ETV Bharat / state

ಸಂಸದ ಎ.ನಾರಾಯಣಸ್ವಾಮಿಗೆ ಗೊಲ್ಲರ ಹಟ್ಟಿ ಪ್ರವೇಶ ನಿರಾಕಣೆ, ರಾಜ್ಯ ಮಾದಿಗ ಸಮಾಜದಿಂದ ಆಕ್ರೋಶ - ಸಂಸದ ಎ ನಾರಾಯಣಸ್ವಾಮಿ

ಸಂಸದ ಎ.ನಾರಾಯಣಸ್ವಾಮಿಗೆ ಗೊಲ್ಲರ ಹಟ್ಟಿಗೆ ಪ್ರವೇಶ ನೀಡದ್ದಕ್ಕೆ ಕರ್ನಾಟಕ ರಾಜ್ಯ ಮಾದಿಗ ಸಮಾಜದಿಂದ ಆಕ್ರೋಶ ವ್ಯಕ್ತವಾಗಿದೆ.

ರಾಜ್ಯ ಮಾದಿಗ ಸಮಾಜದಿಂದ ಆಕ್ರೋಶ
author img

By

Published : Sep 18, 2019, 8:34 PM IST

ಶಿವಮೊಗ್ಗ: ಚಿತ್ರದುರ್ಗದ ಸಂಸದ ಎ.ನಾರಾಯಣಸ್ವಾಮಿಗೆ ತುಮಕೂರು ಜಿಲ್ಲೆಯ ಪಾವಗಡ ತಾಲೂಕಿನ ಗೊಲ್ಲರಹಟ್ಟಿ ಗ್ರಾಮಸ್ಥರು ಪ್ರವೇಶ ನಿರಾಕರಿಸಿ ಅಸ್ಪೃಶ್ಯತೆ ಆಚರಿಸಿರುವುದನ್ನು ಕರ್ನಾಟಕ ರಾಜ್ಯ ಮಾದಿಗ ಸಮಾಜ ಖಂಡಿಸಿದೆ.

ರಾಜ್ಯ ಮಾದಿಗ ಸಮಾಜದಿಂದ ಆಕ್ರೋಶ

ನಗರದಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ರಾಜ್ಯಾಧ್ಯಕ್ಷ ಎಸ್.ಮಂಜುನಾಥ್, ದೇಶಕ್ಕೆ ಸ್ವಾತಂತ್ರ್ಯ ಬಂದು 73 ವರ್ಷಗಳು ಕಳೆದರೂ ಅಸ್ಪೃಶ್ಯತೆಯನ್ನು ಜೀವಂತವಾಗಿರಿಸಿದ್ದಾರೆ. ಕೇಂದ್ರ ಸರ್ಕಾರದ ಹಲವು ಸವಲತ್ತುಗಳನ್ನು ನೀಡಲು ಭೇಟಿ ಮಾಡಿದ ಸಂದರ್ಭದಲ್ಲಿ ಮಾದಿಗ ಜನಾಂಗಕ್ಕೆ ಸೇರಿದ ಸಂಸದರು ಎಂಬ ಕಾರಣಕ್ಕೆ ಗ್ರಾಮದ ಒಳಗಡೆ ಬಿಡದೆ, ಊರಿನ ಹೊರಗೆ ಆಸನ ಹಾಕಿ ಉಳಿದ ಅಧಿಕಾರಿಗಳಿಗೆ ಪ್ರವೇಶ ನೀಡಿರುವುದು ಅಕ್ಷಮ್ಯ ಅಪರಾಧ.ಈ ಸಂದರ್ಭದಲ್ಲಿ ಸಂಸದರ ರಕ್ಷಣೆಗೆ ಬಂದ ಪೊಲೀಸರು ಸಹ ಸುಮ್ಮನೆ ಬಂದಿದ್ದಾರೆ ಎಂದು ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ಸಾಮಾಜಿಕ ಸಮಾನತೆ ಬಗ್ಗೆ ಮಾತನಾಡುವ ಬಿಜೆಪಿ ರಾಜ್ಯ ಮತ್ತು ಕೇಂದ್ರ ಸರ್ಕಾರ ಈ ಘಟನೆಗೆ ಸಂಬಂಧಿಸಿದ ತಪ್ಪಿತಸ್ಥರ ವಿರುದ್ಧ ಕೂಡಲೇ ಕ್ರಮ ಕೈಗೊಳ್ಳಬೇಕು. ಇಲ್ಲವಾದರೆ ಮುಂದಿನ ದಿನಗಳಲ್ಲಿ ರಾಜ್ಯದ ಮಾದಿಗ ಸಮಾಜ ಗೊಲ್ಲರ ಹಟ್ಟಿಗೆ ನುಗ್ಗಬೇಕಾಗುತ್ತದೆ ಎಂದು ಎಚ್ಚರಿಸಿದರು.

