ETV Bharat / state

ಆಸ್ತಿಗಾಗಿ ಹೆತ್ತವ್ವನನ್ನೇ ಕೊಂದ ಪಾಪಿ ಪುತ್ರ.. ಪೊಲೀಸ್​ ತನಿಖೆಯಿಂದ ಬಯಲಾದ ಕಟುಸತ್ಯ..

author img

By

Published : Sep 23, 2019, 7:32 PM IST

ಆಸ್ತಿ ವಿವಾದದಿಂದ ಹೆತ್ತ ತಾಯಿಯನ್ನೇ ಕೊಂದ ಪ್ರಕರಣಕ್ಕೆ ಸಂಬಂಧಿಸಿದಂತೆ ಪ್ರಮುಖ ಆರೋಪಿಗಳಿಬ್ಬರನ್ನು ಪೊಲೀಸರು ಬಂಧಿಸಿದ್ದಾರೆ.

ಆಸ್ತಿಗಾಗಿ ಹೆತ್ತವ್ವನನ್ನೇ ಕೊಂದ ಪಾಪಿ ಪುತ್ರ..

ರಾಮನಗರ: ಆಸ್ತಿ ವಿವಾದದಿಂದ ಹೆತ್ತ ತಾಯಿಯನ್ನೇ ಕೊಂದ ಪ್ರಕರಣಕ್ಕೆ ಸಂಬಂಧಿಸಿದಂತೆ ಪ್ರಮುಖ ಆರೋಪಿಗಳಿಬ್ಬರನ್ನೂ ಪೊಲೀಸರು ಬಂಧಿಸಿದ್ದಾರೆ. ಕಾಟನಪಾಳ್ಯ ಗ್ರಾಮದ ಹನುಮಕ್ಕ (76) ಕೊಲೆಯಾದ ತಾಯಿ. ಈಕೆಯ 2ನೇ ಮಗ ಸಿದ್ದರಾಜು ಹಾಗೂ ಆತನ ಸ್ನೇಹಿತ ಲಕ್ಷ್ಮಣ ಎಂಬಾತನನ್ನ ಪೊಲೀಸರು ಬಂಧಿಸಿ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ್ದಾರೆ.

ತಾವರಕೆರೆ ಪೊಲೀಸ್ ಠಾಣಾ ವ್ಯಾಪ್ತಿಯ ಮೊಟಗೊಂಡನಹಳ್ಳಿ ಬಳಿಯ ಕಾಟನಪಾಳ್ಯ ಗ್ರಾಮದಲ್ಲಿ ಕಳೆದ ವಾರ ವೃದ್ಧೆಯೊಬ್ಬಳ ಶವ ಹಳ್ಳದಲ್ಲಿ ಪತ್ತೆಯಾಗಿತ್ತು. ಪೊಲೀಸರು ಮೃತರನ್ನು ಕಾಟನಹಳ್ಳಿ ಗ್ರಾಮದ ಹನುಮಕ್ಕ ಎಂದು ಗುರುತಿಸಿದ್ದರು. ಈ ಸಂಬಂಧ ಆಕೆಯ ಹಿರಿಯ ಮಗ ಲಕ್ಷ್ಮಪ್ಪ ದೂರು ನೀಡಿದ್ದರು. ತನಿಖೆ ನಡೆಸಿದ ಪೊಲೀಸರಿಗೆ ಅಚ್ಚರಿ ಕಾದಿತ್ತು. ಇಷ್ಟಕ್ಕೂ ಈ ಕೊಲೆ ನಡೆದಿದ್ದು ಆಸ್ತಿಗಾಗಿ ಎಂಬ ಸತ್ಯ ಬಯಲಾಗಿತ್ತು. ಹೆತ್ತವ್ವನನ್ನೇ ಪಾಪಿ ಮಗ ಹೆಣವಾಗಿಸಿದ್ದ.

ಹನುಮಕ್ಕನಿಗೆ ಪಿತ್ರಾರ್ಜಿತವಾಗಿ ಬಂದಿದ್ದ ಆಸ್ತಿಯಲ್ಲಿ ಎರಡನೇ ಮಗ ಸಿದ್ದರಾಜು ಪಾಲು ನೀಡಿರಲಿಲ್ಲ. ತನ್ನ ಆಸ್ತಿಯನ್ನೆಲ್ಲಾ ಹಿರಿಯ ಮಗ ಲಕ್ಷ್ಮಪ್ಪನಿಗೆ ಬರೆದಿದ್ದರು. ಆಸ್ತಿ ಸಿಗಲಿಲ್ಲ ಎಂಬ ಕಾರಣಕ್ಕೆ ಕೋಪಗೊಂಡ ಕಿರಾತಕ ಮಗ ಸಿದ್ದರಾಜು ತನ್ನ ಸ್ನೇಹಿತನೊಂದಿಗೆ ಸೇರಿ ಹತ್ಯೆಗೈಯ್ದಿದ್ದ. ಸಂಜೆ ವೇಳೆ ಹನುಮಕ್ಕ ಕೆಲಸ ಮುಗಿಸಿಕೊಂಡು ಬರುವಾಗ ಆಕೆಯೊಡನೆ ಜಗಳ ತೆಗೆದು ಕಲ್ಲಿನಿಂದ ಹೊಡೆದು ಕೊಲೆ ‌ಮಾಡಿ ಹಳ್ಳದಲ್ಲಿ ಹಾಕಿದ್ದನೆಂದು ಪೊಲೀಸ್​ ತನಿಖೆಯಲ್ಲಿ ಸಿದ್ದರಾಜು ಒಪ್ಪಿಕೊಂಡಿದ್ದಾನೆ. ಸದ್ಯ ಆರೋಪಿಗಳನ್ನು ಕೋರ್ಟ್‌ ನ್ಯಾಯಾಂಗ ಬಂಧನಕ್ಕೊಪ್ಪಿಸಿ ಆದೇಶಿಸಿದೆ.

Intro:Body:ರಾಮನಗರ : ಆಸ್ತಿ ವಿವಾದದಿಂದ ವ್ಯಕ್ತಿಯೊಬ್ಬ ಹೆತ್ತ ತಾಯಿಯನ್ನೇ ಕೊಂದಿದ್ದ ಘಟನೆ ಯಲ್ಲಿ ಪ್ರಮುಖ ಆರೋಪಿಗಳಿಬ್ಬರನ್ನು ಪೋಲೀಸರು ಬಂಧಿಸಿದ್ದಾರೆ. ಬಂದಿತ ಆರೋಪಗಳನ್ನು ಮೃತ ಕಾಟನಪಾಳ್ಯ ಗ್ರಾಮದ ಹನುಮಕ್ಕ (76)ರ ಎರಡನೇ ಮಗ ಸಿದ್ದರಾಜು ಅತನ ಸ್ನೇಹಿತ ಲಕ್ಷ್ಮಣ ಎಂಬುವವರನ್ನ ಪೋಲೀಸರು ಬಂದಿಸಿ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ್ದಾರೆ.

ತಾವರಕೆರೆ ಪೋಲೀಸ್ ಠಾಣಾ ವ್ಯಾಪ್ತಿಯ ಮೊಟಗೊಂಡನಹಳ್ಳಿ ಬಳಿಯ ಕಾಟನಪಾಳ್ಯ ಗ್ರಾಮದಲ್ಲಿ ಕಳೆದ ವಾರ ವೃದ್ದೆಯೊಬ್ಬಳ ಶವ ಹಳ್ಳದಲ್ಲಿ ಪತ್ತೆಯಾಗಿತ್ತು ಸ್ಥಳಕ್ಕೆ ದಾವಿಸಿದ್ದ ಪೋಲೀಸರು ಮೃತಳನ್ನು ಕಾಟನಹಳ್ಳಿ ಗ್ರಾಮದ ಹನುಮಕ್ಕ ಎಂದು ಗುರ್ತಿಸಿದ್ದರು. ಈ ಸಂಭಂದ ಆಕೆಯ ಹಿರಿಯ ಮಗ ಲಕ್ಷ್ಮಪ್ಪ ದೂರು ನೀಡಿದ್ದ. ತನಿಖೆ ನಡೆಸಿದ ಪೋಲೀಸರಿಗೆ ಅಲ್ಲಿ ಅಚ್ಚರಿ ಕಾದಿತ್ತು. ಇಷ್ಟಕ್ಕೂ ಈ ಕೊಲೆ ನಡೆದಿದ್ದು ಕೇವಲ ಆಸ್ತಿಗಾಗಿ ಅದೂ ಹೆತ್ತ ತಾಯಿಯನಗನೇ ಕೊಂದಿದ್ದ ಪಾಪಿ ಮಗ. ಪಿತ್ತಾರ್ಜಿತವಾಗಿ ಬಂಧಿದ್ದ ಅಸ್ತಿಯಲ್ಲಿ ಪಾಲು ನೀಡಲಿಲ್ಲ ಇದ್ಧ ಬದ್ದ ಆಸ್ತಿಯನ್ನೆಲ್ಲಾ ಹಿರಿಯ ಮಗ ಲಕ್ಷ್ಮಪ್ಪನಿಗೆ ಬರೆದಿದ್ದಳುಎಂಭಕಾರಣಕ್ಕೇ‌ನಡೆದಿತ್ತು ವೃದ್ದೆಯ ಹತ್ಯೆ.
ಹತ್ಯೆಗೀಡಾದ ಗಂಗಹನುಮಕ್ಕಳಿಗೆ ಇಬ್ಬರು ಮಕ್ಕಳಿದ್ದು ಪಿತ್ರಾರ್ಜಿತವಾಗಿ ಬಂದ ಎಲ್ಲಾ ಆಸ್ತಿಯನ್ನು ಹಿರಿಯ ಮಗನ ಹೆಸರಿಗೆ ಬರೆದು ಎರಡನೇ ಮಗನಿಗೆ ಆಸ್ತಿಯಲ್ಲಿ ಪಾಲು ನೀಡಿರಲಿಲ್ಲ , ಈ ವೈಶಮ್ಯ ಮನದಲ್ಲಿಟ್ಟುಕೊಂಡಿದ್ದ ಆರೋಪಿ ಕೋಪಗೊಂಡಿದ್ದ,ಅಲ್ಲದೆ ಎರಡು ವರ್ಷಗಳ ಹಿಂದೆ ಸಾಂಸಾರಿಕ ಕಲಹದಿಂದ ಬೇಸತ್ತು ಪತಿ ತೊರೆದಿದ್ದ ಹನುಮಕ್ಕ ಗಂಡನ ಮನೆ ತೊರೆದಿದ್ದಳು, ಈ ಎರಡೂ ಕಾರಣಗಳಿಂದ ಆರೋಪಿ ಸಿದ್ದರಾಜು ತನ್ನ ಸ್ನೇಹಿತನೊಂದಿಗೆ ಸೇರಿಕೊಂಡು ಸಂಜೆ ಸಮಯದಲ್ಲಿ ಗಂಗಹನುಮಕ್ಕ ಒಂಟಿಯಾಗಿ ಕೆಲಸ ಮುಗಿಸಿಕೊಂಡು ಬರುವಾಗ ಅಕೆಯೊಡನೆ ಜಗಳ ತೆಗೆದು ಕಡ್ಡಿ ಮತ್ತು ಕಲ್ಲಿನಿಂದ ಹೊಡೆದು ಕೊಲೆ‌ಮಾಡಿ ಹಳ್ಳದಲ್ಲಿ ಹಾಕಿದ್ದಾಗಿ ಪೋಲಿಸ್ ತನಿಖೆಯಲ್ಲಿ ಒಪ್ಪಿಕೊಂಡಿದ್ದಾನೆ. ಆರೋಪಿಗಳನ್ನು ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದ್ದು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ.Conclusion:
ETV Bharat Logo

Copyright © 2024 Ushodaya Enterprises Pvt. Ltd., All Rights Reserved.