ETV Bharat / state

ನನ್ನ ವಿರುದ್ಧ ಎಷ್ಟು ಪ್ರತಿಭಟನೆ ಮಾಡಿದರೂ ಎದುರಿಸುತ್ತೇನೆ: ಕೆ. ಎಸ್. ಈಶ್ವರಪ್ಪ - kannada top news

ಜನಸಾಮಾನ್ಯರ ಭಾವನೆಗಳನ್ನು ನಾನು ಹೇಳುವವನು ನನ್ನ ವಿರುದ್ದ ಎಷ್ಟು ಪ್ರತಿಭಟನೆ ಮಾಡಿದರೂ ನಾನು ಎದುರಿಸುತ್ತೇನೆ ಎಂದು ಮಾಜಿ ಸಚಿವ ಈಶ್ವರಪ್ಪ ಹೇಳಿದರು.

i-will-face-many-protests-are-made-against-me-ks-eshwarappa
ನನ್ನ ವಿರುದ್ದ ಎಷ್ಟು ಪ್ರತಿಭಟನೆ ಮಾಡಿದರೂ ಎದುರಿಸುತ್ತೇನೆ: ಕೆ.ಎಸ್.ಈಶ್ವರಪ್ಪ
author img

By

Published : Mar 16, 2023, 5:12 PM IST

ನನ್ನ ವಿರುದ್ಧ ಎಷ್ಟು ಪ್ರತಿಭಟನೆ ಮಾಡಿದರೂ ಎದುರಿಸುತ್ತೇನೆ: ಕೆ. ಎಸ್. ಈಶ್ವರಪ್ಪ

ಶಿವಮೊಗ್ಗ: ಆಜಾನ್ ಕೂಗುತ್ತಿರುವುದರಿಂದ ವಿದ್ಯಾರ್ಥಿಗಳಿಗೆ ಎಷ್ಟು ತೊಂದರೆ ಆಗುತ್ತಿದೆ ಎಂದು ಪೋಷಕರಿಗೆ ಗೊತ್ತು ಹಾಗೂ ಆಸ್ಪತ್ರೆಯಲ್ಲಿ ಇರುವ ರೋಗಿಗಳಿಗೆ ಗೊತ್ತು. ಇಂತಹ ವಿಷಯಗಳ ಕುರಿತು ಬಹಿರಂಗವಾಗಿ ಹೇಳಲು ನಾನು ಹಿಂದೆ ಮುಂದೆ ನೋಡಲ್ಲ ಎಂದು ಮಾಜಿ ಸಚಿವ ಕೆ.ಎಸ್. ಈಶ್ವರಪ್ಪ ಅವರು ಇತ್ತೀಚೆಗೆ ಆಜಾನ್​ ಕುರಿತು ನೀಡಿದ್ದ ತಮ್ಮ ಹೇಳಿಕೆಯನ್ನು ಸಮರ್ಥನೆ ಮಾಡಿಕೊಂಡಿದ್ದಾರೆ.

ನಗರದಲ್ಲಿಂದು ಇದೇ ವಿಷಯವಾಗಿ ಸುದ್ದಿಗಾರರೂಂದಿಗೆ ಮಾತನಾಡಿದ ಅವರು, ಬೇರೆಯವರಿಗೆ ತೊಂದರೆ ಆಗದ ರೀತಿಯಲ್ಲಿ ಆಜಾನ್​ ಕೂಗಬೇಕು ಎಂದು ಸುಪ್ರೀಂ ಕೋರ್ಟ್ ತೀರ್ಪು ನೀಡಿದೆ. ರಾತ್ರಿ 10 ಗಂಟೆಯಿಂದ ಬೆಳಗ್ಗೆ 6 ಗಂಟೆಯವರೆಗೆ ಮೈಕ್ ಬಳಸುವುದು ನಿಷೇಧ ಎಂದು ಸುಪ್ರೀಂ ಕೋರ್ಟ್ ತೀರ್ಪು ಇದ್ದರೂ ಕೂಡಾ ಈ ರೀತಿ ಮಾಡುತ್ತಾರೆ. ಜನಸಾಮಾನ್ಯರ ಭಾವನೆಗಳನ್ನು ನಾನು ಹೇಳುವವನು. ನನ್ನ ವಿರುದ್ಧ ಎಷ್ಟು ಪ್ರತಿಭಟನೆ ಮಾಡಿದರೂ ನಾನು ಎದುರಿಸುತ್ತೇನೆ ಎಂದು ಹೇಳಿದರು.

ಮೂಡಿಗೆರೆ ಶಾಸಕ ಕುಮಾರಸ್ವಾಮಿ ವಿರುದ್ಧ ಕಾರ್ಯಕರ್ತರ ಪ್ರತಿಭಟನೆ: ಕೆಲವರಿಗೆ ಆ ಶಾಸಕ ಮಾಡಿರುವ ಕೆಲಸ ಸಮಾಧಾನ ಇಲ್ಲ ಎಂದು ಅನಿಸಿರಬಹುದು. ಪ್ರಜಾಪ್ರಭುತ್ವದಲ್ಲಿ ಈ ರೀತಿ ಪ್ರತಿಭಟನೆ ಮಾಡಲು ಅವಕಾಶ ಇರುತ್ತದೆ. ಪ್ರತಿಭಟನೆ ಮಾಡಲು ಅವಕಾಶ ಇಲ್ಲ ಅಂದರೆ ಅದನ್ನು ಪ್ರಜಾಪ್ರಭುತ್ವ ಎಂದು ಕರೆಯುವುದಿಲ್ಲ. ಪ್ರತಿಭಟನೆ ಮಾಡೋದು ಸರಿನೋ ತಪ್ಪೋ ಎಂದು ಯಾರು ಪ್ರತಿಭಟನೆ ಮಾಡಿದ್ದಾರೋ ಅವರು ಯೋಚನೆ ಮಾಡಬೇಕು ಎಂದರು.

