ETV Bharat / state

ಶಿವಮೊಗ್ಗ: ಬಂಜಾರ್ ಕನ್ವೆನ್ಷನ್ ಹಾಲ್ ಉದ್ಘಾಟಿಸಿದ ಬಿ.ಎಸ್.ಯಡಿಯೂರಪ್ಪ - ಶಾಸಕ ಅಶೋಕ್ ನಾಯ್ಕ್

ಬಂಜಾರ​ ಸಮುದಾಯದ ಬಂಜಾರ್ ಕನ್ವೆನ್ಷನ್ ಹಾಲ್​ ಉದ್ಘಾಟನಾ ಸಮಾರಂಭ ಕಾರ್ಯಕ್ರಮ ಅದ್ಧೂರಿಯಾಗಿ ನಡೆಯಿತು.

Banjar Convention Hall  Inauguration
ಶಿವಮೊಗ್ಗದಲ್ಲಿ ನಡೆದ ಬಂಜಾರ್ ಕನ್ವೆನ್ಷನ್ ಹಾಲ್ ಉದ್ಘಾಟನೆ ಕಾರ್ಯಕ್ರಮ
author img

By

Published : Jan 31, 2023, 8:21 AM IST

Updated : Jan 31, 2023, 8:33 AM IST

ಶಿವಮೊಗ್ಗದಲ್ಲಿ ನಡೆದ ಬಂಜಾರ್ ಕನ್ವೆನ್ಷನ್ ಹಾಲ್ ಉದ್ಘಾಟನೆ ಕಾರ್ಯಕ್ರಮ

ಶಿವಮೊಗ್ಗ: ನಗರದ ಬಾಲರಾಜ್​ ಅರಸ್​ ರಸ್ತೆಯಲ್ಲಿ ನೂತನವಾಗಿ ನಿರ್ಮಾಣವಾಗಿರುವ ಬಂಜಾರ್ ಕನ್ವೆನ್ಷನ್ ಹಾಲ್ ಅನ್ನು ಸೋಮವಾರ ಮಾಜಿ ಸಿಎಂ ಬಿ.ಎಸ್.ಯಡಿಯೂರಪ್ಪ ನಗಾರಿ ಬಾರಿಸುವ ಮೂಲಕ ಉದ್ಘಾಟಿಸಿದರು. ನಂತರ ಸಭಾ ಕಾರ್ಯಕ್ರಮ ಉದ್ದೇಶಿಸಿ ಮಾತನಾಡಿದ ಅವರು, "ಪ್ರಧಾನಿ ಮೋದಿಯವರು ಕಲಬುರಗಿ ಸೇರಿದಂತೆ ಉತ್ತರ ಕರ್ನಾಟಕದ ಐದು ಜಿಲ್ಲೆಗಳ 52 ಸಾವಿರ ತಾಂಡಾ ನಿವಾಸಿಗಳಿಗೆ ಹಕ್ಕು ಪತ್ರ ವಿತರಿಸಿದ್ದಾರೆ. ಶಿವಮೊಗ್ಗ ಜಿಲ್ಲೆಯಲ್ಲೂ ಐದು ಸಾವಿರ ಹಕ್ಕು ಪತ್ರ ತಯಾರಿ ಇದೆ. ಎಲ್ಲಾ ಸಮುದಾಯಗಳ ಅಭಿವೃದ್ಧಿಗೆ ಶಕ್ತಿ ಮೀರಿ ಪ್ರಯತ್ನ ಮಾಡುತ್ತೇವೆ. ಬಂಜಾರ್ ಸಮಾಜದ ಅಭಿವೃದ್ಧಿಗೆ ಸಾಕಷ್ಟು ಯೋಜನೆಗಳನ್ನು ನೀಡಿದ್ದೇವೆ. ಸೊರಗೊಂಡನ ಕೊಪ್ಪವನ್ನು ಪ್ರವಾಸೋದ್ಯಮ ಸ್ಥಳವಾಗಿ ಮಾಡಲಾಗಿದೆ" ಎಂದರು.

