ETV Bharat / state

ಕ್ಯಾನ್ಸರ್​ಗೆ ಆಯುರ್ವೇದ ಔಷಧಿ ನೀಡುತ್ತಿದ್ದ ಖ್ಯಾತ ನಾಟಿ ವೈದ್ಯ ನಾರಾಯಣಮೂರ್ತಿ ನಿಧನ - ಆಯುರ್ವೇದ

ಕ್ಯಾನ್ಸರ್ ಸೇರಿದಂತೆ ವಿವಿಧ ರೋಗಗಳಿಗೆ ಆಯುರ್ವೇದ ಔಷಧಿ ನೀಡುತ್ತಿದ್ದ ಖ್ಯಾತ ನಾಟಿ ವೈದ್ಯ ನಾರಾಯಣಮೂರ್ತಿ ಹೃದಯಾಘಾತದಿಂದ ನಿಧನರಾಗಿದ್ದಾರೆ.

ಆಯುರ್ವೇದ ಔಷಧಿ ನೀಡುತ್ತಿದ್ದ ನಾರಾಯಮೂರ್ತಿ ನಿಧನ

author img

By

Published : Jun 25, 2020, 10:12 AM IST

ಶಿವಮೊಗ್ಗ: ಕ್ಯಾನ್ಸರ್ ಸೇರಿದಂತೆ ವಿವಿಧ ರೋಗಗಳಿಗೆ ಆಯುರ್ವೇದ ಚಿಕಿತ್ಸಾ ಪದ್ಧತಿ ಮೂಲಕ ಔಷಧಿ ನೀಡುತ್ತಿದ್ದ ನಾರಾಯಣಮೂರ್ತಿ ಹೃದಯಾಘಾತದಿಂದ ನಿಧನರಾದರು. ಇವರಿಗೆ 80 ವರ್ಷ ವಯಸ್ಸಾಗಿತ್ತು.

ಸಾಗರ ತಾಲೂಕಿನ ನರಸೀಪುರದ ನಿವಾಸಿಯಾದ ನಾರಾಯಣಮೂರ್ತಿ ಕಳೆದ 30 ವರ್ಷಗಳಿಂದ ಔಷಧ ನೀಡುತ್ತಿದ್ದರು. ಮೂಲತಃ ಶಿಕಾರಿಪುರದವರಾದ ಇವರು ನರಸೀಪುರದಲ್ಲಿ‌ ವಾಸವಿದ್ದರು. ಇವರು ಕ್ಯಾನ್ಸರ್​​ಗೂ ಮುನ್ನ ಮೂತ್ರಪಿಂಡದಲ್ಲಿ ಕಲ್ಲು, ಚರ್ಮರೋಗ ಸೇರಿದಂತೆ ವಿವಿಧ ರೋಗಗಳಿಗೆ ನಾಟಿ ಔಷಧಿ ನೀಡುತ್ತಿದ್ದರು. ನಂತರ ಎಲ್ಲಾ ರೀತಿಯ ಕ್ಯಾನ್ಸರ್​ಗೆ ಔಷಧ ನೀಡಲು ಪ್ರಾರಂಭಿಸಿದ್ದು, ಇವರು ಕ್ಯಾನ್ಸರ್‌ ಖಾಯಿಲೆಗೆ ನೀಡುತ್ತಿದ್ದ ಔಷಧ ಸಾಕಷ್ಟು ಪ್ರಸಿದ್ಧಿ ಪಡೆದಿದೆ.

ದೇಶ ಹಾಗು ಜಗತ್ತಿನ ನಾನಾ ಕಡೆಗಳಿಂದ ಇವರ ಬಳಿ ಬರುತ್ತಿದ್ದ ಜನರು ಔಷಧವನ್ನು ತೆಗೆದುಕೊಂಡು ಹೋಗುತ್ತಿದ್ದರು. ವೈದ್ಯರ ಬಳಿ ಗುಣವಾಗದ‌ ಕ್ಯಾನ್ಸರ್ ರೋಗಿಗಳನ್ನು ತಮ್ಮ ಔಷಧಿಯ ಮೂಲಕ ಗುಣಪಡಿಸಿದ ಕೀರ್ತಿ ಇವರದ್ದು. ಕೋವಿಡ್-19ನಿಂದಾಗಿ ಕಳೆದ ಮೂರು ತಿಂಗಳ ಹಿಂದೆ ಜಿಲ್ಲಾ ಆರೋಗ್ಯ ಇಲಾಖೆಯು ಇವರಿಗೆ ಔಷಧಿ ನೀಡದಂತೆ ಸೂಚನೆ ನೀಡಿತ್ತು.

ಕೆಲ ದಿನಗಳ ಹಿಂದೆ ಸಚಿವ ಕೆ.ಎಸ್.ಈಶ್ಚರಪ್ಪನವರನ್ನು ಭೇಟಿಯಾಗಿದ್ದ ಇವರು ತಮಗೆ ಔಷಧ ನೀಡಲು ಅವಕಾಶ ನೀಡುವಂತೆ ಕೇಳಿಕೊಂಡಿದ್ದರು.

ತಾವೇ ಕಾಡಿಗೆ ಹೋಗಿ ಔಷಧೀಯ ಮರಗಳ ಚೆಕ್ಕೆಗಳನ್ನು ತಂದು ಪುಡಿ ಮಾಡಿ ಔಷಧ ತಯಾರಿಸುತ್ತಿದ್ದರು. ಆದರೆ ಅಭಯಾರಣ್ಯ ಕಾಯ್ದೆಯಿಂದ ಕಾಡಿಗೆ ಹೋಗದೆ ಔಷಧಿ ತಯಾರಿಕೆಯನ್ನು ನಿಲ್ಲಿಸಿ, ಬೇರೆ ಕಡೆಯಿಂದ ತರಿಸುತ್ತಿದ್ದರು.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.