ಸರಿ ಎನ್ನುವುದಾದರೆ ಅದನ್ನು ಎದುರಿಸಬೇಕು. ಪ್ರತಿಭಟನೆ ಸರಿಯಲ್ಲ ಎನ್ನುವುದಾದರೆ ಅದನ್ನು ತಿದ್ದಿಕೊಳ್ಳಬೇಕು. ಕಾರ್ಯಕರ್ತರ ಜೊತೆ ಕುಳಿತುಕೊಂಡು ಸಮಾಧಾನ ಮಾಡುವ ದಿಕ್ಕಿನಲ್ಲಿ ಪ್ರಯತ್ನ ಮಾಡಬೇಕು. ಇಲ್ಲದಿದ್ದರೆ ಇದು ಮುಂದುವರಿದುಕೊಂಡು ಹೋಗುತ್ತದೆ. ಇನ್ನೂ ಕೆಲವರು ಬೇಕು ಅಂತಾನೇ ಪ್ರತಿಭಟನೆ ಮಾಡುತ್ತಾರೆ. ಇಷ್ಟ ಬಂದಾಗೆ ಪ್ರತಿಭಟನೆ ಮಾಡಿದರೆ ಅವರು ಹೇಳಿದ ಹಾಗೆ ಕೇಳುವುದಕ್ಕೆ ಆಗುತ್ತದಾ ಎಂದು ಈಶ್ವರಪ್ಪ ಪ್ರಶ್ನಿಸಿದರು.

ಇದನ್ನೂ ಓದಿ: ಮಂಗಳೂರಿನ ವಿಜಯಸಂಕಲ್ಪ ಯಾತ್ರೆಯಲ್ಲಿ ಆಝಾನ್ ವಿರುದ್ಧ ಅಸಮಾಧಾನಗೊಂಡ ಈಶ್ವರಪ್ಪ

ಸಚಿವ ಸೋಮಣ್ಣ ಅಸಮಾಧಾನ ವಿಚಾರ: ಸಚಿವ ವಿ ಸೋಮಣ್ಣ ಅವರು ತಮಗೆ ಅಸಮಾಧಾನವಿಲ್ಲ ಎಂದು ತಿಳಿಸಿದ್ದಾರೆ. ಆ ವಿಷಯ ಮುಗಿದು ಹೋಗಿದೆ ಅಂತಾ ಅವರೇ ಹೇಳಿದ ಮೇಲೆ ನೀವು ಏಕೆ ಮುಂದುವರಿಸುತ್ತೀರಾ ಎಂದು ಮಾಧ್ಯಮದವರಿಗೆ ಪ್ರಶ್ನೆ ಮಾಡಿದರು. ನನಗೆ ಸಮಾಧಾನ ಆಗಿದೆ ಎಂದು ಸೋಮಣ್ಣ ಅವರೇ ಹೇಳಿದ್ದಾರೆ.‌ ಅವರು ಹೇಳಿದ ಮೇಲೆ ಈ ಪ್ರಶ್ನೆ ಮತ್ತೆ ಏಕೆ ಕೇಳ್ತೀರಾ ಎಂದರು.

ಬಿಜೆಪಿಯಲ್ಲಿ ಮಾತ್ರ ಅಸಮಾಧಾನ ಇರುವವರನ್ನು ಕರೆದು ಮಾತನಾಡಿಸುವ ಪದ್ಧತಿ‌ ಇದೆ. ಕೇಂದ್ರದ ನಾಯಕರು ಸೋಮಣ್ಣನ ಜೊತೆ ಮಾತುಕತೆ ನಡೆಸಿದ್ದಾರೆ. ರಾಜ್ಯದಲ್ಲಿ ಚುನಾವಣೆ ನಡೆಯುವ ಸಂದರ್ಭದಲ್ಲಿ ಕೆಲವರಿಗೆ ಬೇಸರ ಆಗುತ್ತಿರುತ್ತದೆ ಎಂದು ಹೇಳಿದರು.

ಇದನ್ನೂ ಓದಿ: ದೇಶದ ಮರ್ಯಾದೆ ವಿದೇಶದಲ್ಲಿ ಹರಾಜು ಮಾಡಿದ ರಾಹುಲ್, ತಕ್ಷಣ ಕ್ಷಮೆಯಾಚಿಸಬೇಕು: ಸಾಧ್ವಿ ನಿರಂಜನ ಜ್ಯೋತಿ

ETV Bharat Logo

Copyright © 2025 Ushodaya Enterprises Pvt. Ltd., All Rights Reserved.