ETV Bharat / state

ಜೋಗದ ಪ್ರವಾಸೋದ್ಯಮ ಅಭಿವೃದ್ಧಿಗೆ ಸಿ.ಟಿ.ರವಿ ಭರವಸೆ

ಪ್ರಧಾನಿ ನರೇಂದ್ರ ಮೋದಿ ಅವರು ಹೇಳಿದಂತೆ ಪ್ರವಾಸೋದ್ಯಮ ಅಭಿವೃದ್ಧಿಪಡಿಸುವ ಜೊತೆಗೆ ದೇಶದ ಯುವಕರಿಗೆ ಉದ್ಯೋಗಾವಕಾಶ ನೀಡಲಾಗುತ್ತದೆ. ಪಶ್ಚಿಮಘಟ್ಟ ಹಾಗೂ ಕರಾವಳಿಗೆ ವಿಶೇಷ ಪ್ರವಾಸೋದ್ಯಮ ನೀತಿಯನ್ನ ಜಾರಿಗೆ ತಂದು ವಿಶ್ವವಿಖ್ಯಾತ ಜೋಗ ಜಲಪಾತವನ್ನ ಅಭಿವೃದ್ಧಿಪಡಿಸಲಾಗುತ್ತದೆ ಎಂದು ಪ್ರವಾಸೋದ್ಯಮ ಸಚಿವ ಸಿ.ಟಿ. ರವಿ ತಿಳಿಸಿದರು.

author img

By

Published : Sep 13, 2019, 11:22 PM IST

ಸಿ.ಟಿ.ರವಿ

ಶಿವಮೊಗ್ಗ: ಪ್ರಧಾನಿ ನರೇಂದ್ರ ಮೋದಿ ಅವರು ಹೇಳಿದಂತೆ ಪ್ರವಾಸೋದ್ಯಮ ಅಭಿವೃದ್ಧಿಪಡಿಸುವ ಜೊತೆಗೆ ದೇಶದ ಯುವಕರಿಗೆ ಉದ್ಯೋಗಾವಕಾಶ ನೀಡಲಾಗುತ್ತದೆ. ಪಶ್ಚಿಮ ಘಟ್ಟ ಹಾಗೂ ಕರಾವಳಿಗೆ ವಿಶೇಷ ಪ್ರವಾಸೋದ್ಯಮ ನೀತಿಯನ್ನ ಜಾರಿಗೆ ತಂದು ವಿಶ್ವವಿಖ್ಯಾತ ಜೋಗ ಜಲಪಾತವನ್ನ ಅಭಿವೃದ್ಧಿಪಡಿಸಲಾಗುತ್ತದೆ ಎಂದು ಪ್ರವಾಸೋದ್ಯಮ ಸಚಿವ ಸಿ.ಟಿ.ರವಿ ತಿಳಿಸಿದರು.

ಸುದ್ದಿಗಾರರೊಂದಿಗೆ ಮಾತನಾಡಿದ ಅವರು ಹೊಸ ಪ್ರವಾಸೋದ್ಯಮ ಯೋಜನೆಯನ್ನು ತರುತ್ತೇವೆ. ಈಗಾಗಲೇ ಸುಧಾಮೂರ್ತಿಯವರ ನೇತೃತ್ವದಲ್ಲಿ ಟೂರಿಸಂ ಟಾಸ್ಕ್ ಫೋರ್ಸ್ ಮಾಡಿದ್ದೇವೆ. ಮುಖ್ಯಮಂತ್ರಿ ನೇತೃತ್ವದಲ್ಲಿ ಈಗಾಗಲೇ 2 ಬಾರಿ ಸಭೆಯನ್ನು ನಡೆಸಲಾಗಿದ್ದು, ರಾಜ್ಯದಲ್ಲಿ ಪ್ರವಾಸೋದ್ಯಮಕ್ಕೆ ಒತ್ತು ನೀಡಲಾಗುತ್ತೆ ಎಂದರು.

