ಶಿವಮೊಗ್ಗ: ತಮ್ಮ ವೃದ್ಧಾಪ್ಯಕ್ಕಾಗಿ ಕೂಡಿಟ್ಟಿದ್ದ ಹಣದಲ್ಲಿ ದಿನಸಿ ಕಿಟ್ಗಳನ್ನು ಖರೀದಿಸಿ, ಸಂಕಷ್ಟದಲ್ಲಿದ್ದವರಿಗೆ ನೀಡಿ ಮಾನವೀಯತೆ ಮೆರೆದಿದ್ದಾರೆ ವೃದ್ಧ ದಂಪತಿ.
ಪದ್ಮಾ ಹಾಗೂ ಅವರ ಪತಿ ರಾಜ್ಗೋಪಾಲ್ ದಿನಸಿ ಕಿಟ್ ನೀಡಿದವರು. ಇವರು ನಗರದ ಬಾಲರಾಜ್ ಅರಸ್ ರಸ್ತೆಯ ನಿವಾಸಿಗಳು. ಈ ಮೊದಲು ದಾವಣಗೆರೆ ಜಿಲ್ಲೆ ಹೊನ್ನಾಳಿಯಲ್ಲಿ ಸಣ್ಣದೊಂದು ಹೋಟೆಲ್ ನಡೆಸಿಕೊಂಡು ತಮ್ಮ ಮುಂದಿನ ಜೀವನಕ್ಕಾಗಿ ಸ್ವಲ್ಪ ಹಣವನ್ನು ಕೂಡಿಟ್ಟಿದ್ದರು. ಆದರೆ, ಲಾಕ್ಡೌನ್ನಿಂದ ಸಂಕಷ್ಟದಲ್ಲಿದವರನ್ನು ಕಂಡು ಅವರಿಗೆ ಆಸರೆಯಾಗಿದ್ದಾರೆ.
ದಿನಸಿ ಕಿಟ್ನಲ್ಲಿ ಅಕ್ಕಿ, ಬೇಳೆ, ಎಣ್ಣೆ, ಬೆಲ್ಲ, ಸೋಪಿನಪುಡಿ, ಸೋಪು ಸೇರಿದಂತೆ ಸುಮಾರು 12 ದಿನಸಿ ವಸ್ತುಗಳ ಜೊತೆ ತರಕಾರಿಗಳನ್ನು ನೀಡಲಾಯಿತು.