ETV Bharat / state

ಸರಿಯಾಗಿ ಕಚೇರಿಗೆ ಬಾರದೆ ಸಂಬಳಕ್ಕೆ ಕೈಒಡ್ಡುವ ಅಧಿಕಾರಿಗಳಿಗೆ ದಂಡಾಸ್ತ್ರ ಬೀಸಿದ ಸಿಇಒ ಇಕ್ರಂ

author img

By

Published : Feb 20, 2020, 3:11 PM IST

ಸರ್ಕಾರಿ ಕೆಲಸ ದೇವರ ಕೆಲಸ. ಆದರೆ, ಸಮಯಕ್ಕೆ ಸರಿಯಾಗಿ ಕಚೇರಿಗೆ ಬರದೆ ಸಂಬಳಕ್ಕೆ ಮಾತ್ರ ಕೈಒಡ್ಡುವ ಅಧಿಕಾರಿಗಳಿಗೆ ದಂಡಾಸ್ತ್ರ ಪ್ರಯೋಗ ಮಾಡಲು ಜಿಲ್ಲೆಯ ಜಿ.ಪಂ ಸಿಇಒ ಮುಂದಾಗಿದ್ದಾರೆ.

CEO punishing late coming officers by cutting salary
ಸರಿಯಾಗಿ ಕಚೇರಿಗೆ ಬಾರದೆ ಸಂಬಳಕ್ಕೆ ಕೈವೊಡ್ಡುವ ಅಧಿಕಾರಿಗಳಿಗೆ ದಂಡಾಸ್ತ್ರ ಬೀಸಿದ ಸಿಇಒ ಇಕ್ರಂ

ರಾಮನಗರ: ಸರ್ಕಾರಿ ಕೆಲಸ ದೇವರ ಕೆಲಸ. ಆದರೆ, ಸಮಯಕ್ಕೆ ಸರಿಯಾಗಿ ಕಚೇರಿಗೆ ಬರದೆ ಸಂಬಳಕ್ಕೆ ಮಾತ್ರ ಕೈಒಡ್ಡುವ ಅಧಿಕಾರಿಗಳಿಗೆ ದಂಡಾಸ್ತ್ರ ಪ್ರಯೋಗ ಮಾಡಲು ಜಿಲ್ಲೆಯ ಜಿ.ಪಂ.ಸಿಇಒ ಮುಂದಾಗಿದ್ದಾರೆ.

ಕೆಲಸಕ್ಕೆ ನನ್ನ ಕರೀಬೇಡ, ಊಟಕ್ಕೆ ನನ್ನ ಮರೀಬೇಡ ಅನ್ನೋ ಹಾಗೆ ಸರ್ಕಾರಿ ಇಲಾಖೆಯಲ್ಲಿ ಕೆಲಸ ಮಾಡುವ ಎಷ್ಟೋ ಅಧಿಕಾರಿಗಳು ಸಮಯಕ್ಕೆ ಸರಿಯಾಗಿ ಕಚೇರಿಗೆ ಬರೋದಿಲ್ಲ ಅನ್ನೋ ಆರೋಪವಿದೆ. ಈ ಪರಿಸ್ಥಿತಿಯನ್ನು ಹತೋಟಿಗೆ ತರುವ ನಿಟ್ಟಿನಲ್ಲಿ ಜಿಲ್ಲೆಯ ಜಿ. ಪಂ ಸಿಇಒ ಕಚೇರಿಗೆ ತಡವಾಗಿ ಬರುವ ಅಧಿಕಾರಿಗಳಿಗೆ ದಂಡಾಸ್ತ್ರ ಪ್ರಯೋಗ ಮಾಡಿದ್ದಾರೆ. ಕೆಲಸಕ್ಕೆ ತಡವಾಗಿ ಬರುವ ಅಧಿಕಾರಿಗಳ ವೇತನ ಕಟ್ ಮಾಡಲು ಮುಂದಾಗಿದ್ದು, ಜಿಲ್ಲಾ ಪಂಚಾಯ್ತಿ ವ್ಯಾಪ್ತಿಗೆ ಬರುವ ಇಲಾಖೆಯ ಅಧಿಕಾರಿಗಳಿಗೆ ಮೂಗುದಾರ ಹಾಕಿದೆ. ಇದು ಸಾರ್ವಜನಿಕರ ಪ್ರಶಂಸೆಗೂ ಕಾರಣವಾಗಿದೆ.

