ರಾಮನಗರ: ಕಂಕಣ ಸೂರ್ಯಗ್ರಹಣದ ಬಳಿಕ ಹಾವುಗಳು ಸರಸ ಸಲ್ಲಾಪದಲ್ಲಿ ತೊಡಗಿದ್ದ ದೃಶ್ಯ ಈಗ ವೈರಲ್ ಆಗಿದೆ.
ನಗರದ ಹೊರವಲಯದಲ್ಲಿನ ಅರ್ಚಕರಹಳ್ಳಿಯ ಯೂನಿವರ್ಸಲ್ ಶಾಲೆ ಬಳಿ ಎರಡು ಹಾವುಗಳು ಸಲ್ಲಾಪದಲ್ಲಿ ತೊಡಗಿ ನರ್ತಿಸುವ ದೃಶ್ಯ ಕಂಡು ಸಾರ್ವಜನಿಕರು ನಿಬ್ಬೆರಗಾಗಿದ್ದಾರೆ. ಸುಮಾರು ಒಂದು ಗಂಟೆಗೂ ಹೆಚ್ಚುಕಾಲ ಹಾವುಗಳು ಸರಸವಾಡಿವೆ ಎಂದು ಸ್ಥಳೀಯರೊಬ್ಬರು ಆ ದೃಶ್ಯವನ್ನ ಮೊಬೈಲ್‌ನಲ್ಲಿ ಚಿತ್ರೀಕರಿಸಿದ್ದಾರೆ.
ಸುಮಾರು ಹತ್ತು ಅಡಿ ಉದ್ದದ ಈ ಹಾವುಗಳು ಹಸಿರು ಗಿಡಗಳ ನಡುವೆ ನರ್ತನ ಮಾಡಿವೆ.