ETV Bharat / state

ಸಮಸ್ಯೆ ಬಗೆಹರಿಸಬೇಕಾದವರೇ ಪ್ರತಿಭಟನೆಗಿಳಿದರೆ....? ಹೀಗಾಗಿದ್ದು ಈ ನಗರ ಪಾಲಿಕೆಯಲ್ಲಿ!  ​

ಶಿವಮೊಗ್ಗ ನಗರ ಪಾಲಿಕೆ ಮುಂಭಾಗ ಕುಡಿಯುವ ನೀರಿನ ಸಮಸ್ಯೆ ನಿವಾರಣೆಗಾಗಿ ಕಾರ್ಪೊರೇಟರ್​ಗಳು ಪ್ರತಿಭಟನೆಗೆ ಕುಳಿತಿರುವ ಘಟನೆ ನಡೆದಿದೆ. ಮಹಾನಗರ ಪಾಲಿಕೆ ಸದಸ್ಯರುಗಳೇ ಹೀಗೆ ಖಾಲಿ ಕೊಡ ಪ್ರದರ್ಶನ ಮಾಡೋ ಮೂಲಕ ಪ್ರತಿಭಟನೆಗಿಳಿದಿರುವುದು ಸಾರ್ವಜನಿಕರಲ್ಲಿ ನಗೆಪಾಟಲಿಗೀಡಾಗಿದೆ.

ನೀರಿಗಾಗಿ ಪ್ರತಿಭಟನೆ ನಡೆಸಿದ ಶಿವಮೊಗ್ಗ ಕಾರ್ಪೋರೇಟರ್ಸ್
author img

By

Published : Jun 6, 2019, 5:44 PM IST

ಶಿವಮೊಗ್ಗ : ನಗರದಲ್ಲಿ ಕುಡಿವ ನೀರಿನ ಸಮಸ್ಯೆ ವಿಪರೀತವಾಗಿದ್ದು, ಸಮಸ್ಯೆ ನಿವಾರಿಸಿಸುವ ಕಾರ್ಪೊರೇಟರ್​ಗಳೇ ನೀರಿಗಾಗಿ ಪ್ರತಿಭಟನೆಯ ನಡೆಸಿರುವ ಘಟನೆ ನಡೆದಿದೆ. ಸಾಮಾನ್ಯವಾಗಿ ಮಹಾನಗರ ಪಾಲಿಕೆ ಕಚೇರಿ ಮುಂಭಾಗ ಖಾಲಿ ಕೊಡ ಇಟ್ಟುಕೊಂಡು ನಗರದ ವಿವಿಧ ಬಡಾವಣೆಯ ನಿವಾಸಿಗಳು ನೀರಿಗಾಗಿ ಪ್ರತಿಭಟನೆ ನಡೆಸೋದು ಕಾಮನ್. ಆದ್ರೆ, ಜನರಿಗೆ ನೀರು ಕೊಡಬೇಕಾದ ಕಾರ್ಪೋರೇಟರ್​ಗಳೇ ಅಸಹಾಯಕರಾಗಿ ಶಿವಮೊಗ್ಗದಲ್ಲಿ ಪ್ರತಿಭಟನೆ ನಡೆಸಿದ್ದಾರೆ.

