ETV Bharat / state

ಮಲೆನಾಡಲ್ಲಿ ವರುಣನ ಗಾನಸುಧೆಗೆ ಮೈದುಂಬಿದ ತುಂಗೆ, ಭದ್ರೆ, ಶರಾವತಿ..

author img

By

Published : Aug 6, 2019, 8:10 PM IST

ಮಲೆನಾಡಿನಲ್ಲೂ ಮಳೆರಾಯ ತನ್ನ ಆರ್ಭಟ ತೋರಿದ್ದಾನೆ. ಈಗಾಗಲೇ ಜಿಲ್ಲೆಯಲ್ಲಿರುವ ನದಿಗಳೆಲ್ಲಾ ತುಂಬಿ ಹರಿಯುತ್ತಿವೆ. ಶಿವಮೊಗ್ಗ ನಗರದಲ್ಲಿ ಹರಿಯುತ್ತಿರುವ ತುಂಗಾ ನದಿ ನೋಡಿ ಜನ ಸಂತಸಪಡುತ್ತಿದ್ದಾರೆ.

ಮೈದುಂಬಿ ಹರಿಯುತ್ತಿರುವ ತುಂಗೆ

ಶಿವಮೊಗ್ಗ: ಜಿಲ್ಲೆಯಾದ್ಯಂತ ಬಿಟ್ಟು ಬಿಡದೆ ಮಳೆ ಸುರಿಯುತ್ತಿರುವ ಹಿನ್ನೆಲೆಯಲ್ಲಿ ಜಿಲ್ಲೆಯ ಪ್ರಮುಖ ನದಿಗಳಾದ ತುಂಗಾ, ಭದ್ರೆ, ಶರಾವತಿ, ಕುಮದ್ವತಿ ಹಾಗೂ ವರದಾ ನದಿಗಳು ಮೈದುಂಬಿ ಹರಿಯುತ್ತಿದ್ದು, ನೋಡುಗರನ್ನು ಕೈಬೀಸಿ ಕರೆಯುತ್ತಿವೆ.

ಮೈದುಂಬಿ ಹರಿಯುತ್ತಿರುವ ತುಂಗೆ..

ತುಂಗಾ ನದಿಯ ಹಿನ್ನಿರಿನ ಭಾಗದಲ್ಲಿ ಕಳೆದ 24 ಗಂಟೆಯಿಂದ ಮಳೆ ಸುರಿಯುತ್ತಿರುವುದರಿಂದ ನದಿಯು ತುಂಬಿ ಹರಿಯುತ್ತಿದೆ. ಗಾಜನೂರಿನಲ್ಲಿ ಇರುವ ತುಂಗಾ ಅಣೆಕಟ್ಟೆಗೆ ಸುಮಾರು 80 ಸಾವಿರ ಕ್ಯೂಸೆಕ್‌ನಷ್ಟು ಒಳ ಹರಿವಿದೆ. ಡ್ಯಾಂನಿಂದ 76 ಸಾವಿರ ಕ್ಯೂಸೆಕ್ ನೀರನ್ನು ಹೊರಗೆ ಬಿಡಲಾಗಿದ್ದು, ಇದರಿಂದಾಗಿ ಶಿವಮೊಗ್ಗ ನಗರದ ಕೊರ್ಪಲ್ಲಯ್ಯನ ಛತ್ರದ ಬಳಿಯ ಮಂಟಪ ಮುಳುಗಿದೆ. ಶಿವಮೊಗ್ಗದ ತುಂಗಾ ನದಿಯ ಮಂಟಪ ಮಳುಗಿದರೆ ಶಿವಮೊಗ್ಗದ ಜನರಿಗೆ ಒಂದು ವರ್ಷಗಳ ಕಾಲ ಕುಡಿಯುವ ನೀರಿಗೆ ಹಾಗೂ ಡ್ಯಾಂನ ಜಲಾನಯನ ಪ್ರದೇಶದ ರೈತರ ಕೃಷಿಗೆ ಯಾವುದೇ ಸಮಸ್ಯೆ ಆಗುವುದಿಲ್ಲ ಎಂಬುದು ಜಿಲ್ಲೆಯ ಜನರ ಅಭಿಪ್ರಾಯ. ಕಳೆದ ಬಾರಿ ಮಂಟಪ ಜುಲೈನಲ್ಲಿ ತುಂಬಿದ್ದು ಈ ಬಾರಿ ಆಗಸ್ಟ್‌ನಲ್ಲಿ ತುಂಬಿದೆ.

ತುಂಗಾ ನದಿ ತುಂಬಿ ಹರಿಯುತ್ತಿರುವ ದೃಶ್ಯವನ್ನು ನೋಡಲು ಶಿವಮೊಗ್ಗ ನಗರ ಸೇರಿದಂತೆ ಸುತ್ತಮುತ್ತಲಿನ ಜನ ನದಿಯ ಬಳಿ ಬರುತ್ತಿದ್ದಾರೆ. ನದಿಯ ತಡೆಗೋಡೆಯ ಮೇಲೆ ನಿಂತು ತಮ್ಮ ಮೊಬೈಲ್‌ನಲ್ಲಿ ಸೆಲ್ಫಿ ಕ್ಲಿಕ್ಕಿಸಿಕೊಳ್ಳುತ್ತಿದ್ದಾರೆ. ತುಂಗೆಯು ರಭಸವಾಗಿ ಹರಿಯುತ್ತಿರುವುದನ್ನು ಕಂಡು ಕಣ್ ತುಂಬಿಕೊಳ್ಳುತ್ತಿರುವ ಶಿವಮೊಗ್ಗ ಜನತೆ ಸಂತಸದಲ್ಲಿದ್ದಾರೆ.

