ETV Bharat / state

ಪ್ರಿಂಟೆಕ್ ಪಾರ್ಕ್ ಕ್ಲಸ್ಟರ್​ಗೆ ಸಚಿವ ಜಗದೀಶ್​​ ಶೆಟ್ಟರ್ ಚಾಲನೆ

ಕರ್ನಾಟಕ ರಾಜ್ಯ ಮುದ್ರಣಕಾರರ ಸಂಘದ 15 ವರ್ಷಗಳ ಅವಿರತ ಶ್ರಮದ ಫಲವಾಗಿ ರಾಜ್ಯದಲ್ಲೇ ಮೊದಲ ಪ್ರಿಂಟೆಕ್ ಪಾರ್ಕ್ ಕ್ಲಸ್ಟರ್​ಗೆ ಚಾಲನೆ ನೀಡಲಾಯಿತು.

Jagadish Shettar
ಜಗದೀಶ್​​ ಶೆಟ್ಟರ್
author img

By

Published : Jan 20, 2021, 2:46 PM IST

ರಾಮನಗರ: ಜಿಲ್ಲೆಯ ಹಾರೋಹಳ್ಳಿ ಕೈಗಾರಿಕಾ ಕೇಂದ್ರದಲ್ಲಿ ದೇಶದಲ್ಲೇ ಮೊದಲ ಅತ್ಯಾಧುನಿಕ ಪ್ರಿಂಟೆಕ್ ಪಾರ್ಕ್ ಕ್ಲಸ್ಟರ್ ಲೋಕಾರ್ಪಣೆ ಮಾಡಲಾಗಿದೆ. ಕರ್ನಾಟಕ ರಾಜ್ಯ ಮುದ್ರಣಕಾರರ ಸಂಘದ ವತಿಯಿಂದ ಹಮ್ಮಿಕೊಂಡಿದ್ದ ಕಾರ್ಯಕ್ರಮಕ್ಕೆ ಕೈಗಾರಿಕಾ ಸಚಿವ ಜಗದೀಶ್ ಶೆಟ್ಟರ್ ಚಾಲನೆ ನೀಡಿದರು.

ನಂತರ ಮಾತನಾಡಿದ ಸಚಿವ ಜಗದೀಶ್ ಶೆಟ್ಟರ್, ರಾಜ್ಯದಲ್ಲಿ ಕೈಗಾರಿಕಾ ಸ್ಥಾಪನೆ ಮಾಡಲು ಪ್ರೋತ್ಸಾಹ ನೀಡಲಾಗುವುದು. ಈಗಾಗಲೇ ಕೈಗಾರಿಕೆ ಸ್ಥಾಪಿಸಲು ಇನ್ವೆಸ್ಟ್​ಮೆಂಟ್​ ಅವಕಾಶ ಕಲ್ಪಿಸಲಾಗಿದೆ. ನೂತನ ಕೈಗಾರಿಕಾ ನೀತಿಯು ರಾಜ್ಯದ ಸರ್ವಾಂಗೀಣ ಬೆಳಗವಣಿಗೆಗೆ ಪೂರಕವಾಗಿದೆ. ಸುಲಲಿತ ವ್ಯಾಪಾರ ವಹಿವಾಟು ನಡೆಸುವುದಕ್ಕೆ ನೀತಿ‌ ನಿಯಮಗಳು ಸಾಕಷ್ಟು ಅನುಕೂಲಕರವಾಗಿವೆ. ಈ ನಿಟ್ಟಿನಲ್ಲಿ ಕೈಗಾರಿಕಾ ಸ್ಥಾಪನೆಗೆ ಮುಕ್ತ ಅವಕಾಶ ಮಾಡಲಾಗಿದೆ ಎಂದು ತಿಳಿಸಿದರು.

ಸಚಿವ ಜಗದೀಶ್​​ ಶೆಟ್ಟರ್

ಇದೇ ವೇಳೆ ಕ್ಲಸ್ಟರ್ ಮುಖ್ಯಸ್ಥ ಸಿ.ಆರ್.ಜನಾರ್ಧನ್ ಮಾತನಾಡಿ, ಮುದ್ರಣ ಉದ್ಯಮದಲ್ಲಿ ವಿಶ್ವದಲ್ಲೇ ಭಾರತವು ನಾಲ್ಕನೇ ಸ್ಥಾನದಲ್ಲಿದ್ದು, ದೇಶದಲ್ಲಿ ಸುಮಾರು 3 ಲಕ್ಷಕ್ಕೂ ಹೆಚ್ಚು ಘಟಕಗಳಿದೆ. ಪ್ರಿಂಟೆಕ್ ಪಾರ್ಕ್ ಒಂದು ವಿನೂತನ ಪ್ರಯೋಗವಾಗಿದ್ದು, ಇದು ದೇಶದಲ್ಲಿಯೇ ಪ್ರಥಮವಾಗಿದೆ. ಅಭಿವೃದ್ಧಿ ಕಾರ್ಯಗಳಿಗೆ 100 ಕೋಟಿಗೂ ಹೆಚ್ಚಿನ ಬಂಡವಾಳ ಹೂಡಿ ಅತ್ಯುತ್ತಮ ಮೂಲಭೂತ ಸೌಕರ್ಯಗಳಮ್ನ ಕಲ್ಪಿಸಲಾಗಿದೆ ಎಂದು ತಿಳಿಸಿದರು.

ಈ ಉದ್ಯಮಗಳಿಂದ ಸಾವಿರ ಕೋಟಿಗೂ ಹೆಚ್ಚು ಬಂಡವಾಳ ಹೂಡಿಕೆಯಾಗಿ 5000ಕ್ಕೂ ಹೆಚ್ಚು ಉದ್ಯೋಗಾವಕಾಶ ದೊರೆಯಲಿದೆ. 57 ಎಕರೆ ಪ್ರದೇಶದಲ್ಲಿ ಈ ಮುದ್ರಣ ಕೇಂದ್ರ ಸ್ಥಾಪಿಸಲಾಗಿದೆ. ಕೇಂದ್ರ ಹಾಗೂ ರಾಜ್ಯ ಸರ್ಕಾರದ ನೆರವಿನೊಂದಿಗೆ 27 ಕೋಟಿ ರೂ. ವೆಚ್ಚದಲ್ಲಿ ಜರ್ಮನ್ ಕಂಪನಿಯ ಅತ್ಯಾಧುನಿಕ ಯಂತ್ರೋಪಕರಣಗಳನ್ನು ಇಲ್ಲಿ ಅಳವಡಿಸಿ ಸ್ಥಾಪಿಸಲಾಗಿದೆ. ಮುದ್ರಣ ಕ್ಷೇತ್ರದಲ್ಲಿ ಸಿಎಫ್​ಸಿ ಒಂದು ಮೈಲಿಗಲ್ಲಾಗಿದ್ದು, ಮುದ್ರಣಕಾರರು ಅತೀ ಕಡಿಮೆ ಬೆಲೆಯಲ್ಲಿ ಉತ್ತಮ ಗುಣಮಟ್ಟದ ಸೇವೆ ಪಡೆಯಲು ಅನುಕೂಲಕರವಾಗಿದೆ. ಈ ಕೇಂದ್ರದ ಸದುಪಯೋಗವನ್ನು ರಾಜ್ಯ ಮುದ್ರಣಕಾರರು ಪಡೆಯಬೇಕೆಂದು ಸಿ.ಆರ್.ಜನಾರ್ಧನ್ ಮನವಿ ಮಾಡಿಕೊಂಡರು.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.