ಇನ್ನು ಕಾಂಗ್ರೆಸ್ ಮತ್ತು ಜೆಡಿಎಸ್ ನ ಪಾಲಿಕೆ ಸದಸ್ಯರು ನೀರಿಗಾಗಿ ಪ್ರತಿಭಟನೆ ನಡೆಸುವ ಮೂಲಕ ಆಡಳಿತ ಪಕ್ಷ ಬಿಜೆಪಿ ವಿರುದ್ಧ ಸಮರ ಸಾರಿದ್ದಾರೆ. ಅಲ್ಲದೇ, ಆಡಳಿತ ಪಕ್ಷದ ಬಿಜೆಪಿಯ ಮೇಯರ್, ಉಪಮೇಯರ್ ಹಾಗೂ ಸದಸ್ಯರು ಈವರೆಗೆ ಸಭೆ ಕರೆದಿಲ್ಲ ಎಂದು ಆರೋಪವನ್ನು ಮಾಡಿದ್ದಾರೆ. ನಗರದಲ್ಲಿ ಈಗಾಗಲೇ ನೀರಿನ ಅಭಾವವಿದ್ದು, ಇದನ್ನು ಸದಸ್ಯರೆಲ್ಲರೂ ಒಗ್ಗೂಡಿ ಸಮಸ್ಯೆ ಬಗೆಹರಿಸಿ, ನಗರದ ನಾಗರಿಕರಿಗೆ ನೀರು ಪೂರೈಕೆ ಮಾಡೋದನ್ನ ಬಿಟ್ಟು ಹೀಗೆ ಪ್ರತಿಭಟನೆ ಹಾದಿ ಹಿಡಿದಿರೋದು ಎಷ್ಟು ಸರಿ ಎಂಬ ಪ್ರಶ್ನೆ ಸಾರ್ವಜನಿಕ ವಲಯದಲ್ಲಿ ಮೂಡುತ್ತಿದೆ.

ನೀರಿಗಾಗಿ ಪ್ರತಿಭಟನೆ ನಡೆಸಿದ ಶಿವಮೊಗ್ಗ ಕಾರ್ಪೋರೇಟರ್ಸ್

ಒಟ್ಟಾರೆ, ಮಹಾನಗರ ಪಾಲಿಕೆ ಸದಸ್ಯರುಗಳೇ ಹೀಗೆ ಖಾಲಿ ಕೊಡ ಪ್ರದರ್ಶನ ಮಾಡೋ ಮೂಲಕ ಪ್ರತಿಭಟನೆಗಿಳಿದಿರುವುದು ಸಾರ್ವಜನಿಕರಲ್ಲಿ ನಗೆಪಾಟಲಿಗೀಡಾಗಿರುವುದಂತೂ ಸತ್ಯ

Intro:ಶಿವಮೊಗ್ಗ,
ಫಾರ್ಮೆಟ್ : ಪ್ಯಾಕೇಜ್ 
ಸ್ಲಗ್ : ನೀರಿಗಾಗಿ ಪ್ರತಿಭಟನೆ ನಡೆಸಿದ ಅಸಹಾಯಕ ಕಾರ್ಪೋರೇಟರ್ಸ್.

ಆ್ಯಂಕರ್.................
ಮಳೆ ಬರ್ತಿಲ್ಲ.  ಡ್ಯಾಂ ಬತ್ತಿದೆ.  ಕುಡಿಯುವ ನೀರಿಗೂ ಸಮಸ್ಯೆ ಉಂಟಾಗಿದೆ. ಆದರೂ ಮುಂದಿನ 15 ದಿನಗಳವರೆಗೆ ಕುಡಿಯುವ ನೀರಿಗೆ ಸಮಸ್ಯೆ ಇಲ್ಲ ಎಂದು ಹೇಳಲಾಗುತ್ತಿದ್ದರೂ, ಶಿವಮೊಗ್ಗ ನಗರದಲ್ಲಿ ಈ ಕುಡಿಯುವ ನೀರಿನ ಸಮಸ್ಯೆ ವಿಪರೀತವಾಗಿದೆ. ಅದು ಎಷ್ಟರ ಮಟ್ಟಿಗೆ ಎಂದರೇ ಕುಡಿಯುವ ನೀರಿನ ಸಮಸ್ಯೆ ನಿವಾರಿಸಿ ಸಾರ್ವಜನಿಕರಿಗೆ ನೀರು ಪೂರೈಕೆ ಮಾಡಲು ಕ್ರಮಕೈಗೊಳ್ಳಬೇಕಾದ ಕಾರ್ಪೋರೇಟರ್ಸ್ ಗಳೇ ನೀರಿಗಾಗಿ ಪ್ರತಿಭಟನೆಯ ಹಾದಿ ತುಳಿದಿದ್ದಾರೆ....

