ಶಿವಮೊಗ್ಗ: ನಿನ್ನೆ ಕೆರೆ ಕೋಡಿಯಲ್ಲಿ ತೇಲಿ ಹೋಗಿದ್ದ ವ್ಯಕ್ತಿಯೊಬ್ಬರ ಶವ ಇಂದು ಪತ್ತೆಯಾಗಿದೆ. ಭದ್ರಾವತಿ ತಾಲೂಕು ಹೊಳೆಹೊನ್ನೂರು ಸಮೀಪದ ಎಮ್ಮೆಹಟ್ಟೆ ಗ್ರಾಮದ ನಿವಾಸಿ ರವಿ(40) ನಿನ್ನೆ ಸಂಜೆ ಕೊಪ್ಪದ ಕೆರೆಯ ಕೋಡಿ ಮೇಲೆ ನಡೆದುಕೊಂಡು ಬರುವಾಗ ನೀರಿನ ರಭಸಕ್ಕೆ ತೇಲಿ ಹೋಗಿದ್ದರು.
ನಿನ್ನೆ ರಾತ್ರಿ ಶವಕ್ಕಾಗಿ ಹುಡುಕಾಟ ನಡೆಸಿದರೂ ಸಹ ಯಾವುದೇ ಪ್ರಯೋಜನವಾಗಿರಲಿಲ್ಲ.ಇಂದು ಬೆಳಗ್ಗೆ ಕೆರೆಯ ಕೆಳಭಾಗದಲ್ಲಿ ಗಿಡದಲ್ಲಿ ಶವ ಸಿಲುಕಿಕೊಂಡಿತ್ತು. ಗ್ರಾಮಸ್ಥರು ಶವವನ್ನು ಮೇಲೆತ್ತಿದ್ದಾರೆ. ಸ್ಥಳಕ್ಕೆ ಹೊಳೆಹೊನ್ನೂರು ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.