ETV Bharat / state

ಸರ್ಕಾರ ವಿಧಾನಸೌಧದಿಂದ‌ ಮಣಿಪಾಲ್ ಆಸ್ಪತ್ರೆಗೆ ಸರ್ಕಾರ ಶಿಫ್ಟ್​ ಆಗಿದೆ ; ವಾಟಾಳ್ ನಾಗರಾಜ್‌ - ಕನ್ನಡಪರ ಹೋರಾಟಗಾರ ವಾಟಾಳ್ ನಾಗರಾಜ್‌ ಆ

ಕೊರೊನಾ ಹೆಸರಲ್ಲಿ‌ ನಡೆಯುತ್ತಿರುವ ಅಕ್ರಮಗಳ ತನಿಖೆಯಾಗಲೇಬೇಕು. ಕೂಡಲೇ ನ್ಯಾಯಾಂಗ ತನಿಖೆಗೆ ಆದೇಶಿಸಬೇಕು, ಹಾಲಿ ನ್ಯಾಯಾಧೀಶರು ತನಿಖೆ ನೇತೃತ್ವ ವಹಿಸಬೇಕು ಎಂದು ಒತ್ತಾಯಿಸಿದರು..

Vatal Nagaraj
ವಾಟಾಳ್ ನಾಗರಾಜ್‌
author img

By

Published : Aug 8, 2020, 6:18 PM IST

ರಾಮನಗರ : ರಾಜ್ಯದಲ್ಲಿ ಕೊರೊನಾ ಸೋಂಕು ತಗುಲಿ ಮೂರು ಸಾವಿರ ಜನರು ಸಾವನ್ನಪ್ಪಿದ್ದಾರೆ. ರಾಜ್ಯದಲ್ಲಿ ಗಂಭೀರ ಪರಿಸ್ಥಿತಿ ಎದುರಾಗಿದೆ. ಸರ್ಕಾರದ ಬೇಜವಾಬ್ದಾರಿತನ ಹಾಗೂ ಆಸ್ಪತ್ರೆಗಳ ಅವ್ಯವಸ್ಥೆ ಬಗ್ಗೆ ಉನ್ನತ ಮಟ್ಟದ ತನಿಖೆಯಾಗಬೇಕು. ಕೊರೊನಾ ಸೋಂಕಿತರಾಗಿ ಸತ್ತವರಿಗೆ ಐದು ಲಕ್ಷ ಪರಿಹಾರ ನೀಡಬೇಕು ಎಂದು ಕನ್ನಡಪರ ಹೋರಾಟಗಾರ ವಾಟಾಳ್ ನಾಗರಾಜ್‌ ಆಗ್ರಹಿಸಿದರು.