ವಾಯ್ಸ್ ಓವರ್.......1
ಹೌದು,  ಸಾಮಾನ್ಯವಾಗಿ ಮಹಾನಗರ ಪಾಲಿಕೆ ಕಚೇರಿ ಮುಂಭಾಗ ಖಾಲಿ ಕೊಡ ಇಟ್ಟುಕೊಂಡು ನಗರದ ವಿವಿಧ ಬಡಾವಣೆಯ ನಿವಾಸಿಗಳು ನೀರಿಗಾಗಿ  ಆಗಾಗ ಪ್ರತಿಭಟನೆ ನಡೆಸೋದು ಕಾಮನ್.  ಆದ್ರೆ, ಜನರಿಗೆ ನೀರು ಕೊಡಬೇಕಾದ ಕಾರ್ಪೋರೇಟರ್ಸ್ ಗಳೇ ಅಸಹಾಯಕರಾಗಿ ಇಂದು ಶಿವಮೊಗ್ಗದಲ್ಲಿ ಪ್ರತಿಭಟನೆ ನಡೆಸಿದ್ದಾರೆ. ಪಾಲಿಕೆ ಆಯುಕ್ತರು, ಮೇಯರ್ ಜೊತೆ ಸಭೆ ನಡೆಸಿ ನೀರು ಸಮಸ್ಯೆ ಬಗೆಹರಿಸದೇ ಪ್ರತಿಭಟನೆಯ ಮೊರೆ ಹೋಗಿರುವ ಕಾರ್ಪೋರೇಟರ್ ಗಳು, ಪಾಲಿಕೆಯ ಮೇಯರ್ ಹಾಗೂ ಉಪಮೇಯರ್ ಗೆ ಮನವಿ ಸಲ್ಲಿಸಿ ನೀರು ಕೊಡಿ ಸ್ವಾಮಿ ಅಂತಾ ಬೇಡಿಕೊಂಡಿದ್ದಾರೆ.  ಶಿವಮೊಗ್ಗ ನಗರದಲ್ಲಿ ಇರುವ ನೀರಿನ ಸಮಸ್ಯೆಯನ್ನ ಅರಿತು ಪಾಲಿಕೆ ಅಧಿಕಾರಿಗಳ ಜೊತೆಗೂಡಿ ಸಭೆ ಕರೆದು ಚರ್ಚೆ ನಡೆಸಿ, ನಗರದ ನಾಗರೀಕರ ಸಮಸ್ಯೆ ನಿವಾರಿಸೋದನ್ನು ಬಿಟ್ಟು, ಈ ರೀತಿ ಪ್ರತಿಭಟನೆ ನಡೆಸ್ತಿದಿರಲ್ಲಾ ಅಂತಾ ಪ್ರಶ್ನಿಸಿದ್ರೆ, ಪಾಲಿಕೆ ಸದಸ್ಯರುಗಳ ಉತ್ತರ ಹೀಗಿದೆ ನೋಡಿ.....
ಬೈಟ್....1
ರೇಖಾ ರಂಗನಾಥ್ :  ಕಾಂಗ್ರೆಸ್ ಕಾರ್ಪೋರೇಟರ್.

