ಶಿವಮೊಗ್ಗ: ಬಹುನಿರೀಕ್ಷಿತ ಶ್ರೀ ಬಸವೇಶ್ವರ ಪುತ್ಥಳಿ ಅನಾವರಣ ಕಾರ್ಯಕ್ರಮ ಇಂದು ನಡೆಯಿತು. ಲಂಡನ್‌ನಿಂದ ಶಿವಮೊಗ್ಗಕ್ಕೆ ಬಂದ ಬಸವೇಶ್ವರನ ಪುತ್ಥಳಿಯನ್ನು ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಬೆಂಗಳೂರಿನಿಂದ ವರ್ಚುಯಲ್ ಮೂಲಕ ಅನಾವರಣ ಮಾಡಿದರು.
![cm bsy inaugurates london basavanna statue](https://etvbharatimages.akamaized.net/etvbharat/prod-images/kn-smg-10-basaveswara-puttali-ka10011_23072021195544_2307f_1627050344_644.jpg)
![cm bsy inaugurates london basavanna statue](https://etvbharatimages.akamaized.net/etvbharat/prod-images/img-20210724-wa0002_2407newsroom_1627106701_364.jpg)
ಶಿವಮೊಗ್ಗದ ಗಾಂಧಿ ಪಾರ್ಕ್ ಮುಂಭಾಗ ಬಸವಣ್ಣ ಪುತ್ಥಳಿ ಸ್ಥಾಪಿಸಲಾಗಿದೆ. 2018ರ ನವೆಂಬರ್ ನಲ್ಲಿ ಲಂಡನ್‌ನಿಂದ ಪುತ್ಥಳಿಯನ್ನು ತರಲಾಗಿತ್ತು. ಅಂದಿನ ಲಂಡನ್ ಮೇಯರ್ ನೀರಜ್ ಪಾಟೀಲ್ ಅವರ ಆಸಕ್ತಿಯಿಂದಾಗಿ ಶಿವಮೊಗ್ಗಕ್ಕೆ ತರಲಾಗಿತ್ತು. ಲಂಡನ್‌ನಿಂದ ಕೊಡುಗೆಯಾಗಿ ಶಿವಮೊಗ್ಗಕ್ಕೆ ಬಂದು ನಾಲ್ಕು ವರ್ಷ ಕಳೆದರೂ ಇನ್ನೂ ಪ್ರತಿಷ್ಠಾಪನೆ ನೆರವೇರಿರಲಿಲ್ಲ. ಲಂಡನ್ ಮತ್ತು ಶಿವಮೊಗ್ಗದಲ್ಲಿ ಒಂದೇ ರೂಪದಲ್ಲಿರುವ ಬಸವೇಶ್ವರರ ಪುತ್ಥಳಿ ಇದಾಗಿದೆ.
![cm bsy inaugurates london basavanna statue](https://etvbharatimages.akamaized.net/etvbharat/prod-images/kn-smg-10-basaveswara-puttali-ka10011_23072021195544_2307f_1627050344_863.jpg)
![cm bsy inaugurates london basavanna statue](https://etvbharatimages.akamaized.net/etvbharat/prod-images/img-20210724-wa0001_2407newsroom_1627106701_674.jpg)
ಇಂದಿನ ಕಾರ್ಯಕ್ರಮದಲ್ಲಿ ಸಂಸದ ಬಿ.ವೈ. ರಾಘವೇಂದ್ರ, ಗ್ರಾಮೀಣಾಭಿವೃದ್ಧಿ ಸಚಿವ ಕೆ.ಎಸ್. ಈಶ್ವರಪ್ಪ, ಬೆಕ್ಕಿನಕಲ್ಮಠದ ಮಲ್ಲಿಕಾರ್ಜುನ ಮುರುಘರಾಜೇಂದ್ರ ಮಹಾಸ್ವಾಮಿ, ಬಸವಕೇಂದ್ರದ ಬಸವ ಮರುಳಸಿದ್ಧ ಸ್ವಾಮೀಜಿ ಸೇರಿದಂತೆ, ಹಲವು ಗಣ್ಯರು ಭಾಗಿಯಾಗಿದ್ದರು.
![cm bsy inaugurates london basavanna statue](https://etvbharatimages.akamaized.net/etvbharat/prod-images/img-20210724-wa0003_2407newsroom_1627106701_1107.jpg)