ಪ್ರವಾಸೋದ್ಯಮ ಸಚಿವ ಸಿ.ಟಿ.ರವಿ ನೇತೃತ್ವದ ಸಭೆ

ರಾಜ್ಯಾದ್ಯಂತ ನಾನು ಮೊದಲು ಪ್ರವಾಸಿ ಸ್ಥಳಗಳಿಗೆ ಪ್ರವಾಸ ಮಾಡುತ್ತೇನೆ. ಆಮೇಲೆ ಯೋಜನೆ ರೂಪಿಸುವಂತಹ ಕೆಲಸ ಮಾಡುತ್ತೇನೆ. ಪಶ್ಚಿಮ ಘಟ್ಟ, ಕರಾವಳಿ ಸೇರಿದಂತೆ ಇತರ ಪ್ರದೇಶಗಳ ಅಭಿವೃದ್ಧಿಗೆ ಚಿಂತನೆ ನಡೆಸಲಾಗಿದೆ. ನನ್ನ ಪ್ರಯತ್ನ ನಾನು ಮಾಡುತ್ತೇನೆ. ನಮಗೆ ಅವಕಾಶ ಮತ್ತು ಹಠ ಎರಡು ಇದೆ ಅದರ ಜೊತೆಗೆ ನನ್ನ ಇತಿ ಮಿತಿಯ ಅರಿವಿದೆ. ಏನು ಮಾಡದೇ ಇರುವಂತಹ ಕೆಲಸ ಮಾತ್ರ ಮಾಡಲ್ಲ. ಏನಾದ್ರೂ ಮಾಡುತ್ತೇವೆ. ಅಭಿವೃದ್ಧಿಯ ನೀಲಿನಕ್ಷೆಯನ್ನ ತಯಾರಿಸಿ ಮುಖ್ಯಮಂತ್ರಿಗಳೊಂದಿಗೆ ಚರ್ಚಿಸುತ್ತೇನೆ. ಜೋಗವನ್ನು ಕೇಂದ್ರವಾಗಿಟ್ಟಿಕೊಂಡು ಶಿವಮೊಗ್ಗ ಜಿಲ್ಲೆಯ ಸಮಗ್ರ ಪ್ರವಾಸೋದ್ಯಮ ಮ್ಯಾಪ್ ಅನ್ನು ತಯಾರಿಸುವ ಕೆಲಸ ಮಾಡುತ್ತೇನೆ ಎಂದರು.

ಸಾರ್ವಜನಿಕರಿಂದ ಅಹವಾಲು ಸ್ವೀಕರಿಸಿ ಸಮಸ್ಯೆ ಆಲಿಸಿದ ಸಚಿವರು:

ಜೋಗ ಜಲಪಾತ ವೀಕ್ಷಣೆ ಮಾಡಿದ ನಂತರ ಪ್ರವಾಸಿ ಭವನದಲ್ಲಿ ಸಾರ್ವಜನಿಕರಿಂದ ಅಹವಾಲು ಸ್ವೀಕರಿಸಿ ಸಮಸ್ಯೆ ಆಲಿಸಿದ ಸಚಿವರು, ಜೋಗ ಜಲಪಾತದಲ್ಲಿ ಶೌಚಾಲಯ ಸಮಸ್ಯೆ ಹೆಚ್ಚಾಗಿದೆ. ಅಗತ್ಯ ಬಸ್​​ ಬಿಡುವ ಬಗ್ಗೆ, ಪ್ರವೇಶ ಶುಲ್ಕ ಕಡಿಮೆಗೊಳಿಸುವಂತೆ ಅಹವಾಲು ಕೇಳಿ ಬಂದವು. ಸಮಸ್ಯೆ ಕುರಿತು ಅಧಿಕಾರಿಗಳೊಂದಿಗೆ ಚರ್ಚಿಸಿ ಬಗೆಹರಿಸುವುದಾಗಿ ಭರವಸೆ ನೀಡಿದರು.

ಜಿಲ್ಲೆಯೂ ಒಟ್ಟು 47 ಪ್ರವಾಸಿತಾಣ ಹೊಂದಿದೆ:

ರಾಜ್ಯದಲ್ಲಿ 319 ಪ್ರವಾಸಿ ತಾಣಗಳನ್ನು, 41 ಸರ್ಕ್ಯೂಟ್​ಗಳನ್ನು ಗುರುತಿಸಲಾಗಿದೆ. ನಮ್ಮ ರಾಜ್ಯ ಅಂತಾರಾಷ್ಟ್ರೀಯ ಪ್ರವಾಸಿಗರನ್ನು ಆರ್ಕಷಿಸುವ ಪ್ರಮುಖ ಪ್ರವಾಸಿ ತಾಣವಾಗಿದೆ. ಜಿಲ್ಲೆಯಲ್ಲಿ ಒಟ್ಟು‌ 47 ಪ್ರವಾಸಿ ತಾಣಗಳನ್ನು ಗುರುತಿಸಲಾಗಿದೆ. ಇದಕ್ಕೆ ನಾಲ್ಕು ಸರ್ಕ್ಯೂಟ್​ಗಳನ್ನು ಗುರುತಿಸಲಾಗಿದೆ. ಈ ತಾಣಗಳ ಸಮಗ್ರ ಅಭಿವೃದ್ದಿಗೆ ಯೋಜನೆ ರೂಪಿಸಲಾಗಿದೆ. ಈ ಎಲ್ಲಾ ಪ್ರವಾಸಿ ತಾಣಗಳಿಗೆ ಮೂಲಭೂತ ಸೌಲಭ್ಯಗಳನ್ನು ಒದಗಿಸುವ ನಿಟ್ಟಿನಲ್ಲಿ ಪ್ರಸ್ತಾವನೆ ಸಲ್ಲಿಸುವಂತೆ ಸೂಚಿಸಲಾಗಿದೆ ಎಂದರು.

