ಶಿವಮೊಗ್ಗ: ಕಳೆದ ಎರಡು ದಿನಗಳ ಹಿಂದೆ ಶಿಕಾರಿಪುರದ ಹುಚ್ಚರಾಯ ಸ್ವಾಮಿ ಕೆರೆ ಸಂಪರ್ಕಿಸುವ ಕಾಲುವೆಯಲ್ಲಿ ಸಿಲುಕಿದ್ದ ಹಸುವೊಂದು ಪವಾಡದಂತೆ ಬದುಕುಳಿದಿದೆ.
ಶಿಕಾರಿಪುರದ ಪ್ರಸಿದ್ದ ಹುಚ್ಚರಾಯ ಸ್ವಾಮಿ ದೇವಾಲಯದ ಕೆರೆಯ ನೀರು ಹರಿದು ಹೋಗಲು ನಿರ್ಮಿಸಿದ್ದ ಕಾಲುವೆಯ ಸುರಂಗದಲ್ಲಿ ಕಳೆದ ಎರಡು ದಿನಗಳ ಹಿಂದೆ ಹಸು ಸಿಲುಕಿತ್ತು. ಮಳೆ ಹೆಚ್ಚಾಗಿದ್ದ ಕಾರಣ ಕಾಲುವೆಯಲ್ಲಿ ನೀರಿನ ಹರಿವು ಜೋರಾಗಿತ್ತು.
ಇದರಿಂದ ಹಸು ಮೃತ ಪಟ್ಟಿದೆ ಎಂದು ತಿಳಿದ ತಾಲೂಕು ಆಡಳಿತ ಅಗ್ನಿ ಶಾಮಕದಳದವರಿಗೆ ತಿಳಿತ್ತು. ಹಸುವನ್ನು ಮೇಲಕ್ಕೆ ಎತ್ತಲು ಹೋದಾಗ ಎಲ್ಲಾರಿಗೂ ಅಚ್ಚರಿ ಕಾದಿತ್ತು. ಹಸು ಎರಡು ದಿನ ನೀರಿನಲ್ಲಿ ಇದ್ದರು ಸಹ ಪವಾಡ ಎಂಬಂತೆ ಬದುಕಿತ್ತು.
ತಕ್ಷಣ ಅಗ್ನಿ ಶಾಮಕದಳದವರು ಕಾಲುವೆಯ ಸುರಂಗದ ಕಬ್ಬಿಣದ ಸರಳುಗಳನ್ನು ಕಟ್ ಮಾಡಿ, ತಮ್ಮ ಜೀವವನ್ನೆ ಪಣಕ್ಕಿಟ್ಟು ಮೇಲೆತ್ತಿ, ನಂತ್ರ ಹಸುವನ್ನು ಮಾಲೀಕನಿಗೆ ಒಪ್ಪಿಸಿದ್ದಾರೆ. ಅಗ್ನಿ ಶಾಮಕದಳವರ ಪ್ರಯತ್ನಕ್ಕೆ ಶಿಕಾರಿಪುರ ತಹಸೀಲ್ದಾರ್ ಕವಿರಾಜ್ ಸಾಮಾಜಿಕ ಜಾಲತಾಣದಲ್ಲಿ ಹ್ಯಾಟ್ಸ ಆಫ್ ಹೇಳಿದ್ದಾರೆ.