ETV Bharat / state

ಕುಟುಂಬ ಸಮೇತರಾಗಿ ಬಂದು ಮತ ಚಲಾಯಿಸಿದ ಬಿ.ವೈ.ರಾಘವೇಂದ್ರ

author img

By

Published : Apr 23, 2019, 5:39 PM IST

ಶಿವಮೊಗ್ಗ ಲೋಕಸಭೆ ಕ್ಷೇತ್ರದಲ್ಲಿ ಬಿವೈಆರ್​​ ಮತ ಚಲಾವಣೆ. ಕುಟುಂಬ ಸಮೇತರಾಗಿ ಬಂದು ವೋಟ್​ ಮಾಡಿದ ಬಿ.ವೈ.ರಾಘವೇಂದ್ರ. ಬಿಜೆಪಿ ಗೆದ್ದೇ ಗೆಲ್ಲುತ್ತದೆ ಎಂಬ ವಿಶ್ವಾಸ.

ಮತ ಚಲಾಯಿಸಿದ ಬಿಎಸ್​ವೈ ಪುತ್ರ

ಶಿವಮೊಗ್ಗ: ಬಿಜೆಪಿ ಅಭ್ಯರ್ಥಿ ಬಿ.ವೈ.ರಾಘವೇಂದ್ರ ತಮ್ಮ ಕುಟುಂಬ ಸಮೇತರಾಗಿ ಬಂದು ಮತದಾನ ಮಾಡಿದ್ದಾರೆ.

ಶಿಕಾರಿಪುರ ಪಟ್ಟಣದ ತಮ್ಮ ಆರಾಧ್ಯ ದೈವ ಹುಚ್ಚರಾಯ ಸ್ವಾಮಿ ದೇವಾಲಯಕ್ಕೆ ಹೋಗಿ ಪೊಜೆ ಸಲ್ಲಿಸಿ ಅನಂತರ ರಾಘವೇಂದ್ರ ಸ್ವಾಮಿ ಮಠಕ್ಕೆ ತೆರಳಿ ನಂತರ ಪಟ್ಟಣದ ಆಡಳಿತ ಸೌಧ ಮತಗಟ್ಟೆ ಸಂಖ್ಯೆ 134ರಲ್ಲಿ ಮತದಾನ ಮಾಡಿದರು.

ಮತ ಚಲಾಯಿಸಿದ ಬಿಎಸ್​ವೈ ಪುತ್ರ

ಈ ವೇಳೆ ಪತ್ನಿ ತೇಜಸ್ವಿನಿ, ಬಿಎಸ್​ವೈ ಸಹೋದರ ವಿಜಯೇಂದ್ರ ಹಾಗೂ ಅವರ ಪತ್ನಿ, ಮತ್ತಿತರರು ಸಾಥ್ ನೀಡಿದರು. ನಂತರ ಮಾತನಾಡಿದ ಅವರು, ಈ ಬಾರಿ ನೂರಕ್ಕೆ ನೂರ ಒಂದು ಪರ್ಸೆಂಟ್​ ಗೆಲುವು ಸಾಧಿಸುತ್ತೇವೆ ಎಂದರು. 2009 ಹಾಗೂ ಕಳೆದ ಉಪ ಚುನಾವಣೆಯಲ್ಲಿ ಕ್ಷೇತ್ರಕ್ಕೆ ಸಾಕಷ್ಟು ಕೆಲಸ ಮಾಡಿದ್ದೇನೆ. ಇದು ನನ್ನ ಗೆಲುವಿಗೆ ಕಾರಣವಾಗಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.

ಸ್ವಾತಂತ್ರ್ಯ ಹೋರಾಟದಲ್ಲಿ ಯುವಕರು ಭಾಗವಹಿಸಿದಂತೆ ಈ ಬಾರಿ ಯುವಕರು ಮೋದಿಯವರನ್ನು ಬೆಂಬಲಿಸಿದ್ದಾರೆ. ಮತದಾನದಲ್ಲಿ ಯುವಕರು ಸೇರಿದಂತೆ ಎಲ್ಲರು ಭಾಗವಹಿಸಬೇಕು ಎಂದು ಕರೆ ನೀಡಿದರು. ಚುನಾವಣೆ ನಂತರ ಸರ್ಕಾರ ಬೀಳುತ್ತದೆ. ಮೈತ್ರಿ ಪಕ್ಷದಲ್ಲಿ ಈಗಾಗಲೇ ಆಂತರಿಕ ಕಚ್ಚಾಟ ನಡೆಯುತ್ತಿದೆ. ಇದರಿಂದ ಮೈತ್ರಿ ಸರ್ಕಾರ ಪತನವಾಗುತ್ತದೆ. ಬಿಜೆಪಿ ಕೇಂದ್ರದಲ್ಲಿ ಹಾಗೂ ರಾಜ್ಯದಲ್ಲಿ ಅಧಿಕಾರಕ್ಕೆ ಬರುತ್ತದೆ. ಒಂದು ವೋಟು ಎರಡು ಸರ್ಕಾರ ಎಂದು ಮಾರ್ಮಿಕವಾಗಿ ನುಡಿದರು.