Body:ವಾಯ್ಸ್ ಓವರ್......2
ಕಾಂಗ್ರೆಸ್ ಮತ್ತು ಜೆಡಿಎಸ್ ನ ಪಾಲಿಕೆ ಸದಸ್ಯರು ಇಂದು ನೀರಿಗಾಗಿ ಪ್ರತಿಭಟನೆ ನಡೆಸುವ ಮೂಲಕ ಆಡಳಿತ ಪಕ್ಷ ಬಿಜೆಪಿ ವಿರುದ್ಧ ಸಮರ ಸಾರಿದ್ದಾರೆ.  ಅಲ್ಲದೇ, ಆಡಳಿತ ಪಕ್ಷದ ಬಿಜೆಪಿಯ ಮೇಯರ್, ಉಪಮೇಯರ್  ಹಾಗೂ ಸದಸ್ಯರು ಈವರೆಗೆ ಸಭೆಯ ಕರೆಯುತ್ತಿಲ್ಲ ಎಂದು ಆರೋಪ ಕೂಡ ಮಾಡಿದ್ದಾರೆ.  ನಗರದಲ್ಲಿ ಈಗಾಗಲೇ ನೀರಿನ ಅಭಾವವಿದ್ದು, ಇದನ್ನು ಸದಸ್ಯರೆಲ್ಲರೂ ಒಗ್ಗೂಡಿ ಸಮಸ್ಯೆ ಬಗೆಹರಿಸಿ, ನಗರದ ನಾಗರೀಕರಿಗೆ ನೀರು ಪೂರೈಕೆ ಮಾಡೋದನ್ನ ಬಿಟ್ಟು ಹೀಗೆ ಪ್ರತಿಭಟನೆ ಹಾದಿ ಹಿಡಿದಿರೋದು ಎಷ್ಟು ಸರಿ ಎಂಬ ಪ್ರಶ್ನೆ ಮೂಡುವಂತಾಗಿದೆ.  ಈ ಬಗ್ಗೆ ಖುದ್ದು ಕಾರ್ಪೋರೇಟರ್ಸ್ ಗಳೇ ಅಧಿಕಾರಿಗಳ ವರ್ತನೆಗೆ ಅಸಹಾಯಕರಾಗಿ ಖಾಲಿ ಕೊಡ ಪ್ರದರ್ಶಿಸಿ ಪ್ರತಿಭಟನೆ ನಡೆಸಿದ್ದಾರೆ.
ಬೈಟ್..2
ಯೋಗೇಶ್ ಕಾರ್ಪೊರೇಟರ್
ಬೈಟ್ ..3
ರಮೇಶ್ ಹೆಗ್ಡೆ ಪಾಲಿಕೆ ವಿರೋಧ ಪಕ್ಷದ ನಾಯಕ

Conclusion:ಕನ್ ಕ್ಲೂಷನ್.......
ಒಟ್ಟಾರೆ, ಮಹಾನಗರ ಪಾಲಿಕೆ ಸದಸ್ಯರುಗಳೇ ಹೀಗೆ ಖಾಲಿ ಕೊಡ ಪ್ರದರ್ಶನ ಮಾಡೋ ಮೂಲಕ ಪ್ರತಿಭಟನೆಗಿಳಿದಿರುವುದು ಸಾರ್ವಜನಿಕರಲ್ಲಿ ನಗೆಪಾಟಲಿಗೀಡಾಗಿರುವುದಂತೂ ಸತ್ಯ.  ಪಾಲಿಕೆ ಸದಸ್ಯರೇ ಅಸಹಾಯಕರ ಎಂಬ ಮಾತು ಇದೀಗ ನಗರದ ನಾಗರೀಕರು ಆಡಿಕೊಳ್ಳುವಂತಾಗಿದೆ. ಏನೇ ಆಗ್ಲೀ ಆದಷ್ಟು ಬೇಗ ವರುಣ ಕೃಪೆ ತೋರಿ ನಗರದಲ್ಲಿ ಉಂಟಾಗಿರುವ ನೀರಿನ ಸಮಸ್ಯೆ ನಿವಾರಣೆಯಾಗಲೀ ಎಂಬುದೇ ನಮ್ಮ ಆಶಯ.
ಭೀಮಾನಾಯ್ಕ ಎಸ್ ಶಿವಮೊಗ್ಗ
ETV Bharat Logo

Copyright © 2024 Ushodaya Enterprises Pvt. Ltd., All Rights Reserved.