Intro:ಶಿವಮೊಗ್ಗ,
ಚಿತ್ರದುರ್ಗದ ಸಂಸದ ಎ ನಾರಾಯಣಸ್ವಾಮಿ ಅವರಿಗೆ ತುಮಕೂರು ಜಿಲ್ಲೆಯ ಪಾವಗಡ ತಾಲೂಕಿನ ಗೊಲ್ಲರಟ್ಟಿ ಗ್ರಾಮಸ್ಥರು ಪ್ರವೇಶನ ನಿರಾಕರಿಸಿ ಅಸ್ಪೃಶ್ಯತೆ ಆಚರಣೆ ಮಾಡಿರುವುದು ಖಂಡನಿಯ ಇದನ್ನ ಕರ್ನಾಟಕ ರಾಜ್ಯ ಮಾದಿಗ ಸಮಾಜ ಖಂಡಿಸುತ್ತದೆ ಎಂದು ರಾಜ್ಯಧ್ಯಕ್ಷ ಎಸ್ ಮಂಜುನಾಥ್ ತಿಳಿಸಿದರು.

ಸುದ್ದಿಗೋಷ್ಠಿ ನಡೆಸಿ ಮಾತನಾಡಿದವರು ದೇಶಕ್ಕೆ ಸ್ವಾತಂತ್ರ್ಯ ಬಂದು 73 ವರ್ಷಗಳು ಕಳೆದರೂ ಅಸ್ಪೃಶ್ಯತೆಯನ್ನು ಜೀವಂತವಾಗಿರಿಸಿ ಈಗಲೂ ಆಚರಿಸುತ್ತಿರುವುದನ್ನು ನಾವು ಖಂಡಿಸುತ್ತೇವೆ ಎಂದರು.
ಕೇಂದ್ರ ಸರ್ಕಾರದ ಹಲವು ಸವಲತ್ತುಗಳನ್ನು ನೀಡಲು ಭೇಟಿ ಮಾಡಿದ ಸಂದರ್ಭದಲ್ಲಿ ಮಾದಿಗ ಜನಾಂಗಕ್ಕೆ ಸೇರಿದ ಸಂಸದರು ಎಂಬ ಕಾರಣಕ್ಕೆ ಗ್ರಾಮದ ಒಳಗಡೆ ಬಿಡದೆ ಊರಿನ ಹೊರಗೆ ಆಸನ ಹಾಕಿ ಉಳಿದ ಅಧಿಕಾರಿಗಳಿಗೆ ಪ್ರವೇಶ ನೀಡಿರುವುದು ಅಕ್ಷಮ್ಯ ಅಪರಾಧ ಹಾಗೂ ಈ ಸಂದರ್ಭದಲ್ಲಿ ಸಂಸದರ ರಕ್ಷಣೆಗೆ ಬಂದ ಪೊಲೀಸರು ಸಹ ಸುಮನ್ನೆ ಬಂದಿದ್ದಾರೆ ಹಾಗಾಗಿ ಕೂಡಲೇ ಪೊಲೀಸರನ್ನು ಹಾಗೂ ಅವರ ಜೊತೆ ಇದ್ದ ಅಧಿಕಾರಿಗಳನ್ನು ಕೂಡಲೇ ಅಮಾನತು ಮಾಡಬೇಕು. ಎಂದರು. ಸಂಸದರಿಗೆ ಬಿಡದ ಇವರು ಬಡವರಿಗೆ ಬಿಡುವರೆ ಎಂದು ಪ್ರಶ್ನಿಸಿದರು.
ಹಾಗೇಯೆ
ಸಾಮಾಜಿಕ ಸಮಾನತೆ ಬಗ್ಗೆ ಮಾತನಾಡುವ ಬಿಜೆಪಿ ರಾಜ್ಯ ಮತ್ತು ಕೇಂದ್ರ ಸರ್ಕಾರ ತಮ್ಮ ಸಂಸದರಿಗೆ ಅಸ್ಪೃಶ್ಯತೆ ಆಚರಣೆ ಮಾಡಿರುವುದನ್ನು ಖಂಡಿಸಿ ತಪ್ಪಿತಸ್ಥರ ವಿರುದ್ಧ ಕೂಡಲೇ ಕ್ರಮ ಕೈಗೊಳ್ಳಬೇಕು ಇಲ್ಲವಾದರೆ
ಮುಂದಿನ ದಿನಗಳಲ್ಲಿ ರಾಜ್ಯದ ಮಾದಿಗ ಸಮಾಜ ಗೊಲ್ಲರ ಹಟ್ಟಿಗೆ ನುಗ್ಗಬೇಕಾಗುತ್ತದೆ ಎಂದು ಎಚ್ಚರಿಸಿದರು.
ಬೈಟ್.. ಎಸ್ ಮಂಜುನಾಥ್ ರಾಜ್ಯಾಧ್ಯಕ್ಷರು ಕರ್ನಾಟಕ ಮಾದಿಗರ ಸಂಘಟನೆಗಳ ಸ್ವಾಬಿಮಾನದ ಒಕ್ಕೂಟ
ಭೀಮಾನಾಯ್ಕ ಎಸ್ ಶಿವಮೊಗ್ಗ

Body:ಭೀಮಾನಾಯ್ಕ ಎಸ್ ಶಿವಮೊಗ್ಗ

Conclusion:
ETV Bharat Logo

Copyright © 2025 Ushodaya Enterprises Pvt. Ltd., All Rights Reserved.