ETV Bharat / state

ಪಿಯುಸಿ ಪರೀಕ್ಷೆ: ವಾಣಿಜ್ಯ ವಿಭಾಗದಲ್ಲಿ ಇವರೇ ನೋಡಿ ಟಾಪರ್ಸ್!

ಪಿಯುಸಿ ಪರೀಕ್ಷೆ ಫಲಿತಾಂಶ: ಶಿವಮೊಗ್ಗ ಜಿಲ್ಲೆಯ ತೀರ್ಥಹಳ್ಳಿ ತಾಲೂಕಿನ ರೈತನ ಮಗಳು ವಾಣಿಜ್ಯ ವಿಭಾಗದಲ್ಲಿ ರಾಜ್ಯಕ್ಕೆ 2ನೇ ಸ್ಥಾನ ಪಡೆದಿದ್ದಾರೆ.

Second PUC Result
ಪಿಯುಸಿ ಟಾಪರ್​ಗಳಾದ ಅನ್ವಿತಾ ಹಾಗೂ ನೇಹಶ್ರೀ
author img

By

Published : Apr 21, 2023, 5:59 PM IST

ಪಿಯುಸಿ ಟಾಪರ್ ನೇಹಶ್ರೀ ಪ್ರತಿಕ್ರಿಯೆ

ಶಿವಮೊಗ್ಗ: ದ್ವಿತೀಯ ಪಿಯುಸಿ ಫಲಿತಾಂಶ ಇಂದು ಪ್ರಕಟವಾಗಿದೆ. ತೀರ್ಥಹಳ್ಳಿ ತಾಲೂಕಿನ ರೈತನ ಮಗಳು ಅನ್ವಿತಾ ವಾಣಿಜ್ಯ ವಿಭಾಗದಲ್ಲಿ 2ನೇ ರ್‍ಯಾಂಕ್‌ ಸಾಧನೆ ಮಾಡಿದ್ದಾರೆ.

ಇದನ್ನೂ ಓದಿ: 2nd PUC ಮರು ಮೌಲ್ಯಮಾಪನಕ್ಕೆ ಅರ್ಜಿ ಸಲ್ಲಿಸುವವರು ಒಮ್ಮೆ ಯೋಚಿಸಿ: ಈ ಬಾರಿ 1 ಮಾರ್ಕ್ಸ್ ವ್ಯತ್ಯಾಸವಾದರೂ ಅಂಕಪಟ್ಟಿಗೆ ಸೇರ್ಪಡೆ

ಟಾಪರ್ ಅನ್ವಿತಾಗೆ ಅಭಿನಂದನೆ: ಮಲ್ಲೇಸರದ ರೈತ ನಾಗರಾಜ್ ಹಾಗೂ ಅನುಸೂಯ ದಂಪತಿಯ ಮಗಳು ಅನ್ವಿತಾ ರಾಜ್ಯಕ್ಕೆ ದ್ವಿತೀಯ ಸ್ಥಾನ ಪಡೆದು ಉತ್ತಮ ಸಾಧನೆ ಮಾಡಿದ್ದಾರೆ. ಶಿವಮೊಗ್ಗದ ಪ್ರಸಿದ್ಧ ವಿಕಾಸ ಕಾಂಪೊಸಿಟ್ ಪಿಯು ಕಾಲೇಜಿನಲ್ಲಿ ವಿದ್ಯಾಭ್ಯಾಸ ಮಾಡಿದ್ದಾರೆ. ಮಗಳ ಸಾಧನೆಗೆ ಕುಟುಂಬಸ್ಥರು ಹಾಗೂ ಕಾಲೇಜಿನವರು ಅಭಿನಂದನೆ ಸಲ್ಲಿಸಿದ್ದಾರೆ. ಅನ್ವಿತಾ 600 ಅಂಕಗಳಿಗೆ 597 ಅಂಕಗಳನ್ನು ಗಳಿಸಿದ್ದಾರೆ.

ಇದನ್ನೂ ಓದಿ: ದ್ವಿತೀಯ ಪಿಯುಸಿ ಫಲಿತಾಂಶ ಪ್ರಕಟ: ವಿದ್ಯಾರ್ಥಿನಿಯರೇ ಟಾಪರ್ಸ್​!

