಎಫ್​​ ತಂಡ

ಶಿವಮೊಗ್ಗ: ಸಾಗರದ ಜನತಾ ಶಾಲೆಯ ಮುಂಭಾಗದ ಚರಂಡಿಯಲ್ಲಿ ಬಿದ್ದು ಮೇಲೇಳಲಾಗದೇ ಕಷ್ಟಪಡುತ್ತಿದ್ದ ಹೋರಿಯನ್ನು ರಕ್ಷಿಸುವಲ್ಲಿ ಎನ್​ಡಿಆರ್​ಎಫ್​ ತಂಡ ಯಶಸ್ವಿಯಾಗಿದೆ.

ಜನತಾ ಶಾಲೆಯ ಮುಂಭಾಗದ ಸಣ್ಣ ಬಾಕ್ಸ್ ಚರಂಡಿಯಲ್ಲಿ ದೊಡ್ಡ ಗಾತ್ರದ ಹೋರಿ ಆಯತಪ್ಪಿ ಬಿದ್ದಿತ್ತು. ಬೆಳಗ್ಗೆಯಿಂದ‌ ಮಧ್ಯಾಹ್ನದ ತನಕ ಹಾಗೆಯೇ ಇದ್ದ ಹೋರಿಯನ್ನು ರಕ್ಷಣೆ ಮಾಡಬೇಕೆಂದು ಸ್ಥಳೀಯರು ಅಗ್ನಿ ಶಾಮಕ ದಳಕ್ಕೆ ಮನವಿ ಮಾಡಿದ್ದಾರೆ.

ವಿಷಯ ತಿಳಿದ ಅಗ್ನಿ ಶಾಮಕದಳದವರ ಜೊತೆ ಎನ್​ಡಿಆರ್​ಎಫ್​​ ತಂಡ ಸಹ ಕೈಜೋಡಿಸಿ, ಹೋರಿಯ ತಲೆ ಹಾಗೂ ಹೊಟ್ಟೆಗೆ ಬೆಲ್ಟ್ ಕಟ್ಟಿ ಕೋಲಿನಿಂದ ಸುಮಾರು 10 ನಿಮಿಷಗಳ ಕಾರ್ಯಾಚರಣೆ ನಡೆಸಿ ಮೇಲಕ್ಕೆ ಎತ್ತಿದ್ದಾರೆ.

ಹೋರಿಯನ್ನು ಮೇಲಕ್ಕೆ ಎತ್ತಿದ ಕೂಡಲೇ ಅದು ಸುತ್ತಮುತ್ತ ನೋಡಿ ಓಡಿ ಹೋಗಿದೆ. ಸಹಾಯಕ್ಕೆ ಬಂದ ಅಗ್ನಿ ಶಾಮಕದಳ ಹಾಗೂ ಎನ್​ಡಿಆರ್​ಎಫ್​​ ತಂಡಕ್ಕೆ ಸಾಗರ ಜನತೆ ಧನ್ಯವಾದ ತಿಳಿಸಿದ್ದಾರೆ.

ಓದಿ: ನಿಯಮ ಮೀರಿ ಸಾವಿನ ಮನೆಗೆ ಹೋದ ಮಲೆನಾಡಿಗರು: ಒಂದೇ ಗ್ರಾಮದ 51 ಜನರಿಗೆ ಕೊರೊನಾ!

ETV Bharat Logo

Copyright © 2024 Ushodaya Enterprises Pvt. Ltd., All Rights Reserved.