ETV Bharat / state

ಬಡವರ ಭೂಮಿ ಕಬಳಿಸುವ ಹುನ್ನಾರ ನಡೆದಿದೆ.. ವಿಷದ ಬಾಟಲಿ ಹಿಡಿದು ಪ್ರತಿಭಟನೆ - banjara student organisatipn

70 ವರ್ಷಗಳಿಂದ 25ಕ್ಕೂ ಹೆಚ್ಚು ದಲಿತ ಕುಟುಂಬಗಳು ಸರ್ಕಾರಿ ಖರಾಬು ಭೂಮಿಯಲ್ಲಿ ಸಾಗುವಳಿ ಮಾಡಿ ಬದುಕು ಕಟ್ಟಿಕೊಂಡಿವೆ‌. ಈ ಸಾಗುವಳಿ ಭೂಮಿಯನ್ನು ಬಗರ್ ಹುಕುಂ ಸಮಿತಿಯಿಂದ ಮಂಜೂರು ಮಾಡಿಕೊಡುವಂತೆ ಈಗಾಗಲೇ ಅರ್ಜಿ ಸಹ ಸಲ್ಲಿಸಿದ್ದಾರೆ.

banjara community protest
ವಿಷದ ಬಾಟಲಿ ಹಿಡಿದು ಪ್ರತಿಭಟನೆ
author img

By

Published : Jun 2, 2020, 10:41 PM IST

ಶಿವಮೊಗ್ಗ : ಬಡವರ ಜಮೀನನ್ನು ಅಕ್ರಮವಾಗಿ ತಮ್ಮ ಹೆಸರಿಗೆ ಮಾಡಿಕೊಂಡವರ ವಿರುದ್ಧ ಹಾಗೂ ಈ ಪ್ರಕರಣದಲ್ಲಿ ಶಾಮೀಲಾಗಿರುವ ಅಧಿಕಾರಿಗಳ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂದು ಕರ್ನಾಟಕ ರಾಜ್ಯ ಬಂಜಾರ್ ವಿದ್ಯಾರ್ಥಿ ಸಂಘ ಹಾಗೂ ಹೊಸಕೊಪ್ಪ, ತಟ್ಟೆಕೆರೆ ಗ್ರಾಮ ದಲಿತ ಕ್ರಿಯಾ ಸಮಿತಿ ವತಿಯಿಂದ ಜಿಲ್ಲಾಧಿಕಾರಿಗಳ ಕಚೇರಿ ಎದುರು ವಿಷದ ಬಾಟಲಿ ಹಿಡಿದು ಪ್ರತಿಭಟನೆ ನಡೆಸಲಾಯ್ತು.

ತಾಲೂಕಿನ ಹೊಸಳ್ಳಿ ಗ್ರಾಮ ಪಂಚಾಯತ್‌ ವ್ಯಾಪ್ತಿ ಬರುವ ಹೊಸಕೊಪ್ಪ, ತಟ್ಟೆಕೆರೆ ಗ್ರಾಮದ ಸರ್ವೇ ನಂ 176ರಲ್ಲಿ 40.16 ಎಕರೆ ಭೂಮಿಯಲ್ಲಿ ಕಳೆದ 70 ವರ್ಷಗಳಿಂದ 25ಕ್ಕೂ ಹೆಚ್ಚು ದಲಿತ ಕುಟುಂಬಗಳು ಸರ್ಕಾರಿ ಖರಾಬು ಭೂಮಿಯಲ್ಲಿ ಸಾಗುವಳಿ ಮಾಡಿ ಬದುಕು ಕಟ್ಟಿಕೊಂಡಿವೆ‌. ಈ ಸಾಗುವಳಿ ಭೂಮಿಯನ್ನು ಬಗರ್ ಹುಕುಂ ಸಮಿತಿಯಿಂದ ಮಂಜೂರು ಮಾಡಿಕೊಡುವಂತೆ ಈಗಾಗಲೇ ಅರ್ಜಿ ಸಹ ಸಲ್ಲಿಸಿದ್ದಾರೆ.

ಈ ಕುರಿತು ಉಪವಿಭಾಧಿಕಾರಿಗಳ ನ್ಯಾಯಾಲಯದಲ್ಲಿ ಈ ಪ್ರಕರಣ ಪರಿಶೀಲನೆ ನಡೆಯುತ್ತಿರುವಾಗ ಕೃಷ್ಣಮೂರ್ತಿ ಮತ್ತು ಸೋಮಶೇಖರ್ ಎಂಬುವರು ಈ ಭೂಮಿಯನ್ನು ಕಬಳಿಸಲು ಸಂಚು ನಡೆಸಿದ್ದಾರೆ. ಲಾಕ್​ಡೌನ್ ಸಂದರ್ಭ ಬಳಸಿ ನಕಲಿ ದಾಖಲೆಗಳ ಮೂಲಕ 40.16 ಎಕರೆ ಖರಾಬು ಭೂಮಿಯಲ್ಲಿ 32.15 ಎಕರೆ ಭೂಮಿಯನ್ನು ಅಕ್ರಮವಾಗಿ ತಮ್ಮ ಹೆಸರಿಗೆ ಮಾಡಿಕೊಂಡಿದ್ದಾರೆ.

ಈ ಅಕ್ರಮದಲ್ಲಿ ರಾಜಕೀಯ ನಾಯಕರು, ಕಂದಾಯಾಧಿಕಾರಿಗಳು, ತಹಶೀಲ್ದಾರ್‌, ಗ್ರಾಮಲೆಕ್ಕಿಗರು ಶಾಮೀಲಾಗಿದ್ದಾರೆ. ಹಾಗಾಗಿ ಕೊಡಲೇ ಅವರೆಲ್ಲರ ವಿರುದ್ಧ ಕ್ರಮ ಕೈಗೋಳ್ಳಬೇಕು
ಎಂದು ಒತ್ತಾಯಿಸಿ ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಿದರು.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.