ETV Bharat / state

ಕುಜ ದೋಷವೆಂದು ಮದುವೆಗೆ ನಿರಾಕರಿಸಿದ ಪ್ರೇಮಿ: ವಿಷ ಸೇವಿಸಿದ್ದ ಮಹಿಳಾ ಕಾನ್ಸ್​​ಟೇಬಲ್ ಸಾವು - ಕಾನ್ಸ್​​ಟೇಬಲ್ ಸುಧಾ ಸಾವು

ಮೇ. 31ರಂದು ವಿಷ ಸೇವಿಸಿದ್ದ ತೀರ್ಥಹಳ್ಳಿ ಪೊಲೀಸ್ ಠಾಣೆಯ ಮಹಿಳಾ ಕಾನ್ಸ್​​ಟೇಬಲ್ ಸುಧಾ ಚಿಕಿತ್ಸೆ ಫಲಕಾರಿಯಾಗದೇ ಇಂದು ಸಾವನ್ನಪ್ಪಿದ್ದಾರೆ.

lady constable died in shivamogga
ಶಿವಮೊಗ್ಗ ಕಾನ್ಸ್​​ಟೇಬಲ್ ಸಾವು
author img

By

Published : Jun 17, 2022, 12:00 PM IST

ಶಿವಮೊಗ್ಗ: ಜಾತಕದಲ್ಲಿ ಕುಜ ದೋಷವಿದೆಯೆಂದು ಪ್ರೀತಿಸಿದವನು ಮದುವೆಗೆ ನಿರಾಕರಿಸಿದ ಕಾರಣ ವಿಷ ಸೇವಿಸಿದ್ದ ತೀರ್ಥಹಳ್ಳಿ ಪೊಲೀಸ್ ಠಾಣೆಯ ಮಹಿಳಾ ಕಾನ್ಸ್​​ಟೇಬಲ್ ಸುಧಾ ಮಂಗಳೂರಿನ ಆಸ್ಪತ್ರೆಯಲ್ಲಿ ಸಾವನ್ನಪ್ಪಿದ್ದಾರೆ.

ಸುಧಾ ಮತ್ತು ಅರಣ್ಯ ಇಲಾಖೆಯಲ್ಲಿ ಆರ್​ಎಫ್ಒ ಆಗಿ ಸೇವೆ ಸಲ್ಲಿಸುತ್ತಿದ್ದ ಪ್ರವೀಣ್ ಮೊಕಾಶಿ ಪರಸ್ಪರ ಆರು ವರ್ಷಗಳಿಂದ ಪ್ರೀತಿಸುತ್ತಿದ್ದರು. ಪ್ರವೀಣ್ ಅವರು ಸುಧಾ ಅವರ ಜಾತಕವನ್ನು ತನ್ನ ತಾಯಿಗೆ ತೋರಿಸಿದ್ದಾರೆ. ಜಾತಕದಲ್ಲಿ ಕುಜ ದೋಷವಿರುವ ಕಾರಣ ಪ್ರವೀಣ್​​ ತಾಯಿ ಮದುವೆಗೆ ಒಪ್ಪಿಗೆ ನೀಡಿರಲಿಲ್ಲ. ಇದರಿಂದ ಪ್ರವೀಣ್ ಸುಧಾಳನ್ನು ದೂರ ಮಾಡುತ್ತಿದ್ದ. ಆದರೆ, ಸುಧಾ ನಾವಿಬ್ಬರು ಅದಷ್ಟು ಬೇಗ ಮದುವೆಯಾಗೋಣ ಎಂದು ಪ್ರವೀಣ್​ರಲ್ಲಿ ಒತ್ತಾಯ ಮಾಡುತ್ತಿದ್ದರು. ಮೇ. 31ರಂದು ಭದ್ರಾವತಿಯ ಜೋಳದಾಳ್ ಬಳಿ ಕರ್ತವ್ಯದಲ್ಲಿದ್ದ ಪ್ರವೀಣ್​ನ ಬಳಿ ಹೋದ ಸುಧಾ ಮದುವೆ ಆಗಬೇಕು ಎಂದು ಒತ್ತಾಯಿಸಿದ್ದಾರೆ. ಆದರೆ, ಪ್ರವೀಣ್‌ ಒಪ್ಪಿಗೆ ಸೂಚಿಸಿರಲಿಲ್ಲ.

lady constable died in shivamogga
ಕಾನ್ಸ್​​ಟೇಬಲ್ ಸುಧಾ ಸಾವು

ನಮ್ಮ ಮದುವೆಗೆ ಒಪ್ಪಿಗೆ ನೀಡಲಿಲ್ಲ ಎಂದಾದರೆ ಇಬ್ಬರು ಸಾಯೋಣ ಎಂದು ಸುಧಾ ಹೇಳಿದ್ದಾರೆ. ಇಬ್ಬರು ಬೈಕ್​ನಲ್ಲಿ ಭದ್ರಾವತಿಯ ಎಪಿಎಂಸಿ ಬಳಿ ಬಂದು ಮೊದಲು ನೀನು ವಿಷ ಕುಡಿ, ನಂತರ ನಾನು ವಿಷ ಕುಡಿಯುತ್ತೇನೆ ಎಂದು ಹೇಳಿ ಪ್ರವೀಣ್ ನಾಟಕವಾಡಿದ್ದಾರೆ. ಆದರೆ, ಅಸಲಿಗೆ ಪ್ರವೀಣ್​ ವಿಷ ಸೇವಿಸಿರಲಿಲ್ಲ.

ಇದನ್ನೂ ಓದಿ: ಭ್ರಷ್ಟರ ಮೇಲೆ ACB ದಾಳಿ: ಕಂತೆ ಕಂತೆ ಹಣ, ಚಿನ್ನಾಭರಣ ಪತ್ತೆ

ಮೊದಲು ಶಿವಮೊಗ್ಗದ ಮೆಗ್ಗಾನ್ ಆಸ್ಪತ್ರೆಯಲ್ಲಿ ಇಬ್ಬರು ದಾಖಲಾಗಿದ್ರು. ನಂತರ ಸುಧಾರನ್ನು ಹೆಚ್ಚಿನ ಚಿಕಿತ್ಸೆಗೆ ಮಂಗಳೂರಿಗೆ ಕರೆದುಕೊಂಡು ಹೋಗಲಾಗಿತ್ತು. ಸುಧಾ ಇಂದು ಬೆಳಗಿನ ಜಾವ ಸಾವನ್ನಪ್ಪಿದ್ದಾರೆ. ಪ್ರವೀಣ್​ ಒಂದು ವಾರ ಆಸ್ಪತ್ರೆಯಲ್ಲಿದ್ದು ನಂತರ ಡಿರ್ಸಾಜ್ ಆಗಿ ತನ್ನೂರಿಗೆ ಹೋಗಿದ್ದಾರೆ. ಘಟನೆ ಕುರಿತು ಸುಧಾ ಚಿಕಿತ್ಸೆಯಲ್ಲಿರುವಾಗ ಪೊಲೀಸ್ ದೂರಿನಲ್ಲಿ ತಿಳಿಸಿದ್ದರು.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.