ಶಿವಮೊಗ್ಗ: ಮಾರುತಿ ಓಮ್ನಿಯಲ್ಲಿ ಕೊಳೆತ ಸ್ಥಿತಿಯಲ್ಲಿ ಮಹಿಳೆಯ ಶವ ಪತ್ತೆಯಾಗಿದ್ದ ಪ್ರಕರಣ ಬೇಧಿಸುವಲ್ಲಿ ಕೋಟೆ ಪೊಲೀಸರು ಯಶಸ್ವಿಯಾಗಿದ್ದಾರೆ.
ಜನವರಿ 2ರಂದು ನಗರದ ಹಳೇ ರೈಲು ನಿಲ್ದಾಣದ ಬಳಿ ಕೆಟ್ಟು ನಿಂತಿದ್ದ ಮಾರುತಿ ಓಮ್ನಿಯಿಂದ ಕೆಟ್ಟ ವಾಸನೆ ಬರುತ್ತಿತ್ತು. ಈ ಬಗ್ಗೆ ಪರಿಶೀಲನೆ ನಡೆಸಿದಾಗ ಮಹಿಳೆಯೊಬ್ಬರ ಶವ ಮುಖಕ್ಕೆ ಆ್ಯಸಿಡ್ ಹಾಕಿ ಪ್ಲಾಸ್ಟಿಕ್ನಲ್ಲಿ ಸುತ್ತಿಟ್ಟ ರೀತಿಯಲ್ಲಿ ಪತ್ತೆಯಾಗಿತ್ತು.
ಪತ್ತೆಯಾದ ಶವ ಊರುಗಡೂರು ಗ್ರಾಮದ ತಹಸೀನಾ ಎಂಬ ಮಹಿಳೆಯದ್ದು ಎಂದು ಬಳಿಕ ತಿಳಿದು ಬಂದಿತ್ತು. ಈ ಬಗ್ಗೆ ಪ್ರಕರಣ ದಾಖಲಿಸಿ ತನಿಖೆ ಕೈಗೊಂಡ ಕೋಟೆ ಠಾಣೆ ಪೊಲೀಸರು, ಕೊಲೆ ಆರೋಪಿ ಸೋಮಿನಕೊಪ್ಪದ ಸೈಯದ್ ಅಬು ಸಲೇಹ ಎಂಬುವನನ್ನು ಬಂಧಿಸಿದ್ದಾರೆ. ಮಹಿಳೆಯ ಶವ ಪತ್ತೆಯಾದ ಕಾರು ಈತನದ್ದೇ ಎಂದು ತಿಳಿದು ಬಂದಿದ್ದು, ಕೊಲೆಯಾದ ಮಹಿಳೆ ತಹಸೀನಾಳ ಜೊತೆ ಈತ ಅಕ್ರಮ ಸಂಬಂಧ ಹೊಂದಿದ್ದ ಎನ್ನಲಾಗಿದೆ.