ರಾಮನಗರ: ಲವ್ ಯೂ ರಚ್ಚು ಚಿತ್ರೀಕರಣದ ದುರಂತ ಪ್ರಕರಣಕ್ಕೆ ಸಂಬಂಧಿಸಿದಂತೆ 6 ಜನರಿಗೆ ರಾಮನಗರ ಜಿಲ್ಲಾ ಸತ್ರ ನ್ಯಾಯಾಲಯ ಜಾಮೀನು ಮಂಜೂರು ಮಾಡಿದೆ. ನಟ ಅಜಯ್ ರಾವ್, ನಿರ್ದೇಶಕ ಶಂಕರ್, ಕ್ರೇನ್ ಆಪರೇಟರ್ ಮಹದೇವ್, ಸಾಹಸ ನಿರ್ದೇಶಕ ವಿನೋದ್ ಕುಮಾರ್, ಪ್ರೊಡಕ್ಷನ್ ಮ್ಯಾನೇಜರ್ ಫರ್ನಾಂಡೀಸ್, ನಿರ್ಮಾಪಕ ಗುರುದೇಶಪಾಂಡೆಗೆ ನ್ಯಾಯಾಲಯ ಬೇಲ್ ನೀಡಿದೆ.
ವಿನೋದ್ ಕುಮಾರ್, ಶಂಕರ್, ಮಹದೇವ್ ರಾಮನಗರ ಜಿಲ್ಲಾ ಕಾರಾಗೃಹದಲ್ಲಿದ್ದು, ಇವರು ಇಂದು ಅಥವಾ ನಾಳೆ ಬಿಡುಗಡೆಯಾಗುವ ಸಾಧ್ಯತೆ ಇದೆ.
ಲವ್ ಯೂ ರಚ್ಚು ಚಿತ್ರೀಕರಣದ ವೇಳೆ ಫೈಟರ್ ವಿವೇಕ್ ಮೃತಪಟ್ಟ ಘಟನೆ ಸಂಬಂಧ ಗುರುವಾರ ನಟ ಅಜಯ್ ರಾವ್ ಕೂಡ ಠಾಣೆಗೆ ಬಂದು ವಿಚಾರಣೆಗೆ ಹಾಜರಾದರು.
ವಿಚಾರಣೆ ಬಳಿಕ ಮಾತನಾಡಿದ ನಟ ಅಜಯ್ ರಾವ್, ನಾನು ಹೆದರಿಕೊಂಡು ಬೇಲ್ಗೆ ಅಪ್ಲಿಕೇಶನ್ ಹಾಕಿಲ್ಲ. ಅದ್ಯಾರೋ ಮಹಾನ್ ಭಾವರು ಹೇಳ್ತಿದ್ದಾರೆ. ನಾನು SSLC ಓದಿದ್ದೇನೆ ಅಷ್ಟೇ, ಪಿಯುಸಿ ಕೂಡ ಓದಿಲ್ಲ ಎನ್ನುತ್ತಿದ್ದಾರೆ. ಹೆದರಿಕೆ ಇದ್ದಿದ್ದರೇ ನಾನು ಓದು ನಿಲ್ಲಿಸಿ ಬೆಂಗಳೂರಿಗೆ ಬರುತ್ತಿರಲಿಲ್ಲ. ನಾನು ನನಗಾಗಿ ಬೇಲ್ಗೆ ಅಪ್ಲಿಕೇಶನ್ ಹಾಕಿಲ್ಲ. ನನ್ನನ್ನ ನಂಬಿ ಕೋಟ್ಯಾಂತರ ರೂಪಾಯಿ ಬಂಡಾವಾಳ ಹಾಕಿದ್ದಾರೆ. ಇನ್ನು ಹಲವು ಸಿನಿಮಾಗಳು ಬಾಕಿ ಇವೆ. ರೀ ರಿಲೀಸ್ ಸಿನಿಮಾ ಇದೇ, ರಿಲೀಸ್ಗೆ ರೆಡಿಯಾಗಿರುವ ಸಿನಿಮಾಗಳು ಇದ್ದಾವೆ ಎಂದರು.
ಸಿನಿಮಾ ಶೂಟಿಂಗ್ ವೇಳೆ ಶಾರ್ಟ್ ಸರ್ಕ್ಯೂಟ್: 'ಲವ್ ಯೂ ರಚ್ಚು' ಸಿನಿಮಾ ಫೈಟರ್ ಸಾವು