ಶಿವಮೊಗ್ಗ: ಸರ್ಕಾರದಿಂದ ಫೋನ್ ಕದ್ದಾಲಿಕೆಯಾಗುತ್ತಿದೆ ಎಂಬ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಆರೋಪಕ್ಕೆ ಗ್ರಾಮೀಣಾಭಿವೃದ್ಧಿ ಸಚಿವ ಕೆ.ಎಸ್.ಈಶ್ವರಪ್ಪ ತಿರುಗೇಟು ನೀಡಿದ್ದಾರೆ.
ಶಿವಮೊಗ್ಗದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಡಿ.ಕೆ.ಶಿವಕುಮಾರ್ ಅವರ ಫೋನ್ ಟ್ಯಾಪ್ ಮಾಡಿ, ಏನ್ ದೇಶದ ಉದ್ಧಾರ ಮಾಡ್ಬೇಕಾ ನನಗೇನು ಅರ್ಥ ಆಗುತ್ತಿಲ್ಲ, ಅವರೇನು ಮಾಡುತ್ತಿದ್ದಾರೆ ಎಂದು ಅವರ ಫೋನ್ ಟ್ಯಾಪ್ ಮಾಡಬೇಕು ಎಂದು ಪ್ರಶ್ನಿಸಿದ್ದಾರೆ.
ಅಲ್ಲದೆ ಇದೊಂದು ಪ್ರಚಾರದ ಒಂದು ತಂತ್ರ. ಈ ಮೂಲಕ ನಾನು ಡೊಡ್ಡವನಾಗುತ್ತೇನೆ ಎಂದುಕೊಂಡಿದ್ದಾರೆ. ಇದು ಅರ್ಥವಿಲ್ಲದ ಆರೋಪ ಎಂದು ತಿರುಗೇಟು ನೀಡಿದರು.