ETV Bharat / state

ದೇಶದಲ್ಲಿ ಕೋಮುವಾದಿಗಳೆಂದರೆ ಅದು ಕಾಂಗ್ರೆಸ್​ನವರು: ಡಿಸಿಎಂ ಅಶ್ವತ್ಥ ನಾರಾಯಣ - DCM Ashwath Narayan news

ಯಾರೇ ಆಗಲಿ ಕಾನೂನು ಕೈಗೆತ್ತಿಕೊಳ್ಳುವವರನ್ನ ಖಂಡಿಸಬೇಕು. ಫೇಸ್​ಬುಕ್​ನಲ್ಲಿ ಪೋಸ್ಟ್ ಮಾಡಿದ್ದು ಕಾಂಗ್ರೆಸ್ ಕಾರ್ಯಕರ್ತ. ಆದರೆ ಕೆಪಿಸಿಸಿ ಅಧ್ಯಕ್ಷರು ಇನ್ನೂ ನವೀನ್ ಯಾವ ಪಕ್ಷದವನು ಅಂತಾ ಹುಡುಕುತಿದ್ದಾರೆ ಎಂದು ಡಿಸಿಎಂ ಅಶ್ವತ್ಥ ನಾರಾಯಣ ಲೇವಡಿ ಮಾಡಿದರು.

dcm
ಅಶ್ವತ್ಥ್ ನಾರಾಯಣ
author img

By

Published : Aug 15, 2020, 3:00 PM IST

ರಾಮನಗರ: ಬೆಂಗಳೂರು ಗಲಭೆಗೆ ಕಾರಣವಾದ ಕಾಂಗ್ರೆಸ್ ಪಕ್ಷದ ಕಾರ್ಯಕರ್ತನೋರ್ವನ ಪೋಸ್ಟ್ ಅವರಿಗೆ ನುಂಗಲಾರದ ತುತ್ತಾಗಿದೆ. ಎಸ್​ಡಿಪಿಐ ಹಾಗೂ ಕಾಂಗ್ರೆಸ್ ಈಗ ಸ್ಪರ್ಧೆಯಲ್ಲಿ ಕಳೆದುಹೋಗಿವೆ. ಇದರಿಂದಾಗಿ ಕಾಂಗ್ರೆಸ್ ಪಕ್ಷ ಹತಾಶವಾಗಿದೆ. ಅಲ್ಲದೆ ತಪ್ಪು ಮಾಡಿ ಸಿಲುಕಿಕೊಂಡಿದ್ದಾರೆ ಎಂದು ಕಾಂಗ್ರೆಸ್ ವಿರುದ್ಧ ಡಿಸಿಎಂ ಅಶ್ವತ್ಥ್ ನಾರಾಯಣ ವಾಗ್ದಾಳಿ ನಡೆಸಿದರು.

ನಗರದ ಜಿಲ್ಲಾ ಕ್ರೀಡಾಂಗಣದಲ್ಲಿ ಸ್ವಾತಂತ್ರ್ಯೋತ್ಸವ ದಿನಾಚರಣೆ ಅಂಗವಾಗಿ ಧ್ವಜಾರೋಹಣ ನೆರವೇರಿಸಿ ಬಳಿಕ ಮಾಧ್ಯಮದವರೊಡನೆ ಮಾತನಾಡಿದ ಅವರು, ಕಾಂಗ್ರೆಸ್ ತಪ್ಪು ಮಾಡಿ ಸಿಕ್ಕಿಹಾಕಿಕೊಂಡಿದೆ. ಈಗ ಆ ಕಡೆ ಈ ಕಡೆ, ಬಿಜೆಪಿ ಕಡೆ ನೋಡುತ್ತಿದ್ದಾರೆ. ಅವರು ಎತ್ತ ನೋಡಿದ್ರು ತಪ್ಪಿಸಿಕೊಳ್ಳಲು ಆಗುತ್ತಿಲ್ಲ. ಅವರು ತಪ್ಪಿಸಿಕೊಳ್ಳುವುದನ್ನ ಬಿಟ್ಟು ಪರಿಸ್ಥಿತಿಯನ್ನ ಎದುರಿಸಲಿ ಎಂದು ಸಲಹೆ ನೀಡಿದರು.

ಯಾರೇ ಆಗಲಿ ಕಾನೂನು ಕೈಗೆತ್ತಿಕೊಳ್ಳುವವರನ್ನ ಖಂಡಿಸಬೇಕು. ಫೇಸ್​ಬುಕ್​ನಲ್ಲಿ ಪೋಸ್ಟ್ ಮಾಡಿದ್ದು ಕಾಂಗ್ರೆಸ್ ಕಾರ್ಯಕರ್ತ. ಅಲ್ಲದೆ ಆರೋಪಿ ನವೀನ್ ಯಾರು, ಯಾವ ಪಕ್ಷದವನು ಅಂತಾ ಈಗಾಗಲೇ ಗೊತ್ತಾಗಿದೆ. ಕೆಪಿಸಿಸಿ ಅಧ್ಯಕ್ಷರು ನವೀನ್ ಯಾವ ಪಕ್ಷದವನು ಅಂತಾ ಹುಡುಕುತಿದ್ದಾರೆ ಎಂದು ಲೇವಡಿ ಮಾಡಿದರು.

ಪಿಎಫ್ಐ ಹಾಗೂ ಎಸ್​ಡಿಪಿಐ ಮೇಲಿನ ಕೇಸ್​ಗಳನ್ನ ವಿತ್ ಡ್ರಾ ಮಾಡಿದ್ದು ಸಿದ್ದರಾಮಯ್ಯ ಅವರ ಸರ್ಕಾರವೇ ಹೊರತು ನಾವಲ್ಲ. ದೇಶದಲ್ಲಿ ಕೋಮುವಾದಿಗಳು ಯಾರು ಅಂದರೆ ಅದು ಕಾಂಗ್ರೆಸ್ ಎಂದು ಗಂಭೀರ ಆರೋಪ ಮಾಡಿದರು. ಈಗ ನಡೆದಿರುವ ಘಟನೆಯಿಂದ ಕಾನೂನು ಸುವ್ಯವಸ್ಥೆ ತೀರಾ ಹದಗೆಟ್ಟಿದ್ದು, ಎಸ್​ಡಿಪಿಐ ಹಾಗೂ ಪಿಎಫ್ಐ ಸಂಘಟನೆಗಳನ್ನ ಬ್ಯಾನ್ ಮಾಡಲು ನಮ್ಮ ಸರ್ಕಾರ ಚಿಂತನೆ ಮಾಡುತ್ತಿದೆ. ಅಲ್ಲದೆ ಅವರ ಮೇಲಿನ ಪ್ರಕರಣಗಳ ಬಗ್ಗೆ ಮಾಹಿತಿ ಕಲೆಹಾಕಲಾಗುತ್ತಿದೆ. ಆದಷ್ಟು ಬೇಗ ಕ್ರಮ ಕೈಗೊಳ್ಳಲಾಗುವುದು ಎಂದು ತಿಳಿಸಿದರು.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.