ಶಿವಮೊಗ್ಗ: ಜಿಲ್ಲೆಯಲ್ಲಿಂದು 227 ಜನರಿಗೆ ಕೊರೊನಾ ಸೋಂಕು ತಗುಲಿದ್ದು, ಸೋಂಕಿತರ ಸಂಖ್ಯೆ 15,555ಕ್ಕೆ ಏರಿಕೆಯಾಗಿದೆ.
ಇಂದು 169 ಮಂದಿ ಸಂಪೂರ್ಣ ಗುಣಮುಖರಾಗಿ ಬಿಡುಗಡೆಯಾಗಿದ್ದು, ಇದುವರೆಗೂ ಒಟ್ಟು 13,169 ಗುಣಮುಖರಾಗಿ ಡಿಸ್ಚಾರ್ಜ್ ಆಗಿದ್ದಾರೆ. ಮೂವರು ಕೊರೊನಾ ಸೋಂಕಿಗೆ ಬಲಿಯಾಗಿದ್ದು, ಮೃತರ ಸಂಖ್ಯೆ 300ಕ್ಕೆ ಏರಿಕೆಯಾಗಿದೆ. ಸದ್ಯ 2,125 ಸಕ್ರಿಯ ಪ್ರಕರಣಗಳಿದ್ದು, ಮೆಗ್ಗಾನ್ ಕೋವಿಡ್ ಆಸ್ಪತ್ರೆಯಲ್ಲಿ 189, ಕೋವಿಡ್ ಕೇರ್ ಸೆಂಟರ್ನಲ್ಲಿ 157, ಖಾಸಗಿ ಆಸ್ಪತ್ರೆಯಲ್ಲಿ 323, ಹೋಂ ಐಸೋಲೇಷನ್ಲ್ಲಿ 1,314 ಹಾಗೂ ಆಯುರ್ವೇದ ಕಾಲೇಜಿನಲ್ಲಿ 142 ಮಂದಿ ಚಿಕಿತ್ಸೆ ಪಡೆಯುತ್ತಿದ್ದಾರೆ.
ತಾಲೂಕುವಾರು ಸೊಂಕಿತರ ಸಂಖ್ಯೆ: ಶಿವಮೊಗ್ಗ 85, ಭದ್ರಾವತಿ 30, ಶಿಕಾರಿಪುರ 24, ತೀರ್ಥಹಳ್ಳಿ 06, ಸೊರಬ 26, ಸಾಗರ 30, ಹೊಸನಗರ 18 ಹಾಗೂ ಬೇರೆ ಜಿಲ್ಲೆಯಿಂದ ಬಂದ 8 ಜನರಿಗೆ ಸೋಂಕು ತಗುಲಿದೆ. ಇಂದು 2,618 ಜನರ ಪರೀಕ್ಷೆ ನಡೆಸಲಾಗಿದ್ದು, 2,363 ಜನರ ವರದಿ ಬಂದಿದೆ.