ಸರ್ಕಾರ ಈಗಾಗಲೇ ಎಲ್ಲಾ ಸರ್ಕಾರಿ ಕಚೇರಿಯಲ್ಲಿ ಬಯೋಮೆಟ್ರಿಕ್ ಕಡ್ಡಾಯಗೊಳಿಸಿದೆ. ಆದರೂ ಅಧಿಕಾರಿಗಳು ಕಚೇರಿಗೆ ಬರಲು ಕಳ್ಳಾಟವಾಡುತ್ತಿದ್ದರು. ಇದನ್ನ ಮನಗಂಡ ಐಎಎಸ್ ಅಧಿಕಾರಿ ಇಕ್ರಂ ಹೊಸ ಪ್ರಯೋಗಕ್ಕೆ ಮುಂದಾಗಿದ್ದಾರೆ. ಈಗಾಗಲೇ ಅಧಿಕಾರಿಗಳಿಗೆ ಸೂಚನೆ ಕೊಟ್ಟಿರುವ ಸಿಇಒ ತಿಂಗಳಲ್ಲಿ ಮೊದಲ ಬಾರಿಗೆ ತಡವಾಗಿ ಬರುವ ಅಧಿಕಾರಿ ಅಥವಾ ಸಿಬ್ಬಂದಿಗೆ ಎಚ್ಚರಿಕೆಯ ನೋಟಿಸ್ ನೀಡಲಾಗುತ್ತಿದೆ. ಎರಡನೇ ಬಾರಿ ತಡವಾದರೆ, ಇಡೀ ದಿನದ ವೇತನಕ್ಕೆ ಕತ್ತರಿ ಹಾಕಲಾಗುತ್ತದೆ ಎಂದು ಸೂಚನೆ ನೀಡಿದ್ದಾರೆ. ಹೀಗೆ, ಎಷ್ಟು ದಿನ ತಡವಾಗಿ ಬರುತ್ತಾರೋ ಅಷ್ಟು ದಿನಗಳ ವೇತನ ಸರ್ಕಾರದ ಪಾಲಾಗಲಿದೆ ಎಂದು ತಿಳಿಸಿದ್ದಾರೆ.

ಈ ಕ್ರಮ ಈಗಾಗಲೇ ಜಾರಿಯಲ್ಲಿದ್ದು, ಬಯೋಮೆಟ್ರಿಕ್‌ನ ಹಾಜರಾತಿಯನ್ನು ಪ್ರತಿ ವಾರಕ್ಕೊಮ್ಮೆ ಮಾಹಿತಿ ಪಡೆಯುತ್ತಿರುವ ಇಕ್ರಂ, ತಡವಾಗಿ ಬರುವ ಕೆಲವರ ಇಡೀ ದಿನದ ವೇತನಕ್ಕೆ ಕತ್ತರಿ ಹಾಕಿದ್ದಾರೆ. ಹೀಗೆ, ಎಷ್ಟು ಭಾರಿ ತಡವಾಗಿ ಬರುತ್ತಾರೋ, ಅಷ್ಟು ದಿನಗಳ ಸಂಬಳ ಜಿ.ಪಂನಲ್ಲೇ ಉಳಿಯಲಿದೆ ಎಂದು ಜಿಲ್ಲಾ ಪಂಚಾಯ್ತಿ ಸಿಇಒ ಇಕ್ರಂ ತಿಳಿಸಿದರು.

ಇನ್ನು ಗ್ರಾಮ ಪಂಚಾಯತಿ ಮಟ್ಟದಲ್ಲಿನ ಪಿಡಿಒಗಳು ಫಿಲ್ಡ್ ವರ್ಕ್ ಹೆಸರೇಳಿಕೊಂಡು ಕಚೇರಿಗೆ ಬರುವುದನ್ನೇ ಬಿಟ್ಟಿದ್ದರು. ಆದ್ರೆ, 10 ಗಂಟೆಗೆ ಮುಂಚಿತವಾಗಿ ಫೀಲ್ಡ್ ಕೆಲಸ ಇದ್ದರೆ ಆ ಮಾಹಿತಿಯನ್ನ ಸಂಬಂಧಪಟ್ಟವರು ಸಿಇಒ ಕಚೇರಿಗೆ ದಾಖಲೆ ಸಮೇತ ತಲುಪಿಸಬೇಕು ಎಂದು ಸೂಚಿಸಲಾಗಿದ್ದು, ಈ ಹೊಸ ಆದೇಶದಿಂದ ಎಲ್ಲಾ ಸಿಬ್ಬಂದಿಗಳು ಹಾಗೂ ಅಧಿಕಾರಿಗಳು ಎಚ್ಚೆತ್ತುಕೊಂಡಿದ್ದಾರೆ.

ಒಟ್ಟಾರೆ ಕಳ್ಳಾಟವಾಡಿಕೊಂಡು ಕಚೇರಿಗೆ ತಡವಾಗಿ ಬರುವ ಅಧಿಕಾರಿಗಳಿಗೆ ವೇತನ ಕಟ್ ಮಾಡುವ ಮೂಲಕ ಸಿಇಒ ಚಾಟಿ ಬೀಸಿದ್ದಾರೆ. ಈಗಾಗಲೇ ಜಿಪಂ ನೌಕಕರಿಗೆ ಈ ಆದೇಶ ಅನ್ವಯಗೊಂಡಿದೆ. ಇದು ರಾಜ್ಯದ್ಯಂತ ವಿಸ್ತರಿಸಿದ್ರೆ, ರಾಮನಗರ ಸಿಇಒ ಮಾಡಿರುವ ಕೆಲಸ ಮಾದರಿಯಾಗಲಿದೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.