ಶಿವಮೊಗ್ಗ: ಬ್ಯಾಂಕ್ಗೆ ಬಂದಿದ್ದ ವೃದ್ಧನೋರ್ವ ತಲೆ ತಿರುಗಿ ಬಿದ್ದಿದ್ದು ತಕ್ಷಣ ಸ್ಥಳಕ್ಕೆ ಬಂದ ಡಿಸಿ ಹಾಗೂ ಎಸ್ಪಿ ಆ ವೃದ್ಧನನ್ನು ಆಸ್ಪತ್ರೆಗೆ ಕಳುಹಿಸಿ ಮಾನವೀಯತೆ ಮೆರೆದಿದ್ದಾರೆ.
![DC and SP done well job in Shivamogga](https://etvbharatimages.akamaized.net/etvbharat/prod-images/kn-smg-01-dcsp-goodwork-7204213_28042020144514_2804f_1588065314_700.jpg)
ಇಲ್ಲಿನ ವಾಣಿಜ್ಯ ಕೇಂದ್ರ ಗಾಂಧಿ ಬಜಾರ್ಗೆ ಜಿಲ್ಲಾಧಿಕಾರಿ ಕೆ.ಬಿ. ಶಿವಕುಮಾರ್ ಹಾಗೂ ಎಸ್ಪಿ ಶಾಂತರಾಜು ಅವರು ಇಂದು ಭೇಟಿ ನೀಡಿದ್ದರು. ಇದೇ ವೇಳೆ, ವೃದ್ಧ ಮಹೇಂದ್ರ ಎಂಬುವವರು ಸಹ ಎಸ್ಬಿಐ ಬ್ಯಾಂಕ್ಗೆ ಆಗಮಿಸಿದ್ದರು.
ಬ್ಯಾಂಕ್ ಮೊದಲನೆಯ ಮಹಡಿಯಲ್ಲಿದ್ದು, ಎಲ್ಲರಂತೆ ಮಹೇಂದ್ರ ಸರದಿ ಸಾಲಿನಲ್ಲಿ ನಿಂತಿದ್ದರು. ಈ ವೇಳೆ, ಆಯಾಸವಾಗಿದ್ದರಿಂದ ಅಲ್ಲೇ ತಲೆ ತಿರುಗಿ ಬಿದ್ದಿದ್ದಾರೆ. ಹಿಂದೆ ನಿಂತ ಕೆಲವರು ವೃದ್ಧನನ್ನು ಹಿಡಿದು ಉಪಚರಿಸುವಾಗ ಜನಸಂದಣಿ ಸೇರಿದೆ.
ಈ ವೇಳೆ, ಸ್ಥಳಕ್ಕೆ ಬಂದ ಜಿಲ್ಲಾಧಿಕಾರಿ ಶಿವಕುಮಾರ್ ಹಾಗೂ ಎಸ್ಪಿ ಶಾಂತರಾಜು ಅವರು ವೃದ್ಧನನ್ನು ಪೊಲೀಸ್ ಜೀಪಿನಲ್ಲಿ ಖಾಸಗಿ ಆಸ್ಪತ್ರೆಗೆ ಕಳುಹಿಸಿಕೊಟ್ಟಿದ್ದಾರೆ. ಸದ್ಯ ವೃದ್ಧ ಮಹೇಂದ್ರ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಇನ್ನು ಡಿಸಿ ಹಾಗೂ ಎಸ್ಪಿ ಅವರ ಕಾರ್ಯಕ್ಕೆ ಸಾರ್ವಜನಿಕರು ಭೇಷ್ ಎಂದಿದ್ದಾರೆ.