ETV Bharat / state

'ಸಶಸ್ತ್ರ ಪಡೆಗಳ ಧ್ವಜ ಖರೀದಿಸಿ, ಸೈನಿಕರ ಕಲ್ಯಾಣಕ್ಕೆ ಸಹಕರಿಸಿ' - ಧ್ವಜ ದಿನಾಚರಣೆ

ನಗರದ ಸೈನಿಕ ಪಾರ್ಕ್​ನಲ್ಲಿ ಸೈನಿಕ ಕಲ್ಯಾಣ ಮತ್ತು ಪುನರ್ವಸತಿ ಇಲಾಖೆ ಹಮ್ಮಿಕೊಂಡಿದ್ದ ಸಶಸ್ತ್ರ ಪಡೆಗಳ ಧ್ವಜ ದಿನಾಚರಣೆ ಕಾರ್ಯಕ್ರಮದಲ್ಲಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕೆ.ಎಂ. ಶಾಂತರಾಜ್ ಭಾಗವಹಿಸಿ ಧ್ವಜ ಚೀಟಿ ಬಿಡುಗಡೆಗೊಳಿಸಿದರು.

flag day celebration
ಧ್ವಜ ದಿನಾಚರಣೆ
author img

By

Published : Dec 7, 2019, 5:01 PM IST

ಶಿವಮೊಗ್ಗ: ತ್ಯಾಗ, ಸಮರ್ಪಣೆಯಿಂದ ದೇಶಸೇವೆ ಮಾಡುತ್ತಿರುವ ಸೈನಿಕರ ಕಲ್ಯಾಣದ ಜವಾಬ್ದಾರಿ ಎಲ್ಲಾ ಸಾರ್ವಜನಿಕರ ಮೇಲಿದೆ. ಸಶಸ್ತ್ರ ಪಡೆಗಳ ಧ್ವಜ ದಿನಾಚರಣೆಯನ್ನು ನಾವು ನಮ್ಮ ಕೈಲಾದಷ್ಟು ಮಟ್ಟಿಗೆ ಧ್ವಜ ಖರೀದಿಸಿ ಧನಸಹಾಯ ಮಾಡಬೇಕು. ಈ ಮೂಲಕ ನಾವು ನಮ್ಮ ದೇಶದ ಕರ್ತವ್ಯ ನಿರ್ವಹಿಸಿದ ಭಾವನೆ ಬರುತ್ತದೆ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕೆ.ಎಂ. ಶಾಂತರಾಜ್ ಹೇಳಿದ್ದಾರೆ.

ಧ್ವಜ ದಿನಾಚರಣೆ ಕಾರ್ಯಕ್ರಮ

ನಗರದ ಸರ್ಕಾರಿ ನೌಕರರ ಭವನದ ಬಳಿಯಿರುವ ಸೈನಿಕ ಪಾರ್ಕ್​ನಲ್ಲಿ ಸೈನಿಕ ಕಲ್ಯಾಣ ಮತ್ತು ಪುನರ್ವಸತಿ ಇಲಾಖೆ ಇವರು ಹಮ್ಮಿಕೊಂಡಿದ್ದ ಸಶಸ್ತ್ರ ಪಡೆಗಳ ಧ್ವಜ ದಿನಾಚರಣೆ ಕಾರ್ಯಕ್ರಮದಲ್ಲಿ ಧ್ವಜ ಚೀಟಿ ಬಿಡುಗಡೆಗೊಳಿಸಿ ಮಾತನಾಡುತ್ತಾ, ಸೈನಿಕರು ರಾತ್ರಿ ಹಗಲೆನ್ನದೆ ನಮಗಾಗಿ ಮತ್ತು ದೇಶಕ್ಕಾಗಿ ಹೋರಾಡುತ್ತಿದ್ದಾರೆ. ಅವರ ತ್ಯಾಗ, ಬಲಿದಾನಗಳ ಬಗ್ಗೆ ನಮಗೆ ಅರಿವಿರಬೇಕು ಎಂದರು.