Intro:ಶಿವಮೊಗ್ಗ ಲೋಕಸಭ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಬಿ.ವೈ.ರಾಘವೇಂದ್ರ ರವರು ತಮ್ಮ ತಂದೆ ಯಡಿಯೂರಪ್ಪನವರೂಂದಿಗೆ ತರೆಳಿ ಮತದಾನ ಮಾಡಿದ್ದಾರೆ. ಶಿಕಾರಿಪುರ ಪಟ್ಟಣದ ತಮ್ಮ ಆರಾಧ್ಯ ದೈವ ಹುಚ್ಚರಾಯ ಸ್ವಾಮಿ ದೇವಾಲಯಕ್ಕೆ ಹೋಗಿ ಪೊಜೆ ಸಲ್ಲಿಸಿ, ರಾಘವೇಂದ್ರ ಸ್ವಾಮಿ ಮಠಕ್ಕೆ ತೆರಳಿ ನಂತ್ರ ಪಟ್ಟಣದ ಆಡಳಿತ ಸೌಧ ಮತಗಟ್ಟೆ ಸಂಖ್ಯೆ 134 ರಲ್ಲಿ ಮತದಾನ ಮಾಡಿದರು. ಈ ವೇಳೆ ಪತ್ನಿ ತೇಜಸ್ವಿನಿ ಹಾಗೂ ಸಹೋದರ ವಿಜಯೇಂದ್ರ ಹಾಗೂ ಅವರ ಪತ್ನಿ ಹಾಗೂ ಇತರರು ಸಾಥ್ ನೀಡಿದರು.

Body:ನಂತ್ರ ಮಾತನಾಡಿದ ಅವರು, ಈ ಬಾರಿ ನೂರಕ್ಕೆ ನೂರ ಒಂದು ಗೆಲುವು ಸಾಧಿಸುತ್ತೆವೆ ಎಂಬ ವಿಶ್ವಾಸ ವ್ಯಕ್ತಪಡಿಸಿದರು. 2009 ಹಾಗೂ ಕಳೆದ ಉಪ ಚುನಾವಣೆಯಲ್ಲಿ ಕ್ಷೇತ್ರಕ್ಕೆ ಸಾಕಷ್ಟು ಕೆಲ್ಸ ಮಾಡಿದ್ದೆನೆ. ಇದು ನನ್ನ ಗೆಲುವಿಗೆ ಕಾರಣವಾಗಲಿದೆ ಎಂದರು.ಸ್ವಾತಂತ್ರ್ಯ ಹೋರಾಟದಲ್ಲಿ ಯುವಕರು ಭಾಗವಹಿಸಿದಂತೆ ಈ ಬಾರಿ ಯುವಕರು ಮೋದಿಯವರನ್ನು ಬೆಂಬಲಿಸಿದ್ದಾರೆ.ಮತದಾನದಲ್ಲಿ ಯುವಕರು ಸೇರಿದಂತೆ ಎಲ್ಲಾರು ಭಾಗವಹಿಸಬೇಕು ಎಂದು ಒತ್ತಾಯಿಸಿದರು.

Conclusion:ಚುನಾವಣೆ ನಂತ್ರ ಸರ್ಕಾರ ಬಿಳುತ್ತದೆ. ಮೈತ್ರಿ ಪಕ್ಷದಲ್ಲೆ ಆಂತರಿಕ ಕಚ್ಚಾಟ ನಡೆಯುತ್ತದೆ. ಇದರಿಂದ ಮೈತ್ರಿ ಸರ್ಕಾರ ಪತನವಾಗುತ್ತದೆ. ಬಿಜೆಪಿ ಕೇಂದ್ರದಲ್ಲಿ ಹಾಗೂ ರಾಜ್ಯದಲ್ಲಿ ಅಧಿಕಾರಕ್ಕೆ ಬರುತ್ತದೆ. ಒಂದು ವೋಟು ಎರಡು ಸರ್ಕಾರ ಎಂದು ಮಾರ್ಮಿಕವಾಗಿ ನುಡಿದರು.

For All Latest Updates

TAGGED:

ETV Bharat Logo

Copyright © 2024 Ushodaya Enterprises Pvt. Ltd., All Rights Reserved.