ಸರ್ಕಾರ ವಿಧಾನಸೌಧದಿಂದ‌ ಮಣಿಪಾಲ್ ಆಸ್ಪತ್ರೆಗೆ ಸರ್ಕಾರ ಶಿಫ್ಟ್​ ಆಗಿದೆ.. ವಾಟಾಳ್ ನಾಗರಾಜ್‌

ನಗರದ ಬೆಂಗಳೂರು ಮೈಸೂರು ಹೆದ್ದಾರಿಯ ಐಜೂರು ವೃತ್ತದಲ್ಲಿ ಪ್ರತಿಭಟನೆ‌ ನಡೆಸಿದ ಕನ್ನಡಪರ ಹೋರಾಟಗಾರ ವಾಟಾಳ್ ನಾಗರಾಜ್ ಸರ್ಕಾರದ ನಡೆ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು. ಇದೇ ವೇಳೆ ಖಾಸಗಿ ಆಸ್ಪತ್ರೆಗಳು, ಇಬ್ಬರು ಆರೋಗ್ಯ ಸಚಿವರು ಇದ್ದಾರೆ. ಅವರೂ ಕೂಡ ಸಮರ್ಪಕವಾಗಿ ಕಾರ್ಯ ನಿರ್ವಹಿಸುತ್ತಿಲ್ಲ. ಹೆಸರಿಗೆ ಇಬ್ಬರು ಆರೋಗ್ಯ ಸಚಿವರು ಆದ್ರೆ ಸುರೇಶ್ ಕುಮಾರ್ ಆರ್. ಅಶೋಕ್ ಕೂಡ ಆರೋಗ್ಯ ಸಚಿವರಾಗಿದ್ದಾರೆ. ಸರ್ಕಾರದ ಮಂತ್ರಿಗಳು ಸಿಎಂ ಮಾತು ಕೇಳ್ತಿಲ್ಲ. ಸರ್ಕಾರ ಯೋಗ್ಯರಲ್ಲದವರು ಮಂತ್ರಿಗಳಾಗಿದ್ದಾರೆ. ಕೂಡಲೇ ಮಂತ್ರಿಮಂಡಲ ಪುನರ್ ರಚಿಸಲಿ ಎಂದು ಆಗ್ರಹಿಸಿದರು.

ಸರ್ಕಾರ ನಿರ್ಲಿಪ್ತ : ವಿಧಾನಸೌಧದಿಂದ‌ ಮಣಿಪಾಲ್ ಆಸ್ಪತ್ರೆಗೆ ಸರ್ಕಾರ ಶಿಫ್ಟ್ ಆಗಿದೆ. ಸಿಎಂಗೆ ಸೋಂಕು ಕಾಣಿಸಿಕೊಂಡಿದ್ದು, ಎಲ್ಲಾ ಅಧಿಕಾರಿ ಆಡಳಿತವರ್ಗ ಕೂಡ ಸೋಂಕಿನ ಭೀತಿಯಲ್ಲಿದೆ ಎಂದು ವಾಟಾಳ್ ನಾಗರಾಜ್ ವ್ಯಂಗ್ಯವಾಡಿದರು.

ಕೊರೊನಾ ಹೆಸರಲ್ಲಿ‌ ನಡೆಯುತ್ತಿರುವ ಅಕ್ರಮಗಳ ತನಿಖೆಯಾಗಲೇಬೇಕು. ಕೂಡಲೇ ನ್ಯಾಯಾಂಗ ತನಿಖೆಗೆ ಆದೇಶಿಸಬೇಕು, ಹಾಲಿ ನ್ಯಾಯಾಧೀಶರು ತನಿಖೆ ನೇತೃತ್ವ ವಹಿಸಬೇಕು ಎಂದು ಒತ್ತಾಯಿಸಿದರು. ಮಳೆ ಹಾವಳಿ ಉತ್ತರ ಕರ್ನಾಟಕದಲ್ಲಿ ಹೆಚ್ಚಾಗಿದೆ. ರಾಜ್ಯದ ಉತ್ತರ ಭಾಗವೇ ಮುಳುಗಡೆಯಾಗುತ್ತಿದೆ. ಕಳೆದ ಬಾರಿ ನೂರಾರು ಜನ ಸಾವನ್ನಪ್ಪಿದ್ದು, ಜಾನುವಾರು ಕಳೆದುಕೊಂಡಿದ್ದಾರೆ. ಅದರ ಪರಿಹಾರ ಇನ್ನೂ ಸಿಕ್ಕಿಲ್ಲ. ಅದರ ಬಗ್ಗೆ ಸರ್ಕಾರ ಯಾವುದೇ ಕ್ರಮ‌ಕೈಗೊಂಡಿಲ್ಲ. ಉತ್ತರ ಕರ್ನಾಟಕದ ಮಂತ್ರಿಗಳು ಹಾಗೂ ಶಾಸಕರುಗಳ ರಾಜೀನಾಮೆ ನೀಡುವಂತೆ ಒತ್ತಾಯಿಸುತ್ತೇನೆ ಎಂದರು.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.