ಕಾರ್ಯಕ್ರಮದಲ್ಲಿ ನಿವೃತ್ತ ಯೋಧರು,ಅಪರ ಜಿಲ್ಲಾಧಿಕಾರಿ ಜಿ. ಅನುರಾಧ, ಮಾಜಿ ಸೈನಿಕ ಸಂಘದ ಅಧ್ಯಕ್ಷ ಕೃಷ್ಣಾರೆಡ್ಡಿ, ಪಾಲಿಕೆ ಆಯುಕ್ತ ಚಿದಾನಂದ ವಟಾರೆ ಹಾಗು ಕರ್ನಲ್ ಡಾ.ರಘುನಾಥ್ ಮತ್ತಿತರಿದ್ದರು.

Intro:ಶಿವಮೊಗ್ಗ,

ತ್ಯಾಗ ಮತ್ತು ಸಮರ್ಪಣೆ ಯಿಂದ ದೇಶಸೇವೆ ಮಾಡುತ್ತಿರುವ ಸೈನಿಕರ ಕಲ್ಯಾಣದ ಜವಾಬ್ದಾರಿ ಎಲ್ಲಾ ಸಾರ್ವಜನಿಕರ ಮೇಲೆ ಇದ್ದು. ಶಶಸ್ತ್ರ ಪಡೆಗಳ ಧ್ವಜ ದಿನಾಚರಣೆಯನ್ನು ನಾವು ನಮ್ಮ ಕೈಲಾದಷ್ಟು ದ್ವಜ ಖರೀದಿ ಮಾಡಿ ಧನಸಹಾಯ ಮಾಡಿದಾಗ ಸ್ವಲ್ಪಮಟ್ಟಿಗಾದರೂ ಕರ್ತವ್ಯ ನಿರ್ವಹಿಸಿದ ಭಾವನೆ ಬರುತ್ತದೆ.
ಸೈನಿಕ ರು ರಾತ್ರಿ ಹಗಲು ಎನ್ನದೇ ನಮ್ಮಗಲಿಗಾಗಿ ಹೋರಾಟ ಮಾಡುತ್ತಿದ್ದಾರೆ ಅವರ ತ್ಯಾಗ ಬಲಿದಾನಗಳು ನಮಗೆ ಅರಿವು ಇರಬೇಕು ಎಂದು ಜಿಲ್ಲಾ ಪೋಲಿಸ್ ವರಿಷ್ಠಾಧಿಕಾರಿ ಕೆ.ಎಂ ಶಾಂತರಾಜ್ ತಿಳಿಸಿದರು.

ನಗರದ ಸರ್ಕಾರಿ ನೌಕರರ ಭವನದ ಬಳಿಯಿರುವ ಸೈನಿಕ ಪಾರ್ಕ್ ನಲ್ಲಿ ಸೈನಿಕ ಕಲ್ಯಾಣ ಮತ್ತು ಪುನರ್ವಸತಿ ಇಲಾಖೆ ಇವರು ಹಮ್ಮಿಕೊಂಡಿದ್ದ ಸಶಸ್ತ್ರ ಪಡೆಗಳ ಧ್ವಜ ದಿನಾಚರಣೆ ಕಾರ್ಯಕ್ರಮದಲ್ಲಿ ಧ್ವಜ ಚೀಟಿ ಬಿಡುಗಡೆಗೊಳಿಸಿ ಮಾತನಾಡಿದರು.
ಕಾರ್ಯಕ್ರಮದಲ್ಲಿ ನಿವೃತ್ತ ಯೋಧರು ಹಾಗೂ ಅಪರ ಜಿಲ್ಲಾಧಿಕಾರಿ ಜಿ ಅನುರಾಧ ,ಮಾಜಿ ಸೈನಿಕ ಸಂಘದ ಅಧ್ಯಕ್ಷರಾದ ಕೃಷ್ಣಾರೆಡ್ಡಿ, ಪಾಲಿಕೆ ಆಯುಕ್ತರಾದ ಚಿದಾನಂದ ವಟಾರೆ, ಕರ್ನಲ್ ಡಾ. ರಘುನಾಥ್ ಮತ್ತಿತರಿದ್ದರು.

Body:ಭೀಮಾನಾಯ್ಕ ಎಸ್ ಶಿವಮೊಗ್ಗ

Conclusion:
ETV Bharat Logo

Copyright © 2025 Ushodaya Enterprises Pvt. Ltd., All Rights Reserved.