ETV Bharat / state

ರಾಮನಗರದಲ್ಲಿ 838 ವಾಹನ ಸೀಜ್​: 68 ಎಫ್​ಐಆರ್​ ದಾಖಲು

author img

By

Published : Apr 11, 2020, 3:44 PM IST

ರಾಮನಗರ ಜಿಲ್ಲೆಯಲ್ಲಿ ಲಾಕ್​ಡೌನ್​ ಸಂದರ್ಭದಲ್ಲಿ ಒಟ್ಟು 838 ವಾಹನಗಳನ್ನು ಜಪ್ತಿ ಮಾಡಲಾಗಿದ್ದು, 68 ಎಫ್​ಐಆರ್ ದಾಖಲಿಸಲಾಗಿದೆ ಎಂದು ಜಿಲ್ಲಾ ಪೊಲೀಸ್​ ವರಿಷ್ಠಾಧಿಕಾರಿ ತಿಳಿಸಿದ್ದಾರೆ.

838 vehicle seezed in ramangara
ಡಾ. ಅನೂಪ್ ಎ. ಶೆಟ್ಟಿ

ರಾಮನಗರ: ಜಿಲ್ಲೆಯಲ್ಲಿ ಲಾಕ್​ಡೌನ್ ಇದ್ದರೂ ಉಲ್ಲಂಘನೆ ಮಾಡಿ ಓಡಾಡುತ್ತಿದ್ದಕ್ಕೆ ಸಂಬಂಧಿಸಿದಂತೆ ಒಟ್ಟು 838 ವಾಹನಗಳನ್ನು ಸೀಜ್ ಮಾಡಲಾಗಿದೆ. ಅಲ್ಲದೆ ಇವುಗಳ ಹೊರತಾಗಿ ಒಟ್ಟು 68 ಎಫ್​ಐಆರ್ ದಾಖಲಾಗಿದೆ ಎಂದು ಪೊಲೀಸ್ ವರಿಷ್ಠಾಧಿಕಾರಿ ಡಾ. ಅನೂಪ್ ಎ. ಶೆಟ್ಟಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಇದಷ್ಟೇ ಅಲ್ಲದೆ ರಾಮನಗರ ಜಿಲ್ಲೆಯಲ್ಲಿ ಸರ್ಕಾರಿ ಆದೇಶದ ಉಲ್ಲಂಘನೆಗೆ ಸಂಬಂಧಿಸಿದಂತೆ ಒಟ್ಟು 24 ಜನರ ಮೇಲೆ 24 ಪ್ರಕರಣಗಳು ದಾಖಲಾಗಿವೆ. ಅವುಗಳ ಪೈಕಿ ರಾಮನಗರ ಗ್ರಾಮಾಂತರದಲ್ಲಿ 2, ಹಾರೋಹಳ್ಳಿ -4, ಕಗ್ಗಲಿಪುರ- 2, ಮಾಗಡಿ-1, ಕುಂಬಳಗೂಡು-2, ತಾವರೇಕೆರೆ-2, ಚನ್ನಪಟ್ಟಣ ನಗರ -2, ಚನ್ನಪಟ್ಟಣ ಪಶ್ಚಿಮ-3, ಚನ್ನಪಟ್ಟಣ ರೂರಲ್-2, ಅಕ್ಕೂರು -2, ಎಂ.ಕೆ. ದೊಡ್ಡಿಯಲ್ಲಿ2 ಪ್ರಕರಣ ದಾಖಲಾಗಿದೆ. ಇವುಗಳ ಹೊರತಾಗಿ ಏ.10ರಂದು ಒಂದೇ ದಿನದಲ್ಲಿ ಜಿಲ್ಲೆಯಲ್ಲಿ 118 ವಾಹನಗಳನ್ನು ವಶಪಡಿಸಿಕೊಳ್ಳಲಾಗಿದೆ ಎಂದು ಡಾ. ಅನೂಪ್ ಶೆಟ್ಟಿ ತಿಳಿಸಿದ್ದಾರೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.