ಶಿವಮೊಗ್ಗ: ಟಾಟಾ ಏಸ್ ವಾಹನ ಬೈಕ್ಗೆ ಡಿಕ್ಕಿ ಹೊಡೆದ ಪರಿಣಾಮ ಬೈಕ್ ಸವಾರ ಸಾವನ್ನಪ್ಪಿದ ಘಟನೆ ಜಿಲ್ಲೆಯ ಶಿಕಾರಿಪುರ ತಾಲೂಕು ಉಡುಗಣಿ ಗ್ರಾಮದ ಕ್ರಾಸ್ ಬಳಿ ನಡೆದಿದೆ.
ಬೈಕ್ ಸವಾರ ಶ್ರೀಕಾಂತ್ (44) ಎಂಬಾತ ಆಸ್ಪತ್ರೆ ಸಾಗಿಸುವ ಮಾರ್ಗ ಮಧ್ಯೆ ಸಾವನ್ನಪ್ಪಿದ್ದಾನೆ.
ಶಿರಾಳ ಕೊಪ್ಪದಿಂದ ಶಿಕಾರಿಪುರಕ್ಕೆ ಹೋಗುವ ಮಾರ್ಗದಲ್ಲಿ ಈ ಘಟನೆ ನಡೆದಿದ್ದು, ಶಿಕಾಳಕೊಪ್ಪ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.