ಅದೇ ರೀತಿ, ಶಿವಮೊಗ್ಗದ ಕುವೆಂಪು ಬಡಾವಣೆಯ ವಿದ್ಯಾಭಾರತಿ ಪಿಯು ಕಾಲೇಜಿನ ನೇಹಶ್ರೀ ವಾಣಿಜ್ಯ ವಿಭಾಗದಲ್ಲಿ 600 ಅಂಕಗಳಿಗೆ 596 ಅಂಕಗಳನ್ನು ಗಳಿಸಿದ್ದಾರೆ. ತಾಯಿ ಶಿಕ್ಷಕಿ, ತಂದೆ ಎಫ್​ಡಿಸಿ ಆಗಿ ಕೆಲಸ ಮಾಡುತ್ತಿದ್ದಾರೆ. ಸಹೋದರಿ ಇಂಜಿನಿಯರಿಂಗ್ ವಿದ್ಯಾಭ್ಯಾಸ ಮಾಡುತ್ತಿದ್ದಾರೆ. ನೇಹಶ್ರೀ ಸಾಧನೆಗೆ ಕಾಲೇಜಿನ ಸಿಬ್ಬಂದಿ ಹಾಗೂ ವಿದ್ಯಾರ್ಥಿಗಳು ಹರ್ಷ ವ್ಯಕ್ತಪಡಿಸಿದರು. ಉಪನ್ಯಾಸಕರು ವಿದ್ಯಾರ್ಥಿನಿಗೆ ಸಿಹಿ ತಿನ್ನಿಸಿ ಅಭಿನಂದಿಸಿದರು.

ಇದನ್ನೂ ಓದಿ: ಕಲಾ ವಿಭಾಗದಲ್ಲಿ ರಾಜ್ಯಕ್ಕೆ ದ್ವಿತೀಯ ಸ್ಥಾನ ಪಡೆದ ಕುಂದಾನಗರಿಯ ಪ್ರಿಯಾಂಕಾ ಕುಲಕರ್ಣಿ

ಮಗಳೊಂದಿಗಿನ ಮುದ್ದಾದ ವಿಡಿಯೋ ಹಂಚಿಕೊಂಡ ಅಲ್ಲು ಅರ್ಜುನ್​; 'ಸೋ ಕ್ಯೂಟ್​' ಎಂದ ಫ್ಯಾನ್ಸ್​

ಟಾಪರ್​ ನೇಹಶ್ರೀ ಮಾತು: ''ನನಗೆ ಕಾಲೇಜಿನವರು ಹಾಗೂ ಕುಟುಂಬಸ್ಥರು ಓದಲು ತುಂಬಾ ಸಹಕಾರ ನೀಡಿದ್ದಾರೆ. ಅಂದಿನ ಪಾಠಗಳನ್ನು ಅಂದೇ ಓದುತ್ತಿದ್ದೆ. ನನಗೆ ಅನುಮಾನವಿದ್ದ ಬಗ್ಗೆ ಕಾಲೇಜಿನ ಉಪನ್ಯಾಸಕರಿಗೆ ಯಾವುದೇ ಸಮಯದಲ್ಲಿ ಕೇಳಿದ್ರೂ, ಉತ್ತಮವಾಗಿ ಸ್ಪಂದಿಸುತ್ತಿದ್ದರು. ಸಿಎ ಮಾಡಬೇಕೆಂಬ ಇಚ್ಛೆ ಇದೆ" ಎಂದು ನೇಹಶ್ರೀ ತಿಳಿಸಿದರು. ಉಪನ್ಯಾಸಕಿ ಶಿವಾನಿ‌ ಮಾತನಾಡಿ, "ನೇಹಶ್ರೀ ಉತ್ತಮ ವಿದ್ಯಾರ್ಥಿನಿ. ಶ್ರದ್ದೆಯಿಂದ ಕಲಿತಿದ್ದಕ್ಕೆ ಉತ್ತಮ ಅಂಕಗಳನ್ನು ಗಳಿಸಿದ್ದಾರೆ" ಎಂದರು.

ಇದನ್ನೂ ಓದಿ: ಇಂದು ದ್ವಿತೀಯ ಪಿಯುಸಿ ಫಲಿತಾಂಶ ಪ್ರಕಟ... ಈ ವೆಬ್​ಸೈಟ್​ನಲ್ಲಿ ರಿಸಲ್ಟ್ ನೋಡಿ

ದ್ವಿತೀಯ ಪಿಯುಸಿ ಫಲಿತಾಂಶ: ವಿಜ್ಞಾನ ವಿಭಾಗದಲ್ಲಿ ರಾಜ್ಯಕ್ಕೆ ಪ್ರಥಮ ಸ್ಥಾನ ಪಡೆದ ಕೌಶಿಕ್ ಮನದ ಮಾತು

ETV Bharat Logo

Copyright © 2024 Ushodaya Enterprises Pvt. Ltd., All Rights Reserved.