ಶಿವಮೊಗ್ಗ : ಭದ್ರಾವತಿ ಶಾಸಕ ಬಿ.ಕೆ. ಸಂಗಮೇಶ್ ಅವರಿಗೆ ಕೊರೊನಾ ಪಾಸಿಟಿವ್ ದೃಢಪಟ್ಟಿದೆ.
ಕಳೆದ ಮೂರು ದಿನಗಳ ಹಿಂದೆ ಶಾಸಕರ ಮನೆಯ ಕೆಲಸದವರಲ್ಲಿ ಕೊರೊನಾ ಕಂಡು ಬಂದ ಕಾರಣ, ಮನೆಯನ್ನು ಸೀಲ್ಡೌನ್ ಮಾಡಲಾಗಿತ್ತು. ಇದರಿಂದ ಶಾಸಕರಿಗೂ ಸಹ ಪರೀಕ್ಷೆ ನಡೆಸಲಾಗಿತ್ತು. ಭಾನುವಾರ ಶಾಸಕ ಸಂಗಮೇಶ್ ಅವರಲ್ಲಿ ಕೊರೊನಾ ಪಾಸಿಟಿವ್ ಕಂಡು ಬಂದಿದೆ.
ಶಾಸಕರು ಬೆಂಗಳೂರಿನ ಮಣಿಪಾಲ ಆಸ್ಪತ್ರೆಗೆ ಶಿಫ್ಟ್ ಆಗಿದ್ದಾರೆ. ಇದರಿಂದ ಜಿಲ್ಲೆಯ ಐವರು ಶಾಸಕರಿಗೆ ಕೊರೊನಾ ಸೊಂಕು ತಗುಲಿದಂತಾಗಿದೆ.