ETV Bharat / state

ಉಕ್ರೇನ್​ನಲ್ಲಿ ಸಿಲುಕಿದ ರಾಮನಗರದ ಇಬ್ಬರು ವಿದ್ಯಾರ್ಥಿಗಳ ಮಾಹಿತಿ ಕಲೆಹಾಕಿದ ಹೆಚ್​ಡಿಕೆ

author img

By

Published : Feb 24, 2022, 5:57 PM IST

Updated : Feb 24, 2022, 6:58 PM IST

H D Kumaraswamy reaction on Karnataka students in Ukraine: ಉಕ್ರೇನ್ ಹಾಗೂ ರಷ್ಯಾ ನಡುವೆ ಯುದ್ಧ ಪ್ರಾರಂಭವಾಗಿದ್ದು, ಈಗಾಗಲೇ ರಾಜ್ಯದ ನೂರಾರು ವಿದ್ಯಾರ್ಥಿಗಳು ಕೂಡ ಸಿಲುಕುಕೊಂಡಿದ್ದಾರೆ. ಈ ಬಗ್ಗೆ ಅಲ್ಲಿರುವ ಭಾರತೀಯ ರಾಯಭಾರಿಗೆ ಸಂದೇಶ ರವಾನಿಸಿರುವುದಾಗಿ ಮಾಜಿ ಸಿಎಂ ಹೆಚ್​ ಡಿ ಕುಮಾರಸ್ವಾಮಿ ಹೇಳಿದ್ದಾರೆ.

ರಾಮನಗರದ ಇಬ್ಬರು ವಿದ್ಯಾರ್ಥಿಗಳು ಉಕ್ರೇನ್​ನಲ್ಲಿ

ರಾಮನಗರ: ರೇಷ್ಮೆನಗರಿ ರಾಮನಗರ ಜಿಲ್ಲೆಯ ಇಬ್ಬರು ವಿದ್ಯಾರ್ಥಿನಿಯರು ಉಕ್ರೇನ್​ನಲ್ಲಿ ವಿದ್ಯಾಭ್ಯಾಸ ಮಾಡಲು ಹೋಗಿದ್ದು, ಯುದ್ಧಭೀತಿ ಎದುರಿಸುವಂತಾಗಿದೆ. ಚನ್ನಪಟ್ಟಣ ತಾಲೂಕಿನ ತಿಮ್ಮಸಂದ್ರ ಗ್ರಾಮದ ವಿದ್ಯಾರ್ಥಿನಿ ನಿವೇದಿತಾ ಹಾಗೂ ರಾಮನಗರದ ಐಜೂರು ಮೂಲದ ಆಯೆಷಾ ಉಕ್ರೇನ್​ನಲ್ಲಿ ವಿದ್ಯಾಭ್ಯಾಸ‌ ಮಾಡುತ್ತಿದ್ದಾರೆ.

ಈ ಸಂಬಂಧ ಮಾಜಿ ಮುಖ್ಯಮಂತ್ರಿ ಕುಮಾರಸ್ವಾಮಿ ಮಾತನಾಡಿ, ನಮ್ಮ ಚನ್ನಪಟ್ಟಣದ ತಿಮ್ಮಸಂದ್ರ ಗ್ರಾಮದ ವಿದ್ಯಾರ್ಥಿನಿ ಉಕ್ರೇನ್​ನಲ್ಲಿ ಸಿಲುಕಿದ್ದಾಳೆ. ನಾನು ಆ ವಿದ್ಯಾರ್ಥಿನಿಯ ಜತೆಗೆ ಮಾತನಾಡಿದ್ದೆ. ಬರಲು ಆಗುತ್ತಿಲ್ಲ, ಎಲ್ಲಾ ಏರ್​ಪೋರ್ಟ್​​ಗಳು ಬಂದ್ ಆಗಿವೆ ಎಂದು ತಿಳಿಸಿದ್ದಾರೆ ಎಂದು ಮಾಜಿ ಸಿಎಂ ಹೆಚ್.ಡಿ ಕುಮಾರಸ್ವಾಮಿ ಮಾಹಿತಿ ನೀಡಿದರು.

ಉಕ್ರೇನ್​ನಲ್ಲಿ ಸಿಲುಕಿದ ರಾಮನಗರದ ಇಬ್ಬರು ವಿದ್ಯಾರ್ಥಿಗಳ ಮಾಹಿತಿ ಕಲೆಹಾಕಿದ ಹೆಚ್​ಡಿಕೆ

ಉಕ್ರೇನ್ ಹಾಗೂ ರಷ್ಯಾ ನಡುವೆ ಯುದ್ದ ಪ್ರಾರಂಭವಾಗಿದ್ದು, ಈಗಾಗಲೇ ರಾಜ್ಯದ ನೂರಾರು ವಿದ್ಯಾರ್ಥಿಗಳು ಕೂಡ ಸಿಲುಕುಕೊಂಡಿದ್ದಾರೆ. ಈ ಬಗ್ಗೆ ಅಲ್ಲಿನ ರಾಯಭಾರಿಗೆ ಸಂದೇಶ ರವಾನಿಸಿದ್ದೇನೆ. ಅಲ್ಲಿ ನಮ್ಮ ಕ್ಷೇತ್ರದ ಚನ್ನಪಟ್ಟಣದ ವಿದ್ಯಾರ್ಥಿನಿ‌ ವ್ಯಾಸಂಗ ಮಾಡ್ತಿದ್ದಾಳೆ. ಇದಲ್ಲದೆ ರಾಜ್ಯದ ತುಂಬಾ ಜನ ವಿದ್ಯಾರ್ಥಿಗಳು, ವಿದ್ಯಾಭ್ಯಾಸಕ್ಕೆ ಹೋದವರು ಇದ್ದಾರೆ ಎಂದು ಹೇಳಿದರು.

ಇದನ್ನೂ ಓದಿ: ಉಕ್ರೇನಿನಲ್ಲಿರುವ ವಿದ್ಯಾರ್ಥಿಗಳನ್ನು ದೇಶಕ್ಕೆ ಕರೆತರಲು ಸರ್ವಪ್ರಯತ್ನ: ಸಚಿವ ಕಾರಜೋಳ ಅಭಯ

ರಾಜ್ಯ ಸರ್ಕಾರ ಇದರ ಮಾಹಿತಿಯನ್ನು ನಿಧಾನವಾಗಿ ಕೊಡ್ತಿದೆ. ಆದರೆ, ಸರ್ಕಾರದ ಮಾಹಿತಿಗಿಂತಲೂ, ನನ್ನ ಬಳಿ ಇರುವ ಮಾಹಿತಿ ಸ್ಪೀಡಾಗಿದೆ ಎಂದು ಇದೇ ವೇಳೆ ಹೆಚ್​ಡಿಕೆ ಹೇಳಿದರು.

Last Updated : Feb 24, 2022, 6:58 PM IST

For All Latest Updates

TAGGED:

ETV Bharat Logo

Copyright © 2024 Ushodaya Enterprises Pvt. Ltd., All Rights Reserved.