ಸಂಸದ ಬಿ.ವೈ.ರಾಘವೇಂದ್ರ ಮಾತನಾಡಿ, "ಇತಿಹಾಸದ ಪುಟದಲ್ಲಿ ಬರೆದಿಡುವ ಕಾರ್ಯಕ್ರಮವಿದು. ಕಷ್ಟದ ಬದುಕನ್ನು ಬದುಕುವ ಶ್ರಮಜೀವಿಗಳು ಬಂಜಾರರು. ಯಡಿಯೂರಪ್ಪನವರ ಆಡಳಿತದ ಅವಧಿಯಲ್ಲಿ ಜಿಲ್ಲೆ ಸಾಕಷ್ಟು ಅಭಿವೃದ್ಧಿ ಹೊಂದಿದೆ. ರೈಲ್ವೆ, ಏರ್ ವೇ ಹೀಗೆ ಎಲ್ಲಾ ರೀತಿಯಲ್ಲೂ ಅಭಿವೃದ್ಧಿ ಮಾಡಿದ್ದಾರೆ. ತಾಂಡಾ ಅಭಿವೃದ್ಧಿ ನಿಗಮದ ಮೂಲಕ ತಾಂಡಗಳ ಅಭಿವೃದ್ಧಿ ಆಗುತ್ತಿದೆ. ಇದೇ ಫೆ.27 ರಂದು ವಿಮಾನ ನಿಲ್ದಾಣ ಕೂಡ ಉದ್ಘಾಟನೆ ಆಗಲಿದೆ. ಜಾತಿ-ಭೇದ ಮಾಡದೇ ಅಭಿವೃದ್ಧಿ ಮಾಡಿದ ನಾಯಕ ಯಡಿಯೂರಪ್ಪ" ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.

ನಂತರ ಮಾತನಾಡಿದ ಗೃಹ ಸಚಿವ ಆರಗ ಜ್ಞಾನೇಂದ್ರ, "ಬ್ರಿಟಿಷ್‌ರಿಗೆ ಹಾಗೂ ಮೊಘಲರ ಜೊತೆ ವ್ಯಾಪಾರ ನಡೆಸುತ್ತಿದ್ದ ಜನಾಂಗ ಈ ಬಂಜಾರ ಸಮುದಾಯ. ನನ್ನ ಚುನಾವಣೆಗೆ ಈ ಸಮುದಾಯ ಹಣ ನೀಡಿತ್ತು. ಇಲ್ಲಿ ಪ್ರತಿ ಮಕ್ಕಳಿಗೂ ಶಿಕ್ಷಣ ಕೊಡಿಸುವ ಕೆಲಸ ಮಾಡಬೇಕು. ತಾಂಡಾ ಜನರ ಋಣ ನಾನೆಂದು ಮರೆಯುವುದಿಲ್ಲ. ಶ್ರೀಮಂತ ಸಂಸ್ಕೃತಿ ಹೊಂದಿರುವ ಸಮಾಜವೆಂದರೆ ಅದು ಬಂಜಾರ್ ಸಮಾಜ" ಎಂದರು.

ಯಡಿಯೂರಪ್ಪ ರೋಡ್‌ ಶೋ: ಬಂಜಾರ್ ಸಮುದಾಯದ ಭವನ ಉದ್ಘಾಟಸಿದ ನಂತರ ನಗರದ ಬಂಜಾರ್ ಭವನದಿಂದ ಎನ್ಇಎಸ್ ಮೈದಾನದವರೆಗೆ ಬಿ.ಎಸ್.ಯಡಿಯೂರಪ್ಪ ರೋಡ್ ಶೋ ನಡೆಸಿದರು. ಮಾಜಿ ಸಚಿವ ಕೆ.ಎಸ್.ಈಶ್ವರಪ್ಪ, ಗೃಹ ಸಚಿವ ಆರಗ ಜ್ಞಾನೇಂದ್ರ, ಸಂಸದ ಬಿ.ವೈ ರಾಘವೇಂದ್ರ ಸೇರಿದಂತೆ ಅನೇಕ ಮುಖಂಡರು ಭಾಗವಹಿಸಿದ್ದರು.

ಕಲಾತಂಡಗಳ ಮೆರುಗು: ಭವನ ಉದ್ಘಾಟನೆಯ ಹಿನ್ನೆಲೆಯಲ್ಲಿ ನಡೆದ ಮೆರವಣಿಗೆಯಲ್ಲಿ ವಿವಿಧ ಕಲಾತಂಡಗಳು ಪಾಲ್ಗೊಂಡಿದ್ದವು. ಬಂಜಾರ ಜಾನಪದ ನೃತ್ಯ, ಡೋಳು ಕುಣಿತ ನೋಡುಗರ ಗಮನ ಸೆಳೆಯಿತು.

ಇದನ್ನೂ ಓದಿ: 8 ದಿನ ಪೂರೈಸಿದ ಅಂಗನವಾಡಿ ನೌಕರರ ಪ್ರತಿಭಟನೆ: 'ಬೇಡಿಕೆ ಈಡೇರಿಸದಿದ್ದರೆ ಸಿಎಂ ನಿವಾಸಕ್ಕೆ ಮುತ್ತಿಗೆ'

Last Updated : Jan 31, 2023, 8:33 AM IST
ETV Bharat Logo

Copyright © 2025 Ushodaya Enterprises Pvt. Ltd., All Rights Reserved.