Intro:ಶಿವಮೊಗ್ಗ ಜಿಲ್ಲೆಯಲ್ಲಿ ಬಿಟ್ಟು ಬಿಡದೆ ಮಳೆ ಸುರಿಯುತ್ತಿದೆ. ಜಿಲ್ಲೆಯ ಎಲ್ಲಾ ಪ್ರಮುಖ ನದಿಗಳು ತುಂಬಿ ಹರಿಯುತ್ತಿವೆ. ತುಂಗಾ, ಭದ್ರೆ, ಶರಾವತಿ, ಕಮದ್ವತಿ ಹಾಗೂ ವರದ ನದಿಗಳು ಮಳೆಯಿಂದ ತುಂಬಿ ಹರಿಯುತ್ತಿವೆ. ತುಂಗಾ ನದಿಯ ಹಿನ್ನಿರಿನ ಭಾಗದಲ್ಲಿ ಕಳೆದ 24 ಗಂಟೆಯಿಂದ ಮಳೆ ಸುರಿಯುತ್ತಿರುವುದರಿಂದ ನದಿಯು ತುಂಬಿ ಹರಿಯುತ್ತಿದೆ. ಗಾಜನೂರಿನಲ್ಲಿ ಇರುವ ತುಂಗಾ ಅಣೆಕಟ್ಟೆಗೆ ಸುಮಾರು 80 ಸಾವಿರ ಕ್ಯೂಸೆಕ್ ನೀರು ಒಳ ಹರಿವಿದೆ. ಡ್ಯಾಂನಿಂದ 76 ಸಾವಿರ ಕ್ಯೂಸೆಕ್ ನೀರನ್ನು ಹೊರಗೆ ಬಿಡಲಾಗುತ್ತಿದೆ. ಇದರಿಂದ ಶಿವಮೊಗ್ಗ ನಗರದ ಕೊರ್ಪಲ್ಲಯ್ಯನ ಛತ್ರದ ಬಳಿಯ ಮಂಟಪ ಮುಳುಗಿದೆ.

Body:ಶಿವಮೊಗ್ಗದ ಮಂಟಪ ಮಳುಗಿದರೆ ಶಿವಮೊಗ್ಗದ ಜನರಿಗೆ ಒಂದು ವರ್ಷ ಕುಡಿಯುವ ನೀರಿಗೆ ಹಾಗೂ ಡ್ಯಾಂನ ಜಲಾನಯನ ಪ್ರದೇಶದ ರೈತರಿಗೆ ಕೃಷಿಗೆ ಯಾವುದೇ ಸಮಸ್ಯೆ ಆಗುವುದಿಲ್ಲ. ಕಳದ ಭಾರಿ ಮಂಟಪ ಜುಲೈನಲ್ಲಿ ತುಂಬಿತ್ತು. ಈ ವರ್ಷ ಆಗಸ್ಟ್ ನಲ್ಲಿ ತುಂಬಿದೆ.ಇನ್ನೂ ತಗ್ಗು ಪ್ರದೇಶದ ಜನರಿಗೆ ಮಂಟಪ ಮುಳುಗಿದರೆ ಭಯ ಪ್ರಾರಂಭವಾಗುತ್ತದೆ. ಮಂಟಪ ಮುಳುಗುತ್ತಿದ್ದಂತೆಯೇ ತಗ್ಗು ಪ್ರದೇಶಗಳಿ ನೀರು ಸಂಗ್ರಹವಾಗಿ ಮನೆಗಳಿಗೆ ನೀರು ನುಗ್ಗುತ್ತದೆ. ಸದ್ಯ ಮಂಟಪದ ಮೇಲೆ ಐದು ಅಡಿ ನೀರು ಹರಿಯುತ್ತಿದೆ.

Conclusion:ತುಂಗಾ ನದಿ ತುಂಬಿ ಹರಿಯುತ್ತಿರುವ ದೃಶ್ಯವನ್ನು ನೋಡಲು ಶಿವಮೊಗ್ಗ ನಗರ ಸೇರಿದಂತೆ ಸುತ್ತಮುತ್ತಲ ಜನ ನದಿಯ ಬಳಿ ದೌಡಾಯಿಸುತ್ತಿದ್ದಾರೆ. ನದಿಯ ತಡೆಗೋಡೆಯ ಮೇಲೆ ನಿಂತು ಯುವಕರು, ಯುವತಿಯರು ತಮ್ಮ ಮಾಬೈಲ್ ನಲ್ಲಿ ಸೆಲ್ಫಿ ಕ್ಲಿಕಿಸುಕೊಳ್ಳುತ್ತಿದ್ದರು. ನದಿಯು ರಭಸವಾಗಿ ಹರಿಯುತ್ತಿರುವುದನ್ನು ಕಂಡು ಕಣ್ ತುಂಬಿಸಿಕೊಳ್ಳುತ್ತಿದ್ದರು.

ಬೈಟ್: ಶೋಭ. ಗೃಹಿಣಿ.

ಕಿರಣ್ ಕುಮಾರ್. ಶಿವಮೊಗ್ಗ.
ETV Bharat Logo

Copyright © 2024 Ushodaya Enterprises Pvt. Ltd., All Rights Reserved.