ಪ್ರವಾಸಿ ತಾಣಗಳ ಅಭಿವೃದ್ದಿಗೆ ಜಾಗತಿಕ ಬಂಡವಾಳ ಆಕರ್ಷಿಸಲು ಕೇರಳ ರಾಜ್ಯದಲ್ಲಿ ಬಂಡವಾಳ ಹೂಡಿಕೆದಾರರ ಸಮಾವೇಶ ಆಯೋಜನೆಯಲ್ಲಿ ಭಾಗವಹಿಸಿ ಮುಂದೆ ರಾಜ್ಯದಲ್ಲಿಯೂ ಸಹ ಆಯೋಜನೆ ಮಾಡುವ ತೀರ್ಮಾನ ಮಾಡಲಾಗುವುದು ಎಂದರು.

ಈ ವೇಳೆ ಜಿಲ್ಲಾಧಿಕಾರಿ ಶಿವಕುಮಾರ್, ಸಂಸದ ಬಿ.ವೈ. ರಾಘವೇಂದ್ರ, ಸಾಗರ ಶಾಸಕ ಹರತಾಳು ಹಾಲಪ್ಪ, ಎಡಿಸಿ ಅನುರಾಧ, ಶಾಸಕ‌ ಆರಗ ಜ್ಞಾನೇಂದ್ರ, ಜಿ.ಪಂ. ಸಿಇಒ ವೈಶಾಲಿ, ಇತರೆ ಅಧಿಕಾರಿಗಳು ಹಾಜರಿದ್ದರು.

Intro:ರಾಜ್ಯದಲ್ಲಿ 319 ಪ್ರವಾಸಿ ತಾಣಗಳನ್ನು, 41 ಸರ್ಕ್ಯೂಟ್ ಗಳನದನ್ನು ಗುರುತಿಸಲಾಗಿದೆ. ನಮ್ಮ ರಾಜ್ಯ ಅಂತರರಾಷ್ಟ್ರೀಯ ಪ್ರವಾಸಿಗರನ್ನು ಆರ್ಕಷಿಸುವ ಪ್ರಮುಖ ಪ್ರವಾಸಿ ತಾಣವಾಗಿದೆ ಎಂದು ಪ್ರವಾಸೋದ್ಯಮ ಮತ್ತು ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಚಿವ ಸಿ.ಟಿ.ರವಿ ಶಿವಮೊಗ್ಗದಲ್ಲಿ ಹೇಳಿದ್ದಾರೆ. ಜಿಲ್ಲಾಧಿಕಾರಿ ಕಚೇರಿಯಲ್ಲಿ ಪ್ರವಾಸೋದ್ಯಮ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಪ್ರಗತಿ ಪರಿಶೀಲನ ಸಭೆ ನಡೆಸಿ ಮಾತನಾಡಿದ ಅವರು, ಶಿವಮೊಗ್ಗ ಜಿಲ್ಲೆಯಲ್ಲಿ ಒಟ್ಟು‌ 47 ಪ್ರವಾಸಿ ತಾಣಗಳನ್ನು ಗುರುತಿಸಲಾಗಿದೆ. ಇದಕ್ಕೆ ನಾಲ್ಕು ಸರ್ಕ್ಯೂಟ್ ಗಳನ್ನು ಗುರುತಿಸಲಾಗಿದೆ. ಈ ತಾಣಗಳ ಸಮಗ್ರ ಅಭಿವೃದ್ದಿಗೆ ಮಾಸ್ಟರ್ ಪ್ಲಾನ್ ಹಾಕಿ ಕೊಳ್ಳಲಾಗಿದೆ ಎಂದರು.

Body:ಶಿವಮೊಗ್ಗ ಜಿಲ್ಲೆಯಲ್ಲಿ ಧಾರ್ಮಿಕ, ಪ್ರಾಕೃತಿಕ ಹೆರಿಟೇಜ್ ಸೇರಿದಂತೆ ನಾಲ್ಕು ಟೂರಿಸಂ ಸರ್ಕ್ಯೂಟ್ ರೂಪಿಸಲಾಗುವುದು. ಈ ಎಲ್ಲಾ ಪ್ರವಾಸಿ ತಾಣಗಳಿಗೆ ಸರಿಯಾದ ಸಂಪರ್ಕ ವ್ಯವಸ್ಥೆ,, ವಸತಿ, ಶಾಪಿಂಗ್, ಶೌಚಾಲಯ, ಕುಡಿಯುವ ನೀರಿನ ಮೂಲಭೂತ ಸೌಲಭ್ಯಗಳನ್ನು ಒದಗಿಸುವ ನಿಟ್ಟಿನಲ್ಲಿ ಪ್ರಸ್ತಾವನೆ ಸಲ್ಲಿಸುವಂತೆ ಸೂಚಿಸಲಾಗಿದೆ.ಅದೇ ರೀತಿ ಜೋಗ ಅಭಿವೃದ್ದಿಗೆ ಪ್ರತ್ಯೇಕ ಮಾಸ್ಟರ್ ಪ್ಲಾನ್ ರೂಪಿಸಲು ಸೂಚನೆ ನೀಡಲಾಗಿದೆ ಎಂದರು. ಹಣಕ್ಕಾಗಿ ಯೋಜನೆ ರೂಪಿಸದೆ, ಅವಶ್ಯಕತೆಗಾಗಿ ಯೋಜನೆ ರೂಪಿಸಿ ಎಂದು ತಿಳಿಸಿರುವುದಾಗಿ ಹೇಳಿದರು. ಗ್ರಾಮಗಳ ಇತಿಹಾಸದ ಕುರಿತು ತಿಳಿದು ಕೊಳ್ಳಲು ಸ್ಥಳೀಯ ಪಿಯುಸಿ, ಕಾಲೇಜು ವಿದ್ಯಾರ್ಥಿಗಳ ತಂಡ ರಚನೆ ಮಾಡಿ ಮಾಹಿತಿ ಸಂಗ್ರಹಿಸುವ ಕೆಲ್ಸ ಮಾಡಲು ಸೂಚಿಸಲಾಗಿದೆ ಎಂದರು.‌

Conclusion:ಪ್ರವಾಸೋದ್ಯಮ ನೀತಿ ರಚನೆ: ರಾಜ್ಯದ ಪ್ರವಾಸಿ ತಾಣಗಳಿಗೆ ಆಯಾ ಪ್ರಾದೇಶಿಕ, ಭೌಗೋಳಿಕ ಅಗ್ಮತ್ಯಕ್ಕೆ ತಕ್ಕಂತೆ ಹೇರಿಟೇಜ್ ಪ್ರವಾಸೋದ್ಯಮ ನೀತಿಯನ್ನು ರೂಪಿಸಲಾಗುವುದು. ಈ ಕುರಿತಾಗಿ ಈಗಾಗಲೇ ಟಾಸ್ಕ್ ಪೋರ್ಸ್ ನ ಸುಧಾಮೂರ್ತಿರವರೂಂದಿಗೆ ಚರ್ಚೆ ಮಾಡಲಾಗಿದೆ ಎಂದರು. ಪ್ರವಾಸಿ ತಾಣಗಳ ಅಭಿವೃದ್ದಿಗೆ ಜಾಗತಿಕ ಬಂಡವಾಳ ಆಕರ್ಷಿಸಲು ಕೇರಳ ರಾಜ್ಯದಲ್ಲಿ ಬಂಡವಾಳ ಹೊಡಿಕೆದಾರರ ಸಮಾವೇಶ ಆಯೋಜನೆಯಲ್ಲಿ ಭಾಗವಹಿಸಿ ಮುಂದೆ ರಾಜ್ಯದಲ್ಲಿಯು ಸಹ ಆಯೋಜನೆ ಮಾಡುವ ತೀರ್ಮಾನ ಮಾಡಲಾಗುವುದು ಎಂದರು. ಈ ವೇಳೆ ಜಿಲ್ಲಾಧಿಕಾರಿ ಶಿವಕುಮಾರ್, ಎಡಿಸಿ ಅನುರಾಧ, ಶಾಸಕ‌ ಆರಗ ಜ್ಞಾನೇಂದ್ರ, ಜಿ.ಪಂ ಸಿಇಒ ವೈಶಾಲಿ ಇತರೆ ಅಧಿಕಾರಿಗಳು ಹಾಜರಿದ್ದರು.

ಬೈಟ್: ಸಿ.ಟಿ.ರವಿ. ಸಚಿವರು.

ಕಿರಣ್ ಕುಮಾರ್. ಶಿವಮೊಗ್ಗ.
ETV Bharat Logo

Copyright © 2024 Ushodaya Enterprises Pvt. Ltd., All Rights Reserved.