ರಾಮನಗರ: ಕೇಂದ್ರ ಸರ್ಕಾರ ನಿರ್ಧಾರ ಮಾಡಿರುವಂತೆ ಲಾಕ್ಡೌನ್ ಮುಂದುವರೆಸಲು ರಾಜ್ಯ ಸರ್ಕಾರವನ್ನು ಸಂಸದ ಡಿ.ಕೆ.ಸುರೇಶ್ ಒತ್ತಾಯಿಸಿದರು.
ಬಿಡದಿಯಲ್ಲಿ ಇಂದು ಬಡವರಿಗೆ ಆಹಾರ ಪದಾರ್ಥಗಳ ಕಿಟ್ ವಿತರಣೆ ಮಾಡಿ ಮಾತನಾಡಿದ ಅವರು, ರಾಮನಗರ ಹಾಗೂ ಆನೇಕಲ್ನಲ್ಲಿ ಹೂ ಬೆಳೆ ಬೆಳೆದು ರೈತರು 500 ಕೋಟಿಗೂ ಹೆಚ್ಚು ನಷ್ಟ ಅನುಭವಿಸಿದ್ದಾರೆಂದು ಡಿ.ಕೆ.ಸುರೇಶ್ ವಿಷಾದ ವ್ಯಕ್ತಪಡಿಸಿದರು. ಕೊರೊನಾ ಎಫೆಕ್ಟ್ನಿಂದಾಗಿ ಈ ಪರಿಸ್ಥಿತಿ ಎದುರಾಗಿದೆ. ಮುಖ್ಯವಾಗಿ ಈಗ ದೇವಸ್ಥಾನಗಳು, ಸಮಾರಂಭಗಳು, ಮದುವೆಗಳು ನಡೆಯುತ್ತಿಲ್ಲ.
ಅಲ್ಲದೆ ಬೆಳೆಯನ್ನ ರಫ್ತು ಮಾಡಲು ಸಾಧ್ಯವಾಗುತ್ತಿಲ್ಲ. ಈ ಸಂಬಂಧ ನಾವು ಈಗಾಗಲೇ ಸಿಎಂ ಗಮನಕ್ಕೆ ತಂದಿದ್ದೇವೆ. ಹಾಗಾಗಿ ಕೂಡಲೇ ನಷ್ಟಕ್ಕೊಳಗಾಗಿರುವ ರೈತರ ಬಗ್ಗೆ ಗಮನಹರಿಸಬೇಕೆಂದು ಒತ್ತಾಯ ಮಾಡಿದರು. ಇನ್ನು ಈಗಾಗಲೇ ನಾನು ರಾಮನಗರ ಜಿಲ್ಲೆ ಹಾಗೂ ಹೊರ ಭಾಗದ 300 ರೈತರ ತೋಟಗಳಿಗೆ ಭೇಟಿ ಕೊಟ್ಟಿದ್ದೇನೆ.
2,500 ಟನ್ಗೂ ಅಧಿಕ ತರಕಾರಿ, ಹಣ್ಣು ಖರೀದಿ ಮಾಡಿ ಜಿಲ್ಲೆಯ ಜನರಿಗೆ ಎಲ್ಲವನ್ನು ಹಂಚುತ್ತಿದ್ದೇವೆ. ಹಾಗೆಯೇ ಪಕ್ಷದ ಮುಖಂಡರಿಗೂ ಖರೀದಿ ಮಾಡಲು ಮನವಿ ಮಾಡಿದ್ದೇನೆಂದು ಸಂಸದಡಿ.ಕೆ.ಸುರೇಶ್ ಹೇಳಿದರು.