ETV Bharat / state

ರಾಮನಗರ ಜಿಲ್ಲೆಯಲ್ಲಿ ಇಂದು ಮೂರು ಹೊಸ ಕೊರೊನಾ ಪ್ರಕರಣ ಪತ್ತೆ…

ರಾಮನಗರ ಜಿಲ್ಲೆಯಲ್ಲಿಂದು ಮೂರು ಹೊಸ ಕೊರೊನಾ ಪ್ರಕರಣಗಳು ಪತ್ತೆಯಾಗಿದ್ದು, ಅವರನ್ನು ಜಿಲ್ಲೆಯ ಕೋವಿಡ್​-19 ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ.

Ramanagara
Ramanagara
author img

By

Published : Jun 12, 2020, 9:34 PM IST

ರಾಮನಗರ : ಜಿಲ್ಲೆಯಲ್ಲಿಂದು ಮೂರು ಹೊಸ ಕೊರೊನಾ ಪಾಸಿಟಿವ್ ಪ್ರಕರಣ ಪತ್ತೆಯಾಗುವ ಮೂಲಕ ಒಟ್ಟು ಸೋಂಕಿತರ‌ ಸಂಖ್ಯೆ 15 ಕ್ಕೇರಿದೆ.

ಜಿಲ್ಲೆಯ ಚನ್ನಪಟ್ಟಣ ತಾಲೂಕಿನ ಶ್ಯಾನಭೋಗನಹಳ್ಳಿ ಗ್ರಾಮದ ಮೂವರಲ್ಲಿ ಕೊರೊನಾ ಸೋಂಕು ಪತ್ತೆಯಾಗಿದೆ. ಆ ಮೂಲಕ‌ ಶ್ಯಾನುಭೋಗನಹಳ್ಳಿ ಒಂದೇ ಗ್ರಾಮದ ಸೋಂಕಿತನಿಂದ 9 ಮಂದಿಗೆ ಸೋಂಕು ಹರಡಿದಂತಾಗಿದೆ.

ಜಿಲ್ಲಾ ಕಾರಾಗೃಹದಲ್ಲಿ ವಾರ್ಡನ್ ಆಗಿದ್ದ ಶ್ಯಾನಭೋಗನಹಳ್ಳಿಯ ಸೋಂಕಿತ P-4337 ಜೊತೆ ಸಂಪರ್ಕದಲ್ಲಿದ್ದವರಿಗೆ ಇದೀಗ ಪಾಸಿಟಿವ್ ಹೆಚ್ಚಾಗಿ ಕಾಣಿಸಿಕೊಳ್ಳತೊಡಗಿದೆ. P-4337 ಸೋಂಕಿತನ ಪ್ರಾಥಮಿಕ ಸಂಪರ್ಕ ಹೊಂದಿದ್ದ ಎಲ್ಲರನ್ನೂ ಕ್ವಾರಂಟೈನ್ ಮಾಡಲಾಗಿತ್ತು.

ಇದೀಗ ಕೊರೊನಾ ಪಾಸಿಟಿವ್​ ಬಂದಿರುವವರನ್ನು ರಾಮನಗರ ಕೋವಿಡ್ ಆಸ್ಪತ್ರೆಗೆ ದಾಖಲಿಸಿ ಅವರಿಗೆ ಚಿಕಿತ್ಸೆ ನೀಡಲಾಗುತ್ತಿದೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.