ಶಿವಮೊಗ್ಗ : ಕೊರೊನಾದಿಂದ ನಿಧನರಾದ ಅಪ್ಪಾಜಿ ಗೌಡರ ಮನೆಗೆ ಸಂಸದ ಬಿ ಬೈ ರಾಘವೇಂದ್ರ ಭೇಟಿ ನೀಡಿ ಕುಟುಂಬಸ್ಥರಿಗೆ ಸಾಂತ್ವನ ಹೇಳಿದರು.
ಭದ್ರಾವತಿಯಲ್ಲಿರುವ ಅಪ್ಪಾಜಿಗೌಡರ ಮನೆಗೆ ತೆರಳಿದ ಸಂಸದರು, ಅಪ್ಪಾಜಿಗೌಡರ ಭಾವಚಿತ್ರಕ್ಕೆ ಪುಷ್ಪ ನಮನ ಸಲ್ಲಿಸಿದರು. ನಂತರ ಅವರ ಪತ್ನಿ ಹಾಗೂ ಪುತ್ರ ಅಜೀತ್ ಅವರಿಗೆ ಧೈರ್ಯ ಹೇಳಿದರು.
ಅಪ್ಪಾಜಿಗೌಡರ ಧೈರ್ಯ, ಜನಪರ ನಿಲುವು ಹಾಗೂ ಕಾರ್ಮಿಕರ ಪರ ಹೋರಾಟದ ಕುರಿತು ನೆನಪು ಮಾಡಿಕೊಂಡರು. ಗೌಡರ ಆತ್ಮಕ್ಕೆ ಶಾಂತಿ ಕೋರಿದರು. ಈ ವೇಳೆ ಸೂಡಾ ಅಧ್ಯಕ್ಷ ಜ್ಯೋತಿ ಪ್ರಕಾಶ್, ಭದ್ರಾವತಿಯ ಬಿಜೆಪಿ ಮುಖಂಡರಾದ ಧರ್ಮಪ್ರಸಾದ್, ಎಸ್.ದತ್ತಾತ್ರಿ ಸೇರಿ ಇತರರು ಹಾಜರಿದ್ದರು.