ರಾಮನಗರ : ಆಸ್ತಿಗಾಗಿ ಹೆತ್ತ ತಂದೆಯನ್ನೇ ಮನೆಯಿಂದ ಹೊರ ಹಾಕಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಮಗನನ್ನು ರಾಮನಗರ ಪುರ ಪೊಲೀಸರು ಬಂಧಿಸಿದ್ದಾರೆ. ಕುಮಾರ್ ಬಂಧಿತ ವ್ಯಕ್ತಿ.
ರಾಮನಗರದ ಸಿಂಗ್ರಿಬೋವಿದೊಡ್ಡಿ ಗ್ರಾಮದಲ್ಲಿ ಆಸ್ತಿಗಾಗಿ ಸ್ವಂತ ಮಗನೇ ತಂದೆಯನ್ನೇ ಮನೆಯಿಂದ ಹೊರಗಟ್ಟಿ ಕ್ರೌರ್ಯ ಮೆರೆದಿದ್ದ. ಕೆಎಸ್ಆರ್ಟಿಸಿ ಚಾಲಕನಾಗಿದ್ದ ಕುಮಾರ್ ಎಂಬಾತನೇ ತಂದೆ ತಿಮ್ಮಯ್ಯ ಎಂಬುವರನ್ನ ಮನೆಯಿಂದ ಹೊರ ಹಾಕಿದ ಪಾಪಿ ಪುತ್ರ.
ಈ ಬಗ್ಗೆ ಸ್ವಯಂ ಪ್ರೇರಿತವಾಗಿ ದೂರು ದಾಖಲಿಸಿಕೊಂಡ ಪೊಲೀಸರು ಪಾಪಿ ಪುತ್ರನನ್ನು ಬಂಧಿಸಿದ್ದಾರೆ.
![Ramnagar](https://etvbharatimages.akamaized.net/etvbharat/prod-images/r-kn-rmn-01-09072021-arrest-son-ka10051_09072021114817_0907f_1625811497_58.jpg)
ಇದನ್ನೂ ಓದಿ : ಆಸ್ತಿಗಾಗಿ ಕ್ರೂರಿಯಾದ ಮಗ, ತಂದೆಯನ್ನೆ ಹೊರಗಟ್ಟಿ ಕ್ರೌರ್ಯ ಮೆರೆದ KSRTC